ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣಾ ವ್ಯಾಪ್ತಿಗೂ ಕರ್ಫ್ಯೂ ಡಿ.22 ರಾತ್ರಿ 12 ಗಂಟೆಯವರೆಗೂ ಕರ್ಪ್ಯೂ ವಿಸ್ತರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ಆದೇಶ ನೀಡಿದ್ದಾರೆ.
ಮಂಗಳೂರು(ಡಿ.20): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ವಿಚಾರವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ಆದೇಶ ನೀಡಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣಾ ವ್ಯಾಪ್ತಿಗೂ ಕರ್ಫ್ಯೂ ಡಿ.22 ರಾತ್ರಿ 12 ಗಂಟೆಯವರೆಗೂ ಕರ್ಪ್ಯೂ ವಿಸ್ತರಿಸಿ ಆದೇಶ ನೀಡಲಾಗಿದೆ. ಈ ವರೆಗೆ ಐದು ಠಾಣಾ ವ್ಯಾಪ್ತಿಗಷ್ಟೇ ಕರ್ಫ್ಯೂ ಸೀಮಿತವಾಗಿತ್ತು.
undefined
ಮಂಗಳೂರು: ಪೌರತ್ವ ಕಿಚ್ಚಿಗೆ ಇಬ್ಬರು ಬಲಿ, ಕರ್ಫ್ಯೂ ಜಾರಿ, ಮದ್ಯ ನಿಷೇಧ
ಪೊಲೀಸ್ ಗುಂಡಿಗೆ ಬಲಿಯಾದ ಯುವಕರ ಮೃತದೇಹದ ಮರಣೋತ್ತರ ಪರೀಕ್ಷೆ ಸರ್ಕಾರಿ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿದೆ. ಶುಕ್ರವಾರ ಬೆಳಗ್ಗೆ 9 ಗಂಟೆ ನಂತರ ಮರಣೋತ್ತರ ಪರೀಕ್ಷೆಗೆ ಸಿದ್ದತೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳ ಮೆರವಣಿಗೆ ಸಾಧ್ಯತೆ ಇದೆ. ಕರ್ಫ್ಯೂ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಲು ಪೊಲೀಸರಿಂದ ಅನುಮತಿ ಇಲ್ಲ.
10 ಗಂಟೆ ಸುಮಾರಿಗೆ ಮೃತದೇಹದ ಅಂತಿಮ ಸಂಸ್ಕಾರ ನಡೆಯಲಿದ್ದು, ಹಿಂಸಾಚಾರದ ಸಂದರ್ಭ ಜಲೀಲ್ ಮತ್ತು ನೌಶಿನ್ ಪೊಲೀಸ್ ಗುಂಡಿಗೆ ಬಲಿಯಾಗಿದ್ದರು.
ಕೇರಳದಿಂದ ಬಂದವರಿಂದ ಮಂಗಳೂರಿನಲ್ಲಿ ಕೃತ್ಯ