ನೀರು ಕೇಳಲು ಮನೆಗೆ ಬಂದ ದುಷ್ಕರ್ಮಿಗಳು ಯುವಕನೋರ್ವನನ್ನು ಕೊಂದು ಹಾಕಿದ ಘಟನೆ ನಡೆದಿದೆ. ಆದರೆ ಈ ಘಟನೆಗೆ ಕಾರಣ ಮಾತ್ರ ತಿಳಿದು ಬಂದಿಲ್ಲ.
ದೊಡ್ಡಬಳ್ಳಾಪುರ (ಆ.17): ನೀರು ಕೇಳುವ ನೆಪದಲ್ಲಿ ಮನೆಗೆ ಬಂದವರಿಂದ ಅಪರಿಚಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮಂಜುನಾಥ್(22) ಕೊಲೆಯಾದ ದುರ್ದೈವಿ. ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೃತನ ಮನೆಯಲ್ಲೇ ದುಷ್ಕೃತ್ಯ ನಡೆದಿದೆ. ಘಟನೆಯಲ್ಲಿ ಮೃತನ ತಾಯಿ ಕೂಡ ಗಾಯಗೊಂಡಿದ್ದಾರೆ.
ನೀರು ಕೇಳಿ ಚಾಕು ಹಾಕಿದರು
ರಸ್ತೆಯಲ್ಲಿ ಹೋಗುವಾಗ ತಮ್ಮ ವಾಹನ ಅಪಘಾತವಾಗಿದ್ದು, ತುರ್ತಾಗಿ ನೀರು ಬೇಕಿದೆ ಎಂದು ಓರ್ವ ವ್ಯಕ್ತಿ ಮನೆ ಬಾಗಿಲು ತಟ್ಟಿದ್ದಾನೆಗೀ ವೇಳೆ ನೀರು ಕೊಡಲು ಬಾಗಿಲು ತೆರೆದಾಗ ಏಕಾಏಕಿ ಐವರು ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ಮಂಜುನಾಥ್ ಮೇಲೆ ದಾಳಿ ನಡೆಸಿ, ಹಲ್ಲೆ ಮಾಡಿ, ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದ ಆತನನ್ನು ತುಮಕೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಆತ ಸಾವನ್ನಪ್ಪಿದ್ದಾನೆ.
ಫೇಸ್‌ಬುಕ್ ಮೇಲೆ ಹದ್ದಿನ ಕಣ್ಣು: ಇಂತಹ ಪೋಸ್ಟ್ ಹಾಕಿದ್ರೆ ಹುಷಾರ್..!..
ಕೊಲೆ ನಂತರ ಯುವಕನ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಘಟನೆಗೆ ಸ್ಪಷ್ಟಕಾರಣ ತಿಳಿದು ಬಂದಿಲ್ಲ. ಮೃತನ ತಂದೆ ರಾಜಕಾರಣದಲ್ಲೂ ಗುರ್ತಿಸಿಕೊಂಡಿದ್ದು 2 ಸಂಸಾರ ಹೊಂದಿದ್ದರು ಎಂಬ ಮಾಹಿತಿ ಇದೆ. ಮೇಲ್ನೋಟಕ್ಕೆ ಇದು ಹೆದ್ದಾರಿಗಳಲ್ಲಿ ಲಾರಿಗಳಿಂದ ಪೆಟ್ರೋಲ್ ಕಳವು ಮಾಡುವ ಪುಂಡರ ಗುಂಪಿನಿಂದ ನಡೆದ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಬಳಿಕ ಸತ್ಯ ಹೊರಬರಲಿದೆ.
ಸಂಸ್ಥೆ ಸಿಬ್ಬಂದಿಯಿಂದಲೇ ಎಟಿಎಂ ಕೇಂದ್ರದಿಂದ ಹಣ ಲೂಟಿ..
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್, ಡಿವೈಎಸ್‌ಪಿ ಟಿ.ರಂಗಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.