ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಪೂರ್ಣ ಪ್ರಮಾಣದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ| ಕುಮಾರಸ್ವಾಮಿ ಒತ್ತಡದಲ್ಲಿಯೇ ಕೆಲಸ ಮಾಡಿಕೊಂಡು, ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಹೆಚ್ಚು ಗಮನ ನೀಡಬೇಕಾಯಿತು| ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಜತೆ ಬೆರೆಯುವ ಕೆಲಸ ನಮ್ಮಿಂದ ಸಾಧ್ಯವಾಗಲಿಲ್ಲ: ದತ್ತ|
ಗಂಗಾವತಿ(ಡಿ.25): ಬಿಜೆಪಿ ಜತೆ ಜೆಡಿಎಸ್ ವಿಲೀನವಾಗುವುದಿಲ್ಲ ಎಂದು ಜೆಡಿಎಸ್ ನಾಯಕ ವೈಎಸ್‌ವಿ ದತ್ತ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ತತ್ವ- ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಜೆಡಿಎಸ್ ರೈತರ ಪರ, ಬಡವರ ಪರವಾಗಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಈಗಾಗಲೇ ಇದರ ಬಗ್ಗೆ ವಿಲೀನ ಇಲ್ಲ ಎಂದು ಹೇಳಿದ್ದಾರೆ. ಜೆಡಿಎಸ್‌ನ್ನು ಯಾವುದೇ ಕಾರಣಕ್ಕೂ ಬಿಜೆಪಿಯಲ್ಲಿ ವಿಲೀನಗೊಳಿಸುವುದಿಲ್ಲ ಪುನರುಚ್ಚರಿಸಿದ್ದಾರೆ.
10ನೇ ಬಾರಿ ಗ್ರಾಪಂ ಅಖಾಡಕ್ಕೆ ಸ್ಪರ್ಧೆ: ಸೋಲಿಲ್ಲದ ಸರದಾರನಾದ 78ರ ‘ಯುವಕ’..!
ಜಾತಿ, ಸಮುದಾಯ, ಹಣ ರಾಜಕಾರಣದಲ್ಲಿ ಬೆರೆಯುತ್ತಿದೆ. ಹಾಗಾಗಿ ನಮಗೆ ವಿಧಾನ ಪರಿಷತ್ ಸ್ಥಾನ ಕೈ ತಪ್ಪಲು ಕಾರಣ ಇರಬಹುದು. ಜತೆಗೆ ಇದು ಪಕ್ಷದ ತೀರ್ಮಾನ. ಅಲ್ಲಿ ಇಕ್ಕಟ್ಟು, ಬಿಕ್ಕಟ್ಟು ಇರುತ್ತದೆ. ಅದರಿಂದ ನನಗೇನು ಬೇಜಾರಿಲ್ಲ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರನ್ನು ಗುರುತಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಪೂರ್ಣ ಪ್ರಮಾಣದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಆವಾಗ ಸಮ್ಮಿಶ್ರ ಸರ್ಕಾರವಿತ್ತು. ಆಗ ಕುಮಾರಸ್ವಾಮಿ ಅವರು ಒತ್ತಡದಲ್ಲಿಯೇ ಕೆಲಸ ಮಾಡಿಕೊಂಡು, ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಹೆಚ್ಚು ಗಮನ ನೀಡಬೇಕಾಯಿತು. ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಜತೆ ಬೆರೆಯುವ ಕೆಲಸ ನಮ್ಮಿಂದ ಸಾಧ್ಯವಾಗಲಿಲ್ಲ ಎಂದರು.