ಶಾಸಕ ಅರವಿಂದ ಬೆಲ್ಲದ ಕಾರು ಪಲ್ಟಿ

Suvarna News   | Asianet News
Published : Feb 25, 2020, 04:46 PM IST
ಶಾಸಕ ಅರವಿಂದ ಬೆಲ್ಲದ ಕಾರು ಪಲ್ಟಿ

ಸಾರಾಂಶ

ಶಾಸಕ ಅರವಿಂದ ಬೆಲ್ಲದ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಶಾಸಕರು ಗೋವಾದಿಂದ ಧಾರವಾಡಕ್ಕೆ ವಾಪಾಸ್ ಆಗುತ್ತಿದ್ದಾಗ ಘಟನೆ ನಡೆದಿದೆ.  

ಬೆಳಗಾವಿ(ಫೆ.25): ಶಾಸಕ ಅರವಿಂದ ಬೆಲ್ಲದ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಶಾಸಕರು ಗೋವಾದಿಂದ ಧಾರವಾಡಕ್ಕೆ ವಾಪಾಸ್ ಆಗುತ್ತಿದ್ದಾಗ ಘಟನೆ ನಡೆದಿದೆ.

ಕೂದಲೆಳೆ ಅಂತರದಲ್ಲಿ ಶಾಸಕ ಅರವಿಂದ ಬೆಲ್ಲದ ಪಾರಾಗಿದ್ದಾರೆ. ಶಾಸಕರು ಚಲಾಯಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಘಟನೆ ನಡೆದಿದೆ.

ತಿಂಗಳಲ್ಲಿ ಒಂದೇ ಕುಟುಂಬದ ಮೂವರು ಸಾವು

ಗೋವಾದಿಂದ ಧಾರವಾಡಕ್ಕೆ ವಾಪಾಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕುಟುಂಬ ಸಮೇತ ಗೋವಾಕ್ಕೆ ಹೋಗಿದ್ದರು.

ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಶಾಸಕ ಅರವಿಂದ ಮತ್ತು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV
click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!