ಮಲೇಷ್ಯಾ ಮೂಲದ ಖಾಸಗಿ ಕಂಪನಿಯ ಸರಕು ಸಾಗಾಣಿಕೆ ಹಡಗಿನಲ್ಲಿ ಕಳೆದ 9 ತಿಂಗಳಿನಿಂದ ನೌಕರಿ ಮಾಡುತ್ತಿದ್ದ ಮೈಸೂರಿನ ಮೂಲದ ಯುವಕ ಮಲೇಷ್ಯಾದಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೈಸೂರು(ಡಿ.20): ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ಪಟ್ಟಣದ ಯುವಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಈ ಬಗ್ಗೆ ಪೋಷಕರಿಗೆ ಮಾಹಿತಿ ಬಂದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್ ರಸ್ತೆಯಲ್ಲಿ ವಾಸವಾಗಿರುವ ಶೋಭಾ, ವೆಂಕಟೇಶ್ ದಂಪತಿಯ ಪುತ್ರ ಸುಮಂತ್(22) ನೀರು ಪಾಲಾಗಿರುವ ಯುವಕ. ಈತ ಮಲೇಷ್ಯಾ ಮೂಲದ ಖಾಸಗಿ ಕಂಪನಿಯ ಸರಕು ಸಾಗಾಣಿಕೆ ಹಡಗಿನಲ್ಲಿ ಕಳೆದ 9 ತಿಂಗಳಿನಿಂದ ನೌಕರಿ ಮಾಡುತ್ತಿದ್ದ. ಬುಧವಾರ ಮಲೇಷ್ಯಾದಿಂದ ಕರೆ ಬಂದಿದ್ದು, ನಿಮ್ಮ ಮಗ ಮಲೇಷ್ಯಾದಲ್ಲಿನ ನದಿಯೊಂದರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶವ ಪತ್ತೆಗಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನನ್ನ ಸೋಲಿಗೆ ಕೆಲ ಬಿಜೆಪಿಗರು ಕಾರಣ : ಎಚ್. ವಿಶ್ವನಾಥ್
ಎಸ್‌ಐ ಗಣೇಶ್ ಈ ಬಗ್ಗೆ ಮಾಹಿತಿ ನೀಡಿ ಗುರುವಾರ ಶವ ಪತ್ತೆಯಾಗಿದ್ದು, ಶವದ ಗುರುತು ಪತ್ತೆಗೆ ಈತನೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ಮಲೇಷ್ಯಾ ಪೊಲೀಸರು ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಸಂಸದ ಪ್ರತಾಪ್ ಸಿಂಹ ರಾಯಭಾರ ಕಚೇರಿ ಮತ್ತು ಇಮಿಗ್ರೇಷನ್ ವಿಭಾಗಕ್ಕೆ ಕರೆ ಮಾಡಿ ಮೃತ ಸುಮಂತ್ ಪೋಷಕರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧಕ್ಕೆ ಪ್ರಧಾನಿಗೆ ಪತ್ರ