DRDO ಮಾನವ ರಹಿತ ವಿಮಾನ ಪತನ: ಸೆಲ್ಫಿಗಾಗಿ ಮುಗಿಬಿದ್ದ ಗ್ರಾಮಸ್ಥರು!

Published : Sep 17, 2019, 01:16 PM ISTUpdated : Sep 17, 2019, 03:19 PM IST
DRDO ಮಾನವ ರಹಿತ ವಿಮಾನ ಪತನ: ಸೆಲ್ಫಿಗಾಗಿ ಮುಗಿಬಿದ್ದ ಗ್ರಾಮಸ್ಥರು!

ಸಾರಾಂಶ

ಚಿತ್ರದುರ್ಗದಲ್ಲಿ ಡಿಆರ್‌ಡಿಒ ವಿಮಾನ ಪತನ| ಚಳ್ಳಕೆರೆಯಲ್ಲಿ ಮಾನವ ರಹಿತ ವಿಮಾನ ‘ರುಸ್ತುಂ–2’  ಪತನ| ಮಾನವ ರಹಿತ ವಿಮಾನ ಕಂಡು ಬೆಚ್ಚಿಬಿದ್ದ ಜನತೆ| ಅಪಘಾತ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕಕೊಳ್ಳಲು ಮುಗಿಬಿದ್ದ ಗ್ರಾಮಸ್ಥರು|   

ಚಿತ್ರದುರ್ಗ:(ಸೆ.17 ) ಡಿಆರ್‌ಡಿಒ ದ ದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ವಾಹನ 'ರುಸ್ತುಂ–2' ಪತನವಾದ ಘಟನೆ ಚಿತ್ರದುರ್ಗದ ಜೋಡಿ ಚಿಕ್ಕನಹಳ್ಳಿಯಲ್ಲಿ ಇಂದು ನಡೆದಿದೆ. 

"

ಚಳ್ಳಕೆರೆಯಲ್ಲಿ ಮಾನವ ರಹಿತ ಯುದ್ಧ ವಿಮಾನ ಪರೀಕ್ಷಾ ಕೇಂದ್ರದಿಂದ ರುಸ್ತುಂ-2 ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಈ ವೈಮಾನಿಕ ವಾಹನ ಪತನಗೊಳ್ಳುತ್ತಿದ್ದಂತೆಯೇ ಜೋಡಿ ಚಿಕ್ಕನಹಳ್ಳಿಯ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. 

ಇನ್ನೂ ಇದೆ ವೇಳೆ ಘಟನಾ ಸ್ಥಳದಲ್ಲಿ ಸ್ಥಳೀಯರು ಪತನಗೊಂಡ ವಿಮಾನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕಕೊಳ್ಳಲು ಮುಗಿಬಿದ್ದರು. ಘಟನಾ ಸ್ಥಳಕ್ಕೆ ಡಿಆರ್ ಡಿಒ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
2014 ರ ಡಿಫೆಕ್ಸ್ಪೋ ನಲ್ಲಿ ರುಸ್ತುಂ-2 ನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. 2018 ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಚಳ್ಳಕೆರೆಯಲ್ಲಿ ನಡೆಸಿದ ‘ರುಸ್ತುಂ–2’ ಡ್ರೋನ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿತ್ತು.


ಈ ವಿಮಾನ ಗಡಿಯಾಚೆಗಿನ ಬೇಹುಗಾರಿಕೆ ನಡೆಸುವ ಜತೆಗೆ ಶತ್ರು ಪಡೆಗಳನ್ನು ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದೆ. 


ಈ ವಿಶೇಷ ವಿಮಾನ ಸುಮಾರು 200 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು, ಸೇನೆಯ ಮೂರೂ ಪಡೆಗಳಿಗೆ ಚಿತ್ರ ಸಹಿತ ಮಾಹಿತಿ ರವಾನಿಸುವ ಕೆಲಸವನ್ನು ಇದು ಮಾಡಲಿದೆ. 

PREV
click me!

Recommended Stories

ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಠ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!
ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!