ಬೆಂಗಳೂರಲ್ಲಿ ಮತ್ತೆ ಹೆಚ್ಚಿದ ಸೋಂಕಿತರ ಸಂಖ್ಯೆ : ಎಚ್ಚರ!

By Kannadaprabha NewsFirst Published Sep 22, 2021, 7:06 AM IST
Highlights
  • ನಗರದಲ್ಲಿ ಕೋವಿಡ್‌-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳ
  • ಮಂಗಳವಾರ 359 ಮಂದಿಯಲ್ಲಿ ಸೋಂಕು ಪತ್ತೆ

 ಬೆಂಗಳೂರು (ಸೆ.22):  ನಗರದಲ್ಲಿ ಕೋವಿಡ್‌-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮಂಗಳವಾರ 359 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಏಳು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,44,052ಕ್ಕೆ ಏರಿಕೆಯಾಗಿದೆ. 381 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 12,20,659ಕ್ಕೆ ಏರಿಕೆಯಾಗಿದೆ. 7 ಮಂದಿ ಸೋಂಕಿತರ ಸಾವಿನೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 16,104ಕ್ಕೆ ಏರಿಕೆಯಾಗಿದೆ. ಪ್ರಸ್ತುತ ನಗರದಲ್ಲಿ 7288 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಕರ್ನಾಟಕದಲ್ಲಿ ಕೊರೋನಾ ಏರಿಳಿತ: ಇಲ್ಲಿದೆ ಸೆ.21ರ ಅಂಕಿ-ಸಂಖ್ಯೆ

ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಬೇಗೂರು, ರಾಜರಾಜೇಶ್ವರಿ ನಗರ ವಾರ್ಡ್‌ಗಳಲ್ಲಿ ಸೋಂಕಿತ ಪ್ರಕರಣಗಳು ನಿತ್ಯ ಸರಾಸರಿ ತಲಾ 7, ಹೊರಮಾವು ವಾರ್ಡ್‌ನಲ್ಲಿ 6, ಬೆಳ್ಳಂದೂರು, ಹಗದೂರು, ಉತ್ತರಹಳ್ಳಿ ವಾರ್ಡ್‌ನಲ್ಲಿ ತಲಾ 5, ಕೆಂಪೇಗೌಡ ವಾರ್ಡ್‌, ವರ್ತೂರು, ಎಚ್‌ಎಸ್‌ಆರ್‌ ಲೇಔಟ್‌, ಕೆ.ಆರ್‌.ಪುರಂ ವಾರ್ಡ್‌ಗಳಲ್ಲಿ ತಲಾ 4 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.

ಕಳೆದ ಹತ್ತು ದಿನಗಳಿಂದ ಯಡಿಯೂರು, ಲಕ್ಷ್ಮಿದೇವಿ ನಗರ, ಎಸ್‌.ಕೆ.ಗಾರ್ಡನ್‌, ಶಕ್ತಿ ಗಣಪತಿ ನಗರ, ಸರ್ವಜ್ಞ ನಗರ, ದಯಾನಂದ ನಗರ, ಕಾಟನ್‌ಪೇಟೆ, ಕೆಂಪಾಪುರ ಅಗ್ರಹಾರ, ರಾಯಪುರ ಮತ್ತು ಆಜಾದ್‌ ನಗರ ವಾರ್ಡ್‌ಗಳಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!