Ballari; ಗಣಪತಿ ಮೆರವಣಿಗೆ ವೇಳೆ ಮಸೀದಿಗೆ ಚಪ್ಪಲಿ ಎಸೆದ ಯುವಕ!

By Gowthami K  |  First Published Sep 11, 2022, 1:21 PM IST

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲ  ಹಿಂದೂ ಮಹಾಸಭಾ ಗಣಪತಿ ಮೆರವಣೆ ವೇಳೆ ಯುವಕನೋರ್ವ ದುರ್ವರ್ತನೆ ತೋರಿದ ಘಟನೆ ನಡೆದಿದೆ. ಈ ಬಗ್ಗೆ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.


ಬಳ್ಳಾರಿ (ಸೆ.11): ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲ  ಹಿಂದೂ ಮಹಾಸಭಾ ಗಣಪತಿ ಮೆರವಣೆ ವೇಳೆ ಯುವಕನೋರ್ವ ದುರ್ವರ್ತನೆ ತೋರಿದ ಘಟನೆ ನಡೆದಿದೆ. ಸೆ.10ರ ಸಂಜೆ  ಸಿರುಗುಪ್ಪದ ದೇಶನೂರು ರಸ್ತೆಯಲ್ಲಿರುವ ಮಸೀದಿ‌ ಮೇಲೆ ಯುವಕ ಚಪ್ಪಲಿ ಎಸೆದು  ದುರ್ವರ್ತನೆ ತೋರಿದ್ದಾನೆ.  ಪಕ್ಕದಲ್ಲಿರುವ ಯುವಕರು ಬಿಡಿಸಿದರೂ ಚಪ್ಪಲಿ ಎಸೆದಿದ್ದಾನೆ. ಯುವಕ ಮಸೀದಿಗೆ ಚಪ್ಪಲಿ ಎಸೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಗಣೇಶೋತ್ಸವದ ಮೆರವಣಿಗೆ ಸಾಗುವ ವೇಳೆ ಮಸೀದಿ ಮೇಲೆ ಪಾದರಕ್ಷೆ ಎಸೆದಿದ್ದು, ಐದನೇ ವರ್ಷದ ಹಿಂದೂ ಮಹಾಸಭಾ ಗಣೇಶೋತ್ಸವದಲ್ಲಿ ಯುವಕನ ಹುಚ್ಚಾಟ ಬೆಳಕಿಗೆ ಬಂದಿದೆ. ಆರಂಭದ ವರ್ಷದಿಂದಲೂ ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗಲು ಆಕ್ಷೇಪವಿತ್ತು. ಮೊದಲ ವರ್ಷ ಗಣಪತಿ ಇಟ್ಟ ಸ್ಥಳದಲ್ಲಿ ಕರಗಿಸೋ‌ ಮೂಲಕ ವಿಸರ್ಜನೆ ಮಾಡಲಾಗಿತ್ತು. ನಂತರ ಒಂದು ವರ್ಷ ಮೆರವಣಿಗೆಗೆ ಅನುಮತಿ ‌ಸಿಕ್ಕಿತ್ತು ಈ ವೇಳೆ ಬೃಹತ್ ಮೆರವಣಿಗೆ ಮಾಡಲಾಗಿತ್ತು. ನಂತರ ಎರಡು ವರ್ಷ ಕೊರೊನಾ ಹಿನ್ನಲೆ ಗಣಪತಿ ಪ್ರತಿಷ್ಠಾಪನೆ ಮಾಡಿರಲಿಲ್ಲ. ಇದೀಗ ಐದನೇ ವರ್ಷದ ಗಣೇಶೋತ್ಸವದಲ್ಲಿ ಯುವಕರಿಂದ ಎಡವಟ್ಟು ಆಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಕಳೆದ ರಾತ್ರಿಯಿಂದಲೂ ನಿರಂತರವಾಗಿ  ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಯಾರನ್ನು ಬಂಧಿಸಿಲ್ಲ ಆದ್ರೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಾಮೂಹಿಕ ಗಣೇಶ ಮೂರ್ತಿ ಮೆರವಣಿಗೆ: ಮದ್ಯ ನಿಷೇಧ
ಬೆಂಗಳೂರು: ನಗರದ ಪೂರ್ವ ವಿಭಾಗದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ಮೆರವಣಿಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ.11ರ ಬೆಳಗ್ಗೆ 6ರಿಂದ ಸೆ.12ರ ಬೆಳಗ್ಗೆ 6ರವರೆಗೆ ಭಾರತೀನಗರ, ಕಮರ್ಷಿಯಲ್‌ಸ್ಟ್ರೀಟ್‌, ಪುಲಿಕೇಶಿ ನಗರ, ಶಿವಾಜಿ ನಗರ ಹಾಗೂ ಹಲಸೂರು ಪೊಲೀಸ್‌ ಠಾಣಾಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್‌ ಆಯಕ್ತರು ಆದೇಶಿಸಿದ್ದಾರೆ.

Tap to resize

Latest Videos

undefined

ಈ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ವ್ಯಾಪ್ತಿಯ ಮದ್ಯದ ಮಾರಾಟ ಮಳಿಗೆ, ಬಾರ್‌, ವೈನ್‌ ಸ್ಟೋರ್‌ ಸೇರಿದಂತೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚಾಮರಾಜಪೇಟೆ ಗಣೇಶ ಬೃಹತ್‌ ಮೆರವಣಿಗೆ
ನಗರದ ಚಾಮರಾಜಪೇಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ‘ಚಾಮರಾಜಪೇಟೆ ಗಣೇಶ ಉತ್ಸವ ಸಮಿತಿ’ ಪ್ರತಿಷ್ಠಾಪಿಸಿದ್ದ 19 ಅಡಿ ಎತ್ತರದ ಬೃಹತ್‌ ಗಣೇಶ ಮೂರ್ತಿಯನ್ನು ಶನಿವಾರ ಬೃಹತ್‌ ಮೆರವಣಿಗೆ, ಶೋಭಾಯಾತ್ರೆಯ ಮೂಲಕ ವಿಸರ್ಜಿಸಲಾಯಿತು.

ಗಣೇಶನ ಕಳ್ಸೋದು ಬ್ಯಾಡ... ಬಪ್ಪನ ತಬ್ಬಿ ಅಳಲಾರಂಭಿಸಿದ ಪುಟ್ಟ ಮಗು : ವಿಡಿಯೋ ವೈರಲ್

ಶೋಭಾಯಾತ್ರೆಗೆ ಚಾಮರಾಜಪೇಟೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಗಣೇಶೋತ್ಸವ ಸಮಿತಿಗಳು ಸಾಥ್‌ ನೀಡಿದ್ದ ಹಿನ್ನೆಲೆಯಲ್ಲಿ 31 ಗಣೇಶ ಮೂರ್ತಿಗಳು ಒಟ್ಟಾಗಿ ಯಾತ್ರೆಯಲ್ಲಿ ಸಾಗಿದವು. ಚಾಮರಾಜಪೇಟೆಯಿಂದ ಟೌನ್‌ಹಾಲ್‌ವರೆಗೂ ಯಾತ್ರೆ ನಡೆದಿದ್ದು, ಸಂಸದ ಪಿ.ಸಿ.ಮೋಹನ್‌, ಲಹರಿ ವೇಲು, ಆರ್‌ಎಸ್‌ಎಸ್‌ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಿಂದೂ ಸಂಘಟನೆಗಳು, ಉತ್ಸವ ಸಮಿತಿಗಳು, ಭಕ್ತಾಧಿಗಳು ಸೇರಿ 10 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

ಬೆಳಗಾವಿಯಲ್ಲಿ ಶಾಂತಿಯುತ ಗಣೇಶೋತ್ಸವ: 'ಮೈ ಹೂಂ ಡಾನ್' ಎಂದು ಹೆಜ್ಜೆ ಹಾಕಿದ ಎಸಿಪಿ ಭರಮಣಿ..!

ಪ್ರತಿಭಟನೆ ಮೂಲಕ ಪ್ರತಿಷ್ಠಾಪನೆ/ವಿಸರ್ಜನೆ:
ಈದ್ಗಾ ಮೈದಾನ ಸಮೀಪ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಆರಂಭದಲ್ಲಿ ಅನುಮತಿ ಸಿಕ್ಕಿರಲಿಲ್ಲ. ಆ ಬಳಿಕ ಉತ್ಸವ ಸಮಿತಿಯು ಬಿಬಿಎಂಪಿ, ಪೊಲೀಸ್‌ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಿ ಅನುಮತಿ ಪಡೆದು ಸೆ.3ರಂದು ಪ್ರತಿಷ್ಠಾಪಿಸಿದ್ದರು. ಸೆ.10ರಂದು ಹಮ್ಮಿಕೊಂಡಿದ್ದ ಶೋಭಾಯಾತ್ರೆಗೂ ಪೊಲೀಸ್‌ ಇಲಾಖೆ ಅನುಮತಿ ನೀಡಿರಲಿಲ್ಲ. ಶುಕ್ರವಾರ ಸ್ವಾತಂತ್ರ್ಯ ಉದ್ಯಾನದ ಮುಂಭಾಗ ಪ್ರತಿಭಟನೆ ನಡೆಸಿ ಮೆರವಣಿಗೆ ಅನುಮತಿಯನ್ನು ಪಡೆಯಲಾಗಿತ್ತು.

click me!