
ಹಾವೇರಿ (ಮೇ 27): ಸ್ನೇಹಿತರೊಂದಿಗೆ ನದಿ ದಡದಲ್ಲಿ ಪಾರ್ಟಿ ಮಾಡಲು ತೆರಳಿದ್ದ ಯುವಕ ನದಿಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಹಾವೇರಿ ತಾಲೂಕಿನ ದೇವಗಿರಿಯ ವರದಾ ನದಿಯಲ್ಲಿ ನಡೆದಿದೆ. ಹಾವೇರಿ ನಗರದ ಲಕಮಾಪೂರದ ನಿವಾಸಿ ಸುಭಾಸ್ (25) ಮೃತ ಯುವಕ. ಯುವಕ ನದಿ ದಡದಲ್ಲಿ ಪಾರ್ಟಿ ಮಾಡಿ, ನಂತರ ನದಿಗೆ ಜಿಗಿದಿದ್ದ. ಈಜು ಬಾರದ ಹಿನ್ನೆಲೆ ಯುವಕ ಸಾವನಪ್ಪಿದ್ದಾನೆ ಎನ್ನಲಾಗಿದೆ. ವರದಾ ನದಿಯ ಆಳವಾದ ಸ್ಥಳದಲ್ಲಿ ಧುಮುಕಿದ್ದ ಯುವಕ, ಈಜಲಾಗದೆ ನೀರಲ್ಲಿ ಮುಳುಗಿ ಸಾವೀಗಿಡಾಗಿದ್ದಾನೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ನುರಿತ ಈಜು ತಜ್ಞರಿಂದ ಶವ ಹೊರಕ್ಕೆ ತೆಗೆಯಲಾಗಿದ್ದು, ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮಂಡ್ಯ: ಕಾವೇರಿಯಲ್ಲಿ ದುಬಾರಿ BMW ಕಾರು: ಮಾನಸಿಕ ಅಸ್ವಸ್ಥನ ಕೃತ್ಯ?
ವಿಡಿಯೋ ಮಾಡೋ ಹುಚ್ಚಾಟಕ್ಕೆ ಮೂವರು ಬಾಲಕರ ಸಾವು: ನಗರದ ದೊಡ್ಡಗುಬ್ಬಿ ಕೆರೆಯಲ್ಲಿ ಈಜಾಡಲು ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಗುರುವಾರ ನಡೆದಿದೆ. ಸಾರಾಯಿಪಾಳ್ಯ ನಿವಾಸಿಗಳಾದ ಇಮ್ರಾನ್ ಪಾಷ (17), ಮುಬಾರಕ್ (17) ಹಾಗೂ ಸಾಹಿಲ್ (15) ಮೃತರು. ಮಧ್ಯಾಹ್ನ 1.40ರ ಸುಮಾರಿಗೆ ಈ ಘಟನೆ ಜರುಗಿದೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಕೊತ್ತನೂರು ಠಾಣೆ ಪೊಲೀಸರು ಮೂವರ ಮೃತದೇಹಗಳಿಗಾಗಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸಿದರು. ಸಂಜೆ ಆರು ಗಂಟೆ ವರೆಗೂ ಸತತ ಐದು ತಾಸು ಕಾರ್ಯಾಚರಣೆ ನಡೆದರೂ ಮೃತದೇಹಗಳು ಪತ್ತೆಯಾಗಿಲ್ಲ. ಕತ್ತಲಾದ ಪರಿಣಾಮ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬೆಳಗ್ಗೆ ಮೃತದೇಹಗಳ ಪತ್ತೆ ಕಾರ್ಯಾಚರಣೆ ಮುಂದುವರೆಯಲಿದೆ ಅಧಿಕಾರಿಗಳು ತಿಳಿಸಿದ್ದಾರೆ.