ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯುವಕರು| ಮಾರಕ ಕೊರೋನಾ ಕಾಯಿಲೆ ನಾಶವಾಗಲೆಂದು ದೇವರಲ್ಲಿ ಬೇಡಿಕೊಂಡ ಜನತೆ| ಯಾದಗಿರಿ ನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ|
ಯಾದಗಿರಿ(ಮಾ.06): ಕೊರೋನಾ ವೈರಸ್ ತಡೆಗಟ್ಟಲು ಜನತೆ ದೇವರ ಮೊರೆ ಹೋದ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ನಗರದ ಸ್ಟೇಷನ್ ರಸ್ತೆಯ ಸಮೀಪದ ಅಂಬಾ ಭವಾನಿ ದೇವಸ್ಥಾನದಲ್ಲಿ ಯುವಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗೆಳೆಯರ ಬಳಗದ ವತಿಯಿಂದ ಯುವಕರು ಭವಾನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿ ಮಾರಕ ಕೊರೋನಾ ಕಾಯಿಲೆ ನಾಶವಾಗಲೆಂದು ಬೇಡಿಕೊಂಡಿದ್ದಾರೆ. ಕೊರೋನಾ ವೈರಸ್ ಚೀನಾ ಸೇರಿದಂತೆ ಭಾರತದ ಹಲವು ಕಡೆ ಆತಂಕ ಸೃಷ್ಟಸಿದೆ. ಪಕ್ಕದ ಹೈದ್ರಾಬಾದ್‌ನಲ್ಲಿ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ದೇವರ ಮೊರೆ ಹೋಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂಬಾ ಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಯುವಕರು ದೀರ್ಘ ದಂಡ ನಮಸ್ಕಾರ ಹಾಕಿ ಕೊರೋನಾ ವೈರಸ್ ನಾಶವಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಕೊರೋನಾ ವೈರಸ್‌ನಿಂದ ವಿಶ್ವದ ಜನತೆ ಆತಂಕದಿಂದ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಕೆಲ ದಿನಗಳಿಂದ ದೇಶಾದ್ಯಂತ ಜನತೆ ಕೊರೋನಾ ವೈರಸ್ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.