ಕುವೈತ್‌ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರವಾರದ ಯುವಕ : ನೆರವಿಗೆ ತಾಯಿ ಮೊರೆ

Published : Sep 17, 2019, 02:05 PM ISTUpdated : Sep 17, 2019, 02:06 PM IST
ಕುವೈತ್‌ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರವಾರದ ಯುವಕ : ನೆರವಿಗೆ ತಾಯಿ ಮೊರೆ

ಸಾರಾಂಶ

ಕುವೈತ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರವಾರ ಮೂಲದ ಯುವಕನೋರ್ವ ಮೃತಪಟ್ಟಿದ್ದು, ಮೃತದೇಹ ಭಾರತಕ್ಕೆ ತರಲು ತಾಯಿ ನೆರವು ಕೇಳಿದ್ದಾರೆ.

ಕಾರವಾರ (ಸೆ.17): ಕಾರವಾರ ಮೂಲದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕುವೈತ್‌ನಲ್ಲಿ ಭಾನುವಾರ ನಡೆದಿದೆ. 

ಬಡತನ ಹಿನ್ನೆಲೆಯಲ್ಲಿ ಮಗನ ಮೃತದೇಹವನ್ನು ಭಾರತಕ್ಕೆ ತರಲಾಗದೇ ಮೃತರ ತಾಯಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಕುವೈತಿನ ಭಾರತೀಯ ದೂತವಾಸದ ನೆರವು ಕೇಳಿದ್ದಾರೆ.

ಇಲ್ಲಿನ ಕ್ರಿಶ್ಚಿಯನ್‌ ವಾಡಾದ ನಿವಾಸಿ ರೊಬಿನ್ ಸನ್ ಫ್ರಾನ್ಸಿಸ್ ರುಜಾರಿಯೋ ಎಂಬ ಯುವಕ ಕುವೈತ್ ನ ಫರ್ವಾನಿಯದ ಫುಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ಇಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮಗನ ಮೃತದೇಹ ಭಾರತಕ್ಕೆ ತರಲು ತಾಯಿ ಮೇರಿ ಫ್ರಾನ್ಸಿಸ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಆರ್ಥಿಕ ಮುಗ್ಗಟ್ಟು ಇರುವ ಕಾರಣ ತನ್ನ ಮಗನ ಮೃತ ದೇಹವನ್ನು ಭಾರತಕ್ಕೆ ತರಲು ತನ್ನಿಂದ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕುವೈತಿನ ಭಾರತೀಯ ದೂತಾವಾಸದ ಜೊತೆ ಚರ್ಚಿಸಿ ತನ್ನ ಮಗನ ಮೃತದೇಹವನ್ನು ಗೋವಾ ಮೂಲಕ ಕಾರವಾರಕ್ಕೆ ತರಲು ನೆರವು ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವೂ ನೆರವಿನ ಭರವಸೆ ನೀಡಿದೆ. 

PREV
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕಿಸಿದ ವಿಪಕ್ಷಗಳಿಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ