ಕೊಲೆಯಾದ ಯುವಕ 2 ದಿನಗಳ ಬಳಿಕ ಜೀವಂತವಾಗಿ ಪತ್ತೆ| ದಾವಣಗೆರೆಯಲ್ಲಿ ಸ್ವಾರಸ್ಯಕರ ಘಟನೆ
ದಾವಣಗೆರೆ[ಮೇ.20]: ಕೊಲೆಯಾಗಿದ್ದಾನೆ ಎಂದು ಭಾವಿಸಲಾಗಿದ್ದ, ಯುವಕನನ್ನು 2 ದಿನಗಳ ಬಳಿಕ ಪೊಲೀಸರು ಜೀವಂತವಾಗಿ ಪತ್ತೆ ಹಚ್ಚಿರುವ ಸ್ವಾರಸ್ಯಕರ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಇಲ್ಲಿನ ಯಲ್ಲಮ್ಮ ನಗರ ನಿವಾಸಿ ಪರಶುರಾಮ, ಕೊಲೆಯಾಗಿದ್ದಾನೆ ಎಂಬ ಸುದ್ದಿ ನಗರದೆಲ್ಲೆಡೆ ಹಬ್ಬಿ, ವಾಟ್ಸಾಪ್‌ನಲ್ಲಿ ಫೋಟೋಗಳು ಹರಿದಾಡಿದ್ದವು. ಆದರೆ, ಎಷ್ಟೇ ಹುಡುಕಾಟ ನಡೆಸಿದರೂ ಆತನ ಶವ ಪತ್ತೆಯಾಗಿರಲಿಲ್ಲ. ಆದರೆ, ಭಾನುವಾರ ದಾವಣಗೆರೆಯ ರೈಲ್ವೆ ನಿಲ್ದಾಣದ ಬಳಿ ಕೊಲೆಯಾಗಿದ್ದಾನೆ ಎಂದು ಹೇಳಲಾಗಿದ್ದ ಪರಶುರಾಮ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಕುಡಿದ ಅಮಲಿನಲ್ಲಿ ಸ್ನೇಹಿತರ ಜತೆಗೂಡಿ ತಮಾಷೆಗಾಗಿ ಈ ರೀತಿಯ ಕಿಡಿಗೇಡಿಯ ಕೆಲಸ ಮಾಡಲಾಗಿತ್ತು. ಕುಂಕುಮವನ್ನು ಕಲಸಿ ರಕ್ತದಂತೆ ಕಲಸಿ, ಮುಖ, ಹಣೆ, ಬಾಯಿ ಮೇಲೆ ಹಾಕಿ ಕೊಂಡು ರಕ್ತ ಸುರಿಯುತ್ತಿರುವಂತೆ ಫೋಟೋ ತೆಗೆದು, ವಾಟ್ಸಾಪ್‌ನಲ್ಲಿ ಹರಿಯಬಿಡಲಾಗಿತ್ತು ಎಂದು ಹೇಳಿಕೆ ಕೊಟ್ಟಿದ್ದಾನೆ.
ಇದರೊಂದಿಗೆ ಒಂದೇ ವಾರದಲ್ಲಿ ರೌಡಿಶೀಟರ್ ಸೇರಿದಂತೆ 3 ಕೊಲೆ ಪ್ರಕರಣಗಳಿಂದ ಬೆಚ್ಚಿಬಿದ್ದಿದ್ದ ದಾವಣಗೆರೆಯ ಜನತೆ, ನಾಲ್ಕನೇ ಕೊಲೆಯಾಗಿದೆ ಎಂದು ಹೌಹಾರಿದ್ದರು. ಆದರೆ, ಇದು ಕುಡಿದ ಮತ್ತಿನಲ್ಲಿ ಮಾಡಿದ ಕುಚೋದ್ಯ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.