ನಿಯಮ ಉಲ್ಲಂಘನೆ : KSRTC ಬಸ್‌ಗೂ ಬಿತ್ತು ದಂಡ

Published : Sep 17, 2019, 01:18 PM IST
ನಿಯಮ ಉಲ್ಲಂಘನೆ : KSRTC ಬಸ್‌ಗೂ  ಬಿತ್ತು ದಂಡ

ಸಾರಾಂಶ

ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಸರ್ಕಾರದ್ದೆ ಆದ KSRTC ಬಸ್ಸನ್ನೂ ಕೂಡ ಬಿಟ್ಟಿಲ್ಲ.ನಿಯಮ ಉಲ್ಲಂಘನೆಗಾಗಿ ಹುಬ್ಬಳ್ಳಿಯಲ್ಲಿ ದಂಡ ವಿಧಿಸಲಾಗಿದೆ. 

ಹುಬ್ಬಳ್ಳಿ [ಸೆ.17]: ನೋ ಎಂಟ್ರಿ ಫಲಕ ನಿರ್ಲಕ್ಷಿಸಿ ಸಂಚಾರಿ ನಿಯಮ ಉಲ್ಲಂಘಿಸಿದ ಸಾರಿಗೆ ಸಂಸ್ಥೆಯ ಎರಡು ಬಸ್ ಗಳಿಗೆ ತಲಾ 500 ರು. ದಂಡ ವಿಧಿಸಿದ ಘಟನೆ ಇಲ್ಲಿನ ಸ್ವಿಮ್ಮಿಂಗ್ ಫೂಲ್ ಕಾಂಪ್ಲೆಕ್ಸ್ ಬಳಿ ನಡೆದಿದೆ. 

ಕೆಎಸ್ ಆರ್‌ಟಿಸಿ ಬಸ್‌ಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಫಲಕ ಅಳವಡಿಸಲಾಗಿದ್ದರೂ ಚಾಲಕರು ನಿಯಮ ಮೀರಿ ಸ್ವಿಮ್ಮಿಂಗ್‌ಫೂಲ್ ರಸ್ತೆಗೆ ಬಸ್‌ನ್ನು ಚಾಲನೆ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಬಸ್ ತಡೆದ ಉತ್ತರ ಸಂಚಾರಿ ಪೊಲೀಸರು ಈ ಬಸ್‌ಗಳಿಗೆ ದಂಡ ವಿಧಿಸಿದ್ದಾರೆ. ಹುಬ್ಬಳ್ಳಿ-ತಡಸ-ಹುಬ್ಬಳ್ಳಿ ಹಾಗೂ ಇನ್ನೊಂದು ನಗರ ಸಾರಿಗೆ ಬಸ್ ಚಾಲಕರು ದಂಡ ತೆತ್ತಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಚಾಲಕರ ನಡುವೆ ವಾಗ್ವಾದಗಳು ನಡೆದಿವೆ ಎಂದು ತಿಳಿದುಬಂದಿದ್ದು, ಚಾಲಕರು ಮೊದಲು ರಸ್ತೆ ಸರಿ ಮಾಡಿಸಿ ಬಳಿಕ ದಂಡ ವಸೂಲಿ ಮಾಡಿ ಎಂದು ವಾದ ಮಾಡಿದ್ದಾರೆ ಎಂದು ತಿಳಿದುಬಂದಿ

PREV
click me!

Recommended Stories

ಉಡುಪಿ ನೀರು ಸೇದುವಾಗ ಅಮ್ಮನ ಕೈತಪ್ಪಿ ಬಾವಿಗೆ ಬಿದ್ದ ಮಗು; ತಾಯಿ ಬಾವಿಗಿಳಿಯುವಷ್ಟರಲ್ಲಿ ಮಗು ಸಾವು!
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!