ರಾಜ್ಯಾದ್ಯಾಂತ ಅಪಾರ ಸಂಖ್ಯೆ ಭಕ್ತರನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಹೊಂದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.27): ರಾಜ್ಯಾದ್ಯಾಂತ ಅಪಾರ ಸಂಖ್ಯೆ ಭಕ್ತರನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿ ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಹೊಂದಿದೆ. ನಿತ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಸಾವಿರಾರು ಬೆಲೆಬಾಳುವ ರೇಷ್ಮೆಸೀರೆಗಳ ಕುಪ್ಪಸಗಳು, ಹಣ ಸೇರಿದಂತೆ ಅನೇಕ ವಸ್ತುಗಳನ್ನು ಅರ್ಪಣೆ ಮಾಡುತ್ತಿದ್ದಾರೆ. ಆದ್ರೆ ಹರಿಕೆ ರೂಪದಲ್ಲಿ ಬಂದಿರುವ ಸೀರೆ, ಕುಪ್ಪಸಗಳನ್ನು ಮುಜರಾಯಿ ಇಲಾಖೆಯ ಆದೇಶವಿಲ್ಲದೇ ಹರಾಜು ಮಾಡಿ ಗ್ರಾಮಸ್ಥರಿಗೆ ತಪ್ಪು ಲೆಕ್ಕ ನೀಡುತ್ತಿದ್ದಾರೆ ಎನ್ನುವ ಆರೋಪವನ್ನು ಕೆಲ ಗ್ರಾಮಸ್ಥರು ಮಾಡಿ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ವೈ.ಎಸ್.ವಿ.ದತ್ತಾ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಇತಿಹಾಸ ಪ್ರಸಿದ್ದ ಅಂತರಘಟ್ಟೆ ಗ್ರಾಮದ ಶ್ರೀ ದುರ್ಗಾಂಭ ದೇವಿಯ ಸೀರೆಗಳ ಕುಪ್ಪಸಗಳು ಹಾಗೂ ಮಡಿಗಳನ್ನು ಮುಜರಾಯಿ ಇಲಾಖೆಯ ಆದೇಶವಿಲ್ಲದೇ ಹರಾಜು ಮಾಡಿ ಗ್ರಾಮಸ್ಥರಿಗೆ ತಪ್ಪು ಲೆಕ್ಕ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಂತರಘಟ್ಟೆಯ ಕೆಲ ಗ್ರಾಮಸ್ಥರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ನೇತೃತ್ವದಲ್ಲಿ ಇಂದು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ವೈ.ಎಸ್.ವಿ.ದತ್ತ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ.
Chikkamagaluru ಜಿಲ್ಲೆಯಲ್ಲಿ ಮಾವಿನ ಹಣ್ಣಿಗೆ ಬಾರೀ ಬೇಡಿಕೆ
ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಬಿಲ್ಕಲೆಕ್ಟರ್ಗಳು ಮುಜರಾಯಿ ಅನುಮತಿ ಪಡೆಯದೇ ಸ್ವಇಚ್ಚೆಯಿಂದ ಜಾತ್ರಾ ಸಮಯದ ದೇವಿಯ ಸೀರೆಗಳ ಕುಪ್ಪಸಗಳು, ಮಡಿಗಳನ್ನು 2.10 ಲಕ್ಷ ರೂ ಗೆ ಹರಾಜು ಮಾಡಿದ್ದಾರೆ ಎಂದು ಆರೋಪಿದ್ದಾರೆ. ಅಲ್ಲದೆ ಈ ಬಗ್ಗೆ ಸಮಿತಿಯನ್ನು ಅಧ್ಯಕ್ಷರನ್ನು ಗ್ರಾಮಸ್ಥರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ವಿಚಾರಿಸಿದಾಗ ಕೇವಲ 60 ಸಾವಿರ ರೂ. ಹರಾಜಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.ರಾಜ್ಯಸೇರಿದಂತೆ ಜಿಲ್ಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ಹೊಂದಿರುವ ಅಂತರಘಟ್ಟೆಯ ಶ್ರೀ ದುರ್ಗಾಂಭ ದೇವಿ ದೇವಾಲಯಕ್ಕೆ ಕೋಟಿಗಟ್ಟಲೇ ಆದಾಯ ಹೊಂದಿದೆ. ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯದಲ್ಲಿ ಭಕ್ತಾಧಿಗಳು ಪ್ರತಿನಿತ್ಯ ಆಗಮಿಸಿ ಸಾವಿರಾರು ಬೆಲೆಬಾಳುವ ರೇಷ್ಮೆಸೀರೆಗಳ ಕುಪ್ಪಸಗಳು, ಹಣ ಸೇರಿದಂತೆ ಅನೇಕ ವಸ್ತುಗಳನ್ನು ಅರ್ಪಣೆ ಮಾಡುತ್ತಿದ್ದಾರೆ ಎಂದರು.
ದೇವಾಲಯ ಸಮಿತಿಯನ್ನು ರದ್ದುಗೊಳಿಸುವಂತೆ ದತ್ತ ಒತ್ತಾಯ: ಸೀರೆ ಕುಪ್ಪಸಗಳನ್ನು ಜಾತ್ರಾ ಸಮಯದಲ್ಲಿ ಹೊರರಾಜ್ಯಗಳಿಂದ ಅನೇಕ ಮಂದಿ ಆಗಮಿಸಿ ಲಕ್ಷಗಟ್ಟಲೇ ಹರಾಜು ಕೂಗಿ ಖರೀದಿಸುತ್ತಾರೆ. ಆ ಹಣದಿಂದ ದೇವಾಲಯ ಆದಾಯ ಹೆಚ್ಚಳವಾಗುತಿತ್ತು. ಆದರೆ ದೇವಾಲಯಕ್ಕೆ ಇತ್ತಿಚೇಗೆ ಸರ್ಕಾರದಿಂದ ಹೊಸದಾಗಿ ಧರ್ಮದರ್ಶಿ ಸಮಿತಿ ಸ್ಥಾಪಿಸಿದ್ದಾರೆ. ಜಾತ್ರೆಯ ಹರಾಜು ಸಮಯದಲ್ಲಿ ಮುಜರಾಯಿ ಇಲಾಖೆ, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಮನಕ್ಕೂ ತಾರದೇ ಸೀರೆಗಳ ಕುಪ್ಪಸಗಳನ್ನು ಲಕ್ಷಗಟ್ಟಲೇ ಹರಾಜು ನಡೆಸಿ ಗ್ರಾಮಸ್ಥರಿಗೆ ಕೇವಲ 60_70 ಸಾವಿರ ಹರಾಜಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.
Chikkamagaluru: ಅನೈತಿಕ ಚಟುವಟಿಕೆಗಳ ತಾಣವಾದ ಕಾಫಿನಾಡಿನ ಶಂಕರಪುರ ಸರ್ಕಾರಿ ಶಾಲೆ!
ಮುಂದಿನ ದಿನಗಳಲ್ಲಿ ದೇವಾಲಯ ಕಾರ್ಯಕ್ರಮಗಳಿಗೆ ಇದೇ ರೀತಿಯಲ್ಲಿ ಅನುಮತಿ ಪಡೆಯದಿದ್ದರೆ ದೇವಿಯ ಆಸ್ತಿ ಹಾಗೂ ಒಡವೆಗಳನ್ನು ಹರಾಜು ಮಾಡುವುದರಲ್ಲಿ ಸಂದೇಹವಿಲ್ಲ. ಅಧಿಕಾರದ ಪ್ರಭಾವದಿಂದ ಕೂಡಿರುವ ಬಿಲ್ಕಲೆಕ್ಟರ್ ದೇವಾಲಯದಿಂದ ಬಂದಂತಹ ಹಣ ಮತ್ತು ಒಡವೆಗಳನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು. ಆದ್ದರಿಂದ ಪ್ರಸ್ತುತ ಇರುವ ದೇವಾಲಯ ಸಮಿತಿಯನ್ನು ರದ್ದುಗೊಳಿಸಿ ಹೊಸ ಆಡಳಿತಾಧಿಕಾರಿ ಯನ್ನು ನೇಮಕ ಮಾಡಿ ಶ್ರೀ ದುರ್ಗಾಂಬ ದೇವಿಯ ದೇವಾಲಯದ ಅಭಿವೃದ್ಧಿಗಾಗಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರದೀಪ್, ಚಂದ್ರಪ್ಪ, ಬಸವರಾಜ್ ಮತ್ತಿತರರು ಹಾಜರಿದ್ದರು.