ಪಾಕ್ ಜಿಂದಾಬಾದ್ ಆಯ್ತು ಈಗ ಪಾಕ್ ಆರ್ಮಿ ಮೇಲೆ ಶುರುವಾಗಿದೆ ಲವ್..!

Suvarna News   | Asianet News
Published : Feb 25, 2020, 05:13 PM ISTUpdated : Feb 25, 2020, 05:54 PM IST
ಪಾಕ್ ಜಿಂದಾಬಾದ್ ಆಯ್ತು ಈಗ ಪಾಕ್ ಆರ್ಮಿ ಮೇಲೆ ಶುರುವಾಗಿದೆ ಲವ್..!

ಸಾರಾಂಶ

ಪಾಕಿಸ್ತಾನ ಜಿಂದಾಬಾದ್ ನಂತರದಲ್ಲಿಯೇ ಇದೀಗ ವಿಜಯಪುರದ ಯುವಕನಿಗೆ ಪಾಕ್ ಅರ್ಮಿ ಮೇಲೆ ಲವ್ ಆಗಿದೆ. ಪಾಕ್ ಆರ್ಮಿ ಪರ ಪೋಸ್ಟ್ ಒಂದನ್ನು ಯುವಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.  

ವಿಜಯಪುರ(ಫೆ.25): ಪಾಕಿಸ್ತಾನ ಜಿಂದಾಬಾದ್ ನಂತರದಲ್ಲಿಯೇ ಇದೀಗ ವಿಜಯಪುರದ ಯುವಕನಿಗೆ ಪಾಕ್ ಅರ್ಮಿ ಮೇಲೆ ಲವ್ ಆಗಿದೆ. ಪಾಕ್ ಆರ್ಮಿ ಪರ ಪೋಸ್ಟ್ ಒಂದನ್ನು ಯುವಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.

"

ದೇಶದ್ರೋಹದ ಘೋಷಣೆ ಬೆನ್ನಲ್ಲೇ ವಿಜಯಪುರದಲ್ಲೂ ಮತ್ತೊಂದು ಎಡವಟ್ಟು ನಡೆದಿದೆ. ಪಾಕಿಸ್ತಾನ ಜಿಂದಾಬಾದ್ ಆಯ್ತು ಈಗ ಪಾಕ್ ಆರ್ಮಿ ಮೇಲೆ ಲವ್‌ ಶುರುವಾಗಿದೆ. 'ಲವ್ ಯೂ ಪಾಕ್ ಆರ್ಮಿ' ಎನ್ನುವ ಮೂಲಕ ತಾಳಿಕೋಟೆಯ ಯುವಕ ದೇಶ ದ್ರೋಹದ ಕೆಲಸ ಮಾಡಿದ್ದಾನೆ.

ಶಾಸಕ ಅರವಿಂದ ಬೆಲ್ಲದ ಕಾರು ಪಲ್ಟಿ

ಪಾಕ್ ಆರ್ಮಿ ಪರವಾಗಿ ತಾಳಿಕೋಟಿ ಯುವಕನ ಪೋಸ್ಟ್ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಫೆ.22 ರಂದು ಎ ಟು ಝಡ್ ಖಾತೆಯಲ್ಲಿ ಲವ್ ಯೂ ಪಾಕ್ ಆರ್ಮಿ ಎಂದು ಬರೆದ ಕಿಡಿಗೇಡಿ ಬಳಿಕ ಅದೇ ಹೆಸರಿನಲ್ಲಿರುವ ಪೋಸ್ಟ್‌ನ್ನು ಶೇರ್ ಮಾಡಿದ್ದಾನೆ. ತಾಳಿಕೋಟಿಯ ಮೇರು ಬ್ಯಾಗವಾಟ್ ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಶೇರ್ ಆಗಿದೆ.

ಎ ಟು ಝಡ್ ಫೇಸಬುಕ್ ಖಾತೆಯ ದೇಶದ್ರೋಹಿಯನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರು ಮಾಡಬೇಕಿದೆ. ಎ ಟು ಝಡ್ ಹೆಸರಲ್ಲಿದ್ದ ಪೋಸ್ಟ್ ಶೇರ್ ಮಾಡಿದ್ದ ಮೇರು ಬ್ಯಾಗವಾಟ್ ನನ್ನು ಮುದ್ದೇಬಿಹಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆರಳಿದ ಯತ್ನಾಳ್:

"

PREV
click me!

Recommended Stories

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ
ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!