ಬಳ್ಳಾರಿಗೂ ಕಾಲಿಟ್ಟ ಧರ್ಮ ದಂಗಲ್: ಮಸೀದಿ, ಮಂದಿರಗಳಲ್ಲಿ ಮೈಕ್ ಬಳಸಲು ಅನುಮತಿ ಕಡ್ಡಾಯ

By Girish Goudar  |  First Published Jun 7, 2022, 12:26 PM IST

*  ಪೊಲೀಸ್‌ ಇಲಾಖೆಯಿಂದ 685 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ 
*  ಅನುಮತಿ ಪಡೆಯದೇ ಮೈಕ್ ಬಳಸಿದ್ರೆ ಕೇಸ್ ದಾಖಲಿಸಲು ನಿರ್ಧಾರ
*  ಕರಾವಳಿಯಿಂದ ಬಳ್ಳಾರಿಗೆ ಹಬ್ಬಿದ ಕಿಡಿ
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌,  ಬಳ್ಳಾರಿ

ಬಳ್ಳಾರಿ(ಜೂ.07):  ಮಂಗಳೂರು ಮತ್ತು ಕರಾವಳಿ ಭಾಗದಲ್ಲಿ ಆರಂಭವಾಗಿದ್ದ ಧರ್ಮ ದಂಗಲ್ ಇದೀಗ ಬಿಸಿಲ ನಾಡು ಬಳ್ಳಾರಿವರೆಗೂ ವ್ಯಾಪಿಸಿದೆ. ಈವರೆಗೂ ಬಳ್ಳಾರಿಯಲ್ಲಿ ಯಾವುದೇ ರೀತಿಯ ಅಹಿತಕರ  ಘಟನೆಗಳು ನಡೆಯದೇ ಇದ್ರೂ ಇದೀಗ ಬಳ್ಳಾರಿ ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಮಸೀದಿಗಳಲ್ಲಿನ ಆಜಾನ್ ದಂಗಲ್ ಈಗ ದಿನೇ ದಿನೇ ಹೆಚ್ಚಾಗುತ್ತಿದೆ. ಮಸೀದಿಗಳಲ್ಲಿನ ಮೈಕ್ ಗಳ ವಿರುದ್ಧ ಭಜನೆ ಅಭಿಯಾನ ಸಹ ಶುರುವಾಗಿದೆ. ಧರ್ಮ ದಂಗಲ್ ದಿನೇ ದಿನೇ ತಾರಕ್ಕೇರುತ್ತಿದ್ದಂತೆ ಕೋಮು ಸೌಹಾರ್ದತೆಯ ಪ್ರತೀಕವಾಗಿರುವ ಗಣಿನಾಡಿನಲ್ಲಿ ಮಸೀದಿ ಮಂದಿರಗಳಿಗೂ ಮೈಕ್ ಬಳಸಲು ಅನುಮತಿ ಪಡೆಯುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.   

Latest Videos

undefined

ಮಸೀದಿ - ಮಂದಿರಗಳಿಗೂ ನೋಟಿಸ್

ಹಿಜಾಬ್, ಹಲಾಲ್, ವ್ಯಾಪಾರ ಕದನದ ಬೆನ್ನಲ್ಲೆ ರಾಜ್ಯದಲ್ಲಿ ಧ್ವನಿ ವರ್ಧಕ ದಂಗಲ್  ಜೋರಾಗಿದೆ.  ಮಸೀದಿಗಳ ಮೇಲಿನ ಮೈಕ್ ತಗೆಯುವಂತೆ ಹಿಂದು ಸಂಘಟನೆಗಳು ಹೋರಾಟ ಮಾಡ್ತಿವೆ. ಮಸೀದಿಗಳ ಮೈಕ್ ವಿರುದ್ದ ಭಜನೆ ಅಭಿಯಾನ ಸಹ ನಡೆಯುತ್ತಿದೆ. ಆದ್ರೇ ಇದ್ಯಾವುದು ಕೂಡ ಅಷ್ಟಾಗಿ ಬಳ್ಳಾರಿಯಲ್ಲಿ ನಡೆದಿಲ್ಲ. ಆದ್ರೇ, ಮುಂದೆ ಈ ರೀತಿಯ ಸಮಸ್ಯೆ ಉದ್ಭವಿಸಬಹುದೆನ್ನುವ ನಿರೀಕ್ಷೆ ಹಿನ್ನೆಲೆ ಬಳ್ಳಾರಿಯ ಪೊಲೀಸರು ಮಸೀದಿ-ಮಂದಿರಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ 685 ಮಸೀದಿ-ಮಂದಿರಗಳಿಗೆ ಬಳ್ಳಾರಿ ಜಿಲ್ಲಾ ಪೊಲೀಸರು ಧ್ವನಿವರ್ಧಕ ಬಳಕೆ ಮಾಡಲು ಅನುಮತಿ ಕಡ್ಡಾಯ ಪಡೆಯುವಂತೆ ನೋಟಿಸ್ ಜಾರಿ ಮಾಡಿದ್ದಾರೆ.  

ಪೊಲಿಸರಿಗೇ ಚಳ್ಳೆಹಣ್ಣು ತಿನ್ನಿಸಿ ಖದೀಮರ ಕಳ್ಳತನ: ಮುಸಗುಗಳ್ಳರ ಕಾಟಕ್ಕೆ ಬೆಸ್ತುಬಿದ್ದ ಬಳ್ಳಾರಿ ಜನತೆ..!

ಸೌಂಡ್ ಸಿಸ್ಟಮ್  ಬಳಸಲು ನಿಯಮ

ಮಸೀದಿ-ಮಂದಿರಗಳಲ್ಲೂ ಮೈಕ್ ಬಳಸಲು‌ ಮತ್ತು ಎಷ್ಟು ಡಿಸೆಬಲ್ ಸೌಂಡ್ ಬಳಸಬಹುದು ಅನ್ನೋ ಕುರಿತಂತೆ ಮಾಹಿತಿ ಸಮೇತ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ ಬೆನ್ನಲ್ಲೆ ಈಗಾಗಲೇ 108 ಧಾರ್ಮಿಕ ಕೇಂದ್ರದವರು ಅನುಮತಿ  ಪಡೆದುಕೊಂಡಿದ್ದಾರೆ. 2 ವರ್ಷಕ್ಕೆ ಅನುಗುಣವಾಗುವಂತೆ ಪೊಲೀಸ ಇಲಾಖೆ ಅನುಮತಿ ಪಡೆಯಲು ಡಿವೈಎಸ್ ಪಿ ಹಂತದ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದು. ನಿಗದಿತ ಅವಧಿಯೊಳಗೆ ಮಸೀದಿ-ಮಂದಿರಗಳ ಮುಖ್ಯಸ್ಥರು ಪರ್ಮಿಷನ್ ಪಡೆಯದಿದ್ರೆ ಕೇಸ್ ದಾಖಲಿಸಲು ಪೊಲೀಸರು  ಎಚ್ಚರಿಕೆ ನೀಡಿದ್ದಾರೆ.  ಅಲ್ಲದೇ ಜನವಸತಿ ಪ್ರದೇಶ, ಮಾರ್ಕೆಟ್ ಪ್ರದೇಶ, ಜನಸಂದಣಿ ಇರೋ ಪ್ರದೇಶ, ಗ್ರಾಮೀಣ ಮತ್ತು ನಗರ‌ ಪ್ರದೇಶ ಹೀಗೆ ನಾಲ್ಕಾರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪರ್ಮಿಷನ್ ಪಡೆಯಬೇಕಾಗಿದ್ದು. ನಿಗದಿತ ಶುಲ್ಕದೊಂದಿಗೆ ಅನುಮತಿ ಪಡೆಯಲು ಕಡ್ಡಾಯಗೊಳಿಸಿ ಪೊಲೀಸ ಇಲಾಖೆ ನೋಟಿಸ್ ಜಾರಿ ಮಾಡಿರೋ ಬಗ್ಗೆ ಬಳ್ಳಾರಿ ಎಸ್ಪಿ ಸೈದುಲು ಅಡಾವತ್  ಸುವರ್ಣ ನ್ಯೂಸ್ಗೆ ಸ್ಪಷ್ಟಪಡಿಸಿದ್ದಾರೆ.

ಕರಾವಳಿಯಿಂದ ಬಳ್ಳಾರಿಗೆ ಹಬ್ಬಿದ ಕಿಡಿ

ಕರಾವಳಿ ಪ್ರದೇಶದಿಂದ ಶುರುವಾದ ಧರ್ಮ ದಂಗಲ್ ರಾಜ್ಯದೆಲ್ಲೆಡೆ ಕಿಚ್ಚು ಹೊತ್ತಿಸಿದ ಬೆನ್ನಲ್ಲೇ ಬಳ್ಳಾರಿಯಲ್ಲಿ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದೆ. ಆದ್ರೇ ಕೋಮು ಸೌಹಾರ್ದತೆಗೆ ಹೆಸರಾಗಿರುವ ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ನೋಟಿಸ್ ಬೇಕಿತ್ತಾ ಅಂತಾ ಧಾರ್ಮಿಕ ಮುಖಂಡರು ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ಎಲ್ಲರಿಗೂ ಕಾನೂನು ಒಂದೇ ಎಲ್ಲ ಮಸೀದಿ-ಮಂದಿರಗಳು ಅನುಮತಿ ಪಡೆಯಬೇಕೆಂದು ಪೊಲೀಸ್‌ ಇಲಾಖೆ ಹೇಳ್ತಿದೆ. ಇದೂವರೆಗೂ ತಣ್ಣಗಿದ್ದ ಬಳ್ಳಾರಿ ಜಿಲ್ಲೆಯಲ್ಲೂ ನೋಟಿಸ್ ನೀಡಿದ ನಂತರ ಅದೇನಾಗುತ್ತೋ ಅನ್ನೋದನ್ನ ಕಾಯ್ದುನೋಡಬೇಕಿದೆ.
 

click me!