ಹಿನ್ನೀರಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ : ಸುದ್ದಿ ಕೇಳಿ ಅಜ್ಜಿಯೂ ಹೃದಯಾಘಾತದಿಂದ ನಿಧನ

Suvarna News   | Asianet News
Published : Apr 09, 2021, 12:19 PM ISTUpdated : Apr 09, 2021, 01:16 PM IST
ಹಿನ್ನೀರಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ  : ಸುದ್ದಿ ಕೇಳಿ ಅಜ್ಜಿಯೂ ಹೃದಯಾಘಾತದಿಂದ ನಿಧನ

ಸಾರಾಂಶ

ಹಿನ್ನೀರಿನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದು ಈ ಸುದ್ದಿ ಕೇಳಿ ಅಜ್ಜಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗು(ಏ.09): ಕೊಡಗು ಜಿಲ್ಲೆ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಯುವಕನೋರ್ವ ದುರ್ಮರಣವನ್ನಪ್ಪಿದ್ದು, ಆ ಸಾವಿನ ಸುದ್ದಿ ಕೇಳಿ ಇತ್ತ ಆತನ ಅಜ್ಜಿಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಕೊಡಗು ಜಿಲ್ಲೆಯ ಐಗೂರಿನ ರಮ್ಲಾನ್ ಎಂಬುವವರ ಪುತ್ರ  ಮುಬಾಸಿರ್ (18) ಹೊಸತೋಟ ಸಮೀಪದ ಹಾರಂಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗುರುವಾರ (ಏ.08)  ಸ್ನೇಹಿತರ ಜೊತೆ ಈಜಲು ತೆರಳಿದ್ದ ಮುಬಾಸಿರ್ ಮೃತದೇಹ  ಇಂದು ಮುಂಜಾನೆ ಪತ್ತೆಯಾಗಿದೆ.   

ಒಂಟಿ ಮನೆಯ ಬಾತ್ ರೂಂ ನಲ್ಲಿ ವೃದ್ಧೆಯ ಹೆಣ.. ಸಾಲ ಮತ್ತು ಕೊರೋನಾ! ..

ಇತ್ತ ಮೊಮ್ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅಜ್ಜಿ ರುಖಿಯಾ (62) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಎರೆಡೆರಡು ಆಘಾತ ಕುಟುಂಬದ ಮೇಲೆರಗಿದೆ.

ಕೊಡಗು ಜಿಲ್ಲೆ  ಸುಂಟಿಕೊಪ್ಪ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

PREV
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ