ಪ್ರೀತಿ ನಿರಾಕರಿಸಿದ್ದಕ್ಕೆ ಅಶ್ಲೀಲ ಚಿತ್ರ ಸೃಷ್ಟಿಸಿದ ಕಿಡಿಗೇಡಿ

Kannadaprabha News   | Asianet News
Published : Sep 22, 2021, 07:24 AM IST
ಪ್ರೀತಿ ನಿರಾಕರಿಸಿದ್ದಕ್ಕೆ ಅಶ್ಲೀಲ ಚಿತ್ರ ಸೃಷ್ಟಿಸಿದ ಕಿಡಿಗೇಡಿ

ಸಾರಾಂಶ

ತನ್ನ ಪ್ರೀತಿ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಗೆಳತಿ ಹಾಗೂ ಆಕೆಯ ತಾಯಿಯ ಭಾವಚಿತ್ರವನ್ನು ಆಶ್ಲೀಲವಾಗಿ ಸೃಷ್ಟಿಸಿದ ಆಶ್ಲೀಲವಾಗಿ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಟ್ರೋಲ್‌ ಮಾಡಿದ್ದ ಕಿಡಿಗೇಡಿ

 ಬೆಂಗಳೂರು (ಸೆ.22):  ತನ್ನ ಪ್ರೀತಿ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಗೆಳತಿ ಹಾಗೂ ಆಕೆಯ ತಾಯಿಯ ಭಾವಚಿತ್ರವನ್ನು ಆಶ್ಲೀಲವಾಗಿ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಟ್ರೋಲ್‌ ಮಾಡಿದ್ದ ಕಿಡಿಗೇಡಿಯೊಬ್ಬ ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಲಬುರಗಿ ಜಿಲ್ಲೆಯ ಅವಿನಾಶ್‌ ಬಂಧಿತನಾಗಿದ್ದು, ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾಮಮೂರ್ತಿ ನಗರದಲ್ಲಿ ನೆಲೆಸಿದ್ದ ಆತ, ಲಾಕ್‌ಡೌನ್‌ನಲ್ಲಿ ನಿರುದ್ಯೋಗಿಯಾಗಿ ತನ್ನೂರು ಸೇರಿದ್ದ. ‘ಗುಡ್‌ ಬಾಯ್‌ ಬ್ಯಾಡ್‌ ಟ್ರೋಲ್‌’ ಪೇಜ್‌ನ ಅಡ್ಮಿನ್‌ ಸ್ನೇಹವಾಗಿದೆ. ಬಳಿಕ ಈ ಪೇಜ್‌ಗೆ ಟ್ರೋಲ್‌ ಮಾಡುವ ನೌಕರಿ ಅವಿನಾಶ್‌ ಸಿಕ್ಕಿತು. 

ಬಸ್ಸಲ್ಲಿ ಫಿಲ್ಮಿ ಸ್ಟೈಲಲ್ಲಿ ಚುಂಬಿಸಿ ಪರಾರಿ ಆಗಿದ್ದವ ಅರೆಸ್ಟ್

ಆಗ ಇನ್‌ಸ್ಟ್ರಾಗ್ರಾಂನಲ್ಲಿ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯ ಪರಿಚಯವಾಗಿದೆ. ಆಕೆಯ ಬಳಿ ಆರೋಪಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಇನ್ನು ಸಂತ್ರಸ್ತೆ ನಿರಾಕರಿಸಿದ್ದಳು. ಇದರಿಂದ ಕೆರಳಿದ ಆತ, ವಿದ್ಯಾರ್ಥಿ ಹಾಗೂ ಆಕೆಯ ತಾಯಿಯ ಭಾವಚಿತ್ರಗಳನ್ನು ಅಶ್ಲೀಲವಾಗಿ ಸೃಷ್ಟಿಸಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿ ಟ್ರೋಲ್‌ ಮಾಡಿದ್ದ.

PREV
click me!

Recommended Stories

Kodagu: ಮಡಿಕೇರಿಯ ಕಾಫಿ ತೋಟದಲ್ಲಿ ಅನಾಥವಾದ ಹೆಣ್ಣು ಶಿಶು ಪತ್ತೆ!
ಕೊಡಗು ಭೀಕರ ಅಪಘಾತದಲ್ಲಿ ಚಿತ್ರನಟ ಸಾವು ಬೆನ್ನಲ್ಲೇ ಬೆಂಗಳೂರಲ್ಲೂ ದುರಂತ ಘಟನೆ!