ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

By Suvarna News  |  First Published Feb 6, 2020, 2:26 PM IST

ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆಂತದ ಘಟನೆ ಕೇಳಿರಬಹುದು. ಇದೀಗ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. ಈ ಸಂದರ್ಭ ಜನ ಆಂಬ್ಯುಲೆನ್ಸ್‌ಗೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.


ಮಂಗಳೂರು(ಫೆ.06): ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆಂತದ ಘಟನೆ ಕೇಳಿರಬಹುದು. ಇದೀಗ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ.]

ಈ ಸಂದರ್ಭ ಜನ ಆಂಬ್ಯುಲೆನ್ಸ್‌ಗೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಹೃದಯ ಕಾಯಿಲೆ ಚಿಕಿತ್ಸೆಗೆ ಮಂಗಳೂರಿನಿಂದ ಬೆಂಗಳೂರಿಗೆ ಝಿರೋ ಟ್ರಾಫಿಕ್‌ನಲ್ಲಿ ಮಗುವನ್ನು ಕರೆತರಲಾಗಿದೆ.

Latest Videos

undefined

ಹಾವೇರಿ To ಹುಬ್ಬಳ್ಳಿ ಜೀರೋ ಟ್ರಾಫಿಕ್‌: ಪುಟ್ಟ ಕಂದಮ್ಮನ ಪ್ರಾಣ ಉಳಿಸಿದ ಪೊಲೀಸರು

ಆಂಬುಲೆನ್ಸ್ ಮೂಲಕ ಹಸುಗೂಸನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆದೊಯ್ಯುತ್ತಿರುವ ಸಿಬ್ಬಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸುತ್ತಿದ್ದಾರೆ.

40 ದಿನದ ಸೈಫುಲ್ ಅಝ್ಮಾನ್ ಎಂಬ ಮಗು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನಿಂದ ಶಿರಾಡಿ ಘಾಟ್, ಸಕಲೇಶಪುರ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಮಗುವನ್ನು ಕರೆ ತರಲಾಗುತ್ತಿದೆ.

ಮುಧೋಳದಿಂದ ಬೆಳಗಾವಿ: ಹಸುಳೆ ಜೀವ ರಕ್ಷಣೆಗೆ ಝೀರೋ ಟ್ರಾಫಿಕ್

ಉಪ್ಪಿನಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ 75 ರ ಮೂಲಕ ಹಾಸನ ಕಡೆ ಅಂಬ್ಯುಲೆನ್ಸ್ ಸಂಚರಿಸಿದ ವೇಳೆ ಸಾರ್ವಜನಿಕರು ನೆರವಾಗಿದ್ದಾರೆ. ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ ಕಡೆಗಳಲ್ಲಿ ಪೋಲೀಸರು, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಸಂಚಾರ ಸುಗಮಗೊಳಿಸಿ ಅಂಬ್ಯುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

"

click me!