ಬಸ್ಸಲ್ಲಿ ಫಿಲ್ಮಿ ಸ್ಟೈಲಲ್ಲಿ ಚುಂಬಿಸಿ ಪರಾರಿ ಆಗಿದ್ದವ ಅರೆಸ್ಟ್

Kannadaprabha News   | Asianet News
Published : Sep 22, 2021, 07:16 AM IST
ಬಸ್ಸಲ್ಲಿ ಫಿಲ್ಮಿ ಸ್ಟೈಲಲ್ಲಿ ಚುಂಬಿಸಿ ಪರಾರಿ ಆಗಿದ್ದವ ಅರೆಸ್ಟ್

ಸಾರಾಂಶ

 ಸರ್ಕಾರಿ ಬಸ್ಸಿನಲ್ಲಿ ಸಿನಿಮೀಯ ಶೈಲಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ಮುತ್ತು ಮುತ್ತು ಕೊಟ್ಟು ಪರಾರಿಯಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ಅರೆಸ್ಟ್

 ಬೆಂಗಳೂರು (ಸೆ.22):  ಇತ್ತೀಚೆಗೆ ಸರ್ಕಾರಿ ಬಸ್ಸಿನಲ್ಲಿ ಸಿನಿಮೀಯ ಶೈಲಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ಮುತ್ತು ಕೊಟ್ಟು ಪರಾರಿಯಾಗಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಬಾಗಲಗುಂಟೆ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ವಿಜಯನಗರದ ನಿವಾಸಿ ಮಧುಸೂದನ್‌ ರೆಡ್ಡಿ ಬಂಧಿತನಾಗಿದ್ದು, ಸೆ.12ರಂದು ಮುಂಜಾನೆ ಬಳ್ಳಾರಿಯಿಂದ ನಗರಕ್ಕೆ ಬಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸಹ ಪ್ರಯಾಣಿಕ ವಿದ್ಯಾರ್ಥಿನಿಗೆ ಚುಂಬಿಸಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಬಸ್‌ ಟಿಕೆಟ್‌ ಮಾಹಿತಿ ಆಧರಿಸಿ ರೆಡ್ಡಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸ್ಸಲ್ಲಿ ಮಲಗಿದ್ದ ವಿದ್ಯಾರ್ಥಿನಿಗೆ ಕಿಸ್‌ ಕೊಟ್ಟ ಅಪರಿಚಿತ

ಬಳ್ಳಾರಿ ಜಿಲ್ಲೆಯ ಮಧುಸೂದನ್‌ ರೆಡ್ಡಿ, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ. ಇನ್ನು ಸಂತ್ರಸ್ತೆ ಸಹ ಬಳ್ಳಾರಿ ಜಿಲ್ಲೆಯವರು. ಗಣೇಶ ಹಬ್ಬ ಮುಗಿಸಿಕೊಂಡು ಒಂದೇ ಬಸ್ಸಿನಲ್ಲಿ ಇಬ್ಬರು ನಗರಕ್ಕೆ ಮರಳಿದ್ದರು. ಆಗ ತುಮಕೂರು ರಸ್ತೆಯ ಟಿ.ದಾಸರಹಳ್ಳಿ ಸಮೀಪ ವಿದ್ಯಾರ್ಥಿನಿಗೆ ಮುತ್ತು ಕೊಟ್ಟು ರೆಡ್ಡಿ ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?