ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವ ಸಂದರ್ಭ ಕೊರೋನಾ ಮಟ್ಟ ಹಾಕಲು ಕಷ್ಟ ಪಡುತ್ತಿರುವಾಗಲೇ ಔಷಧಿ ಪ್ರಯೋಗಕ್ಕೆ ತನ್ನ ದೇಹ ಬಳಸಿಕೊಳ್ಳುವಂತೆ ಗದಗದ ಯುವಕ ಪ್ರಧಾನಿಗೆ ಪತ್ರ ಬರೆದಿರುವ ಘಟನೆ ನಡೆದಿದೆ
ಗದಗ(ಮೇ 23): ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವ ಸಂದರ್ಭ ಕೊರೋನಾ ಮಟ್ಟ ಹಾಕಲು ಕಷ್ಟ ಪಡುತ್ತಿರುವಾಗಲೇ ಔಷಧಿ ಪ್ರಯೋಗಕ್ಕೆ ತನ್ನ ದೇಹ ಬಳಸಿಕೊಳ್ಳುವಂತೆ ಗದಗದ ಯುವಕ ಪ್ರಧಾನಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.
ಕೊರೋನಾ ಔಷಧಿ ಪ್ರಯೋಗಕ್ಕೆ ನನ್ನ ದೇಹ ಬಳಸಿಕೊಳ್ಳಿ ಎಂದು ಗದಗದ ಯುವಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ. ಕಿಲ್ಲರ್ ಕರೊನಾ ವೈರಸ್‌ಗೆ ಔಷಧಿ ಪ್ರಯೋಗಕ್ಕೆ ದೇಹವನ್ನು ಬಳಸಿಕೊಳ್ಳಲು ಯುವಕ ಕೇಳಿಕೊಂಡಿದ್ದಾನೆ.
ಕಾಶ್ಮೀರದಲ್ಲಷ್ಟೇ ಅಲ್ಲ, ಕೊಡಗಿನಲ್ಲೂ ಬೆಳೆಯುತ್ತೆ ಸೇಬು..! ಇಲ್ಲಿವೆ ಫೋಟೋಸ್
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಯುವಕ ವಿರೇಶ ಸುರೇಶ ಕುರವತ್ತಿ ದೇಹ ದಾನಕ್ಕೆ ಮುಂದಾಗಿದ್ದಾನೆ. ಪ್ರಯೋಗಕ್ಕೆ ತನ್ನ ದೇಹವನ್ನು ಬಳಸಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾನೆ.
ಪ್ರಧಾನ ಮಂತ್ರಿ ಕಚೇರಿ ಮನವಿ ಪತ್ರವನ್ನು ಕಳುಹಿಸಿದ ಯುವಕ ಕರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯುವಾಗ ದೇಹದ ಅವಶ್ಯಕತೆ ಇದ್ದರೆ ತನ್ನನ್ನು ಬಳಸಿಕೊಳ್ಳಲು ಮನವಿ ಮಾಡಿದ್ದಾನೆ.
'ಕೊರೋನಾಗೆ ಔಷಧಿ ಕಂಡು ಹಿಡಿಯಲು ಕನಿಷ್ಠ 10 ವರ್ಷಗಳಾದ್ರೂ ಬೇಕು'..! ಕನ್ನಡಿಗ ಕೆನಡಾ ವಿಜ್ಞಾನಿ ಹೇಳಿದ್ದಿಷ್ಟು
ಯಾವುದೇ ಕ್ಷಣದಲ್ಲಿ ನನ್ನ ದೇಹವನ್ನು ಪ್ರಯೋಗಕ್ಕೆ ಉಪಯೋಗಿಸಿಕೊಳ್ಳುವಂತೆ ಮನವಿ ಮಾಡಿದ್ದು, ವಿಡಿಯೋ ಹಾಗೂ ಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.