30 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ: ಸಚಿವ ಹಾಲಪ್ಪ ಆಚಾರ್‌

By Kannadaprabha News  |  First Published Jun 7, 2022, 3:33 PM IST

*   ಆರ್‌ಡಿಸಿಸಿ ಬ್ಯಾಂಕ್‌ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಆಚಾರ್‌
*   ಆಯೋಜಕರ ವಿರುದ್ಧ ಹರಿಹಾಯ್ದ ಸಚಿವ ಆಚಾರ್‌
*   750 ಮಹಿಳಾ ಸ್ವ ಸಹಾಯ ಸಂಘಗಳಿಗೆ ಪ್ರತಿ ಸಂಘಕ್ಕೆ ಒಂದು ಲಕ್ಷ ಸಹಾಯಧನ


ಕುಕನೂರು(ಜೂ.07):  ಸಹಕಾರಿ ಕ್ಷೇತ್ರ ಪ್ರಾಮಾಣಿಕತೆಯ ಕೈಗನ್ನಡಿ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಪಟ್ಟಣದ ಎಪಿಎಂಸಿಯಲ್ಲಿ ಕುಕನೂರಿನ ಆರ್‌ಡಿಸಿಸಿ ಬ್ಯಾಂಕ್‌ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 1983ರಲ್ಲಿ ನಾನು ಆರ್‌ಡಿಸಿಸಿ ಬ್ಯಾಂಕ್‌ನ ನಿರ್ದೇಶಕನಾದಾಗ ಕ್ಷೇತ್ರದಲ್ಲಿ ಮೂಧೋಳ, ತಾಳಕೇರಿ, ಮಸಬಹಂಚಿನಾಳ ಮೂರು ಕೃಷಿ ಪತ್ತಿನ ಸಹಕಾರ ಸಂಘಗಳಿದ್ದವು. ಆದರೆ ಸದ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಕೃಷಿ ಪತ್ತಿನ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆರ್‌ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷನಾದಾಗ ಮುಚ್ಚುವ ಹಂತದಲ್ಲಿದ್ದ ಬ್ಯಾಂಕ್‌ನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿದೆ. ಹಲವಾರು ಬ್ಯಾಂಕ್‌ಗಲ ಮಾದರಿ ಆಗಿ ತೆಗೆದುಕೊಂಡವು. ಬೆಂಗಳೂರಿನ ಯಾವುದೇ ಕಾರ್ಪೋರೆಟ್‌ ಸಂಸ್ಥೆಗೆ ಸಾಟಿ ಇಲ್ಲದಂತೆ ರಾಯಚೂರಿನಲ್ಲಿ ಬ್ಯಾಂಕಿನ ಕಟ್ಟಡ ಇದೆ. ಜಿಲ್ಲೆಯ ರೈತರಿಗೆ ಬೀಜ, ರಸಗೊಬ್ಬರ ಅಭಾವ ಆಗದಂತೆ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ರೈತರಿಗೆ ರಾಜ್ಯದಲ್ಲಿ 30 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ರಾಜ್ಯದ 750 ಮಹಿಳಾ ಸ್ವ ಸಹಾಯ ಸಂಘಗಳಿಗೆ ಪ್ರತಿ ಸಂಘಕ್ಕೆ ಒಂದು ಲಕ್ಷ ರು. ಧನಸಹಾಯ ಸರ್ಕಾರ ನೀಡಿದೆ. ಕ್ಷೇತ್ರದಲ್ಲಿ 60 ಮಹಿಳಾ ಸಂಘಗಳಿಗೆ ಸಹಾಯಧನ ನೀಡಲಾಗಿದೆ ಎಂದರು.

Tap to resize

Latest Videos

ಕೊಪ್ಪಳ ನಗರಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್‌ ಸದಸ್ಯರು..!
 

ಸಂಸದ ಸಂಗಣ್ಣ ಕರಡಿ ಮಾತನಾಡಿ, ಆರ್‌ಡಿಸಿಸಿ ಬ್ಯಾಂಕ್‌ ರೈತರ ಬ್ಯಾಂಕ್‌ ಆಗಿದೆ. ರೈತರಿಗೆ ಅನುಕೂಲ ಆಗುವ ಹಾಗೆ ಅವಶ್ಯಕ ವೇಳೆಗೆ ಸಾಲ ಸೌಲಭ್ಯ ಒದಗಿಸುತ್ತಿದೆ. ಸಚಿವ ಹಾಲಪ್ಪ ಆಚಾರ್‌ ಅವರು ಆರ್‌ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅದನ್ನು ಕಟ್ಟಿಬೆಳೆಸಿದ್ದಾರೆ. ಅದರಿಂದ ಇಂದು ಲಕ್ಷಾಂತರ ಜನ ಅನುಕೂಲ ಪಡೆಯುತ್ತಿದ್ದಾರೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಪ್ಪಳಕ್ಕೆ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯ, ನವಲಿ ಸಮಾನಾಂತರ ಜಲಾಶಯ, ಅಂಜನಾದ್ರಿ ಬೆಟ್ಟಕ್ಕೆ .100 ಕೋಟಿ ನೀಡಿದ್ದಾರೆ. ಇದರಿಂದ ಜಿಲ್ಲೆ ಇನ್ನಷ್ಟುಅಭಿವೃದ್ಧಿ ಆಗಲಿದೆ ಎಂದರು.
ಸಿಂಗಟಾಲೂರು ಏತ ನೀರಾವರಿ ಬಗ್ಗೆ ಸಿಎಂ ಅವರಿಗೆ ಒತ್ತಡ ಹೇರುತ್ತೇವೆ. ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮುಂದಾಗುತ್ತೇವೆ. ಕೃಷ್ಣ ಬೀ ಸ್ಕೀಂ ಅಡಿಗಲ್ಲನ್ನು ಅಡ್ಡಗಲ್ಲು ಎಂದು ಜರೆದಿದ್ದ ಕಾಂಗ್ರೆಸ್ಸಿಗರು ಸದ್ಯ ಆ ಯೋಜನೆ ತಾವೇ ಮಾಡಿದ್ದು ಅನ್ನುತ್ತಿರುವುದು ದುರದೃಷ್ಟಕರ ಎಂದರು.

Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು

ಈ ವೇಳೆ ನಾನಾ ಮಹಿಳಾ ಸಹಕಾರ ಸಂಘಗಳಿಗೆ .1 ಲಕ್ಷದ ಸಹಾಯಧನದ ಚೆಕ್‌ ವಿತರಿಸಿದರು. ಆರ್‌ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ್‌, ನಿರ್ದೇಶಕರಾದ ಗೌರಾ ಬಸವರಾಜ, ಶರಣಪ್ಪ ಬಣ್ಣದಬಾವಿ, ಮುಖ್ಯವ್ಯವಸ್ಥಾಪಕ ಎಸ್‌. ಗಿರಡ್ಡಿ, ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಪ್ರಮುಖರಾದ ಶಂಭು ಜೋಳದ, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ರಥನ ದೇಸಾಯಿ, ಸಂಗಯ್ಯ ಬಿನ್ನಾಳ, ಬಸವನಗೌಡ ತೊಂಡಿಹಾಳ, ಶರಣಪ್ಪ ಈಲಗೇರ, ಮಂಜುನಾಥ ನಾಡಗೌಡರ್‌ ಇತರರಿದ್ದರು.

ಆಯೋಜಕರ ವಿರುದ್ಧ ಹರಿಹಾಯ್ದ ಸಚಿವ ಆಚಾರ್‌

ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ವೇದಿಕೆ ಮುಂದೆ ಕೂರಲು ಕುರ್ಚಿ ಕೊರತೆ ಕಂಡುಬಂತು. ಅಲ್ಲದೇ ಸಣ್ಣ ಪ್ರಮಾಣದಲ್ಲಿ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿತ್ತು. ವೇದಿಯಲ್ಲೂ ಕೆಲವೆ ಗಣ್ಯರಿಗೆ ಅವಕಾಶ ಇರುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ರೀತಿ ಅನೂಕೂಲ ಇದ್ದರೂ ಈ ರೀತಿ ನಾಮಾಕಾವಸ್ತೆ ವ್ಯವಸ್ಥೆ ಮಾಡಿರುವುದು ಸರಿಯಲ್ಲ ಎಂದು ಭಾಷಣದುದ್ದಕ್ಕೂ ಕಾರ್ಯಕ್ರಮ ವ್ಯವಸ್ಥಾಪಕರ ವಿರುದ್ಧ ಸಚಿವ ಆಚಾರ್‌ ಹರಿಹಾಯ್ದರು. ಅಲ್ಲದೆ ಕೆಲವು ಗಣ್ಯರನ್ನು ಕೆಳಗಡೆಯೇ ನಿಲ್ಲಿಸಿ ಮಾತನಾಡುವ ಸಂದರ್ಭ ಎದುರಾಗಿದೆ. ಅದಕ್ಕೆ ಕ್ಷಮೆ ಇರಲಿ ಎಂದರು.

click me!