ಕಾಂಗ್ರೆಸ್‌ ಒಂದು ಸಮು​ದಾ​ಯಕ್ಕೆ ಮೀಸ​ಲಾದ ಪಕ್ಷ​ವ​ಲ್ಲ: ಜಮೀರ್‌

Kannadaprabha News   | Asianet News
Published : Mar 07, 2021, 09:59 AM IST
ಕಾಂಗ್ರೆಸ್‌ ಒಂದು ಸಮು​ದಾ​ಯಕ್ಕೆ ಮೀಸ​ಲಾದ ಪಕ್ಷ​ವ​ಲ್ಲ: ಜಮೀರ್‌

ಸಾರಾಂಶ

ಅಹಿಂದ ವರ್ಗದ ಏಳ್ಗೆಗೆ ಶ್ರಮಿಸುವುದೇ ಕಾಂಗ್ರೆಸ್‌ ಮೂಲ ಉದ್ದೇಶ| ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಸೂಟಿಯವರಿಗೆ ಆಶೀರ್ವದಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು| ಆರೇಕುರಹಟ್ಟಿ ಗ್ರಾಮದ ಮಸೀದಿಗಳಿಗೆ ಭೇಟಿ ನೀಡಿದ ಜಮೀರ್‌ ಅಹ್ಮದ ಖಾನ್‌| 

ನವಲಗುಂದ(ಮಾ.07): ಕಾಂಗ್ರೆಸ್‌ ಯಾವುದೇ ಒಂದೇ ಸಮುದಾಯಕ್ಕೆ ಮೀಸಲಾದ ಪಕ್ಷವಲ್ಲ. ಎಲ್ಲ ವರ್ಗವನ್ನು ಜತೆಗೂಡಿಸಿಕೊಂಡು ಹೋಗುತ್ತದೆ ಎಂದು ಶಾಸಕ ಜಮೀರ್‌ ಅಹ್ಮದ ಖಾನ್‌ ಹೇಳಿದ್ದಾರೆ. 

ಪಟ್ಟಣದ ಕಳ್ಳಿಮಠ ಓಣಿಯ ಮಸೀದಿ ಸೇರಿದಂತೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಲಾಲಗುಡಿ ಮಾರುತಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಅವರು, ದೇವಸ್ಥಾನದ ಜಿರ್ಣೋದ್ಧಾರಕ್ಕೆ ದೇಣಿಗೆ ನೀಡಿದರು. ಅಹಿಂದ ವರ್ಗದ ಏಳ್ಗೆಗೆ ಶ್ರಮಿಸುವುದೇ ಕಾಂಗ್ರೆಸ್‌ ಮೂಲ ಉದ್ದೇಶವಾಗಿದೆ ಎಂದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಸೂಟಿಯವರಿಗೆ ಆಶೀರ್ವದಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.

ಸಾಲ ವಸೂಲಾತಿಗಾಗಿ ಹಸುಗೂಸು ಮಾರಾಟ! 6 ಅರೆಸ್ಟ್

ಇದೇ ಸಂದರ್ಭದಲ್ಲಿ ತಾಲೂಕಿನ ಹಳ್ಳಿಕೇರಿ, ಹಾಲಕುಸುಗಲ್‌, ಆರೇಕುರಹಟ್ಟಿ ಗ್ರಾಮದ ಮಸೀದಿಗಳಿಗೆ ಭೇಟಿ ನೀಡಿದರು. ಜಿಲ್ಲಾ ಯುಥ್‌ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ ಇದ್ದರು.

ಈ ವೇಳೆ ವಿಪ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಕೆ.ಎನ್‌. ಗಡ್ಡಿ, ಜಿಲ್ಲಾ ಯುಥ ಕಾಂಗ್ರೆಸ್‌ ಅಧ್ಯಕ್ಷ ವಿನೋದ್‌ ಅಸೂಟಿ, ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ್‌, ವರ್ಧಮಾನಗೌಡ ಹಿರೇಗೌಡರ, ಉಸ್ಮಾನ ಬಬರ್ಚಿ, ರೈಮಾನಸಾಬ್‌ ಧಾರವಾಡ, ಸೈಪುದ್ದೀನ ಅವರಾದಿ, ಅಬ್ಬಾಸ ದೇವರಿಡು, ಸಕ್ರಪ್ಪ ಹಳ್ಳದ, ನಾರಾಯಣ ರಂಗರಡ್ಡಿ ಉಪಸ್ಥಿತರಿದ್ದರು.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!