ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೂಸಳ್ಳಿ ಫಾಲ್ಸ್‌ನಲ್ಲಿ ಶುಕ್ರವಾರ ಸಂಜೆ ಫಾಲ್ಸ್ ನೋಡಲು ಬಂದ ಕೊಪ್ಪದ ಎ.ಎಸ್.ಐ ಕುಮಾರ ಶೆಟ್ಟಿಅವರ ಪುತ್ರ ಚಿರಂತ್ ಶೆಟ್ಟಿ(Chirant shetty)(20) ಮೃತ ವಿದ್ಯಾರ್ಥಿ
ಉಡುಪಿ (ಏ.9) : ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೂಸಳ್ಳಿ ಫಾಲ್ಸ್‌ನಲ್ಲಿ ಶುಕ್ರವಾರ ಸಂಜೆ ಫಾಲ್ಸ್ ನೋಡಲು ಬಂದ ಕೊಪ್ಪದ ಎ.ಎಸ್.ಐ ಕುಮಾರ ಶೆಟ್ಟಿಅವರ ಪುತ್ರ ಚಿರಂತ್ ಶೆಟ್ಟಿ(Chirant shetty)(20) ಮೃತ ವಿದ್ಯಾರ್ಥಿ.
ಈತ ಪಿಜಿಯಲ್ಲಿ ವಾಸ್ತವ್ಯವಿದ್ದು ಮಂಗಳೂರಿನ ಕಾಲೇಜೊಂದರಲ್ಲಿ 2ನೇ ವರ್ಷದ ಬಿಕಾಂ ಜೊತೆಗೆ ಏವಿಯೇಷನ್ ಕೋರ್ಸ್(Aviation Course) ಕಲಿಯುತ್ತಿದ್ದ. ಚಿರಂತ್ ಶೆಟ್ಟಿ ಗುಡ್ ಫ್ರೈಡೆ ರಜೆಗೆಂದು ತನ್ನ ತರಗತಿಯ ಹಾಗೂ ಪಿಜಿಯಲ್ಲಿನ ಸ್ನೇಹಿತರೊಂದಿಗೆ ಗುರುವಾರ ರಾತ್ರಿ ಬೈಂದೂರಿಗೆ ಬಂದು ಉಳಿದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಸ್ನೇಹಿತರ ಮನೆಯಲ್ಲಿ ಊಟ ಮುಗಿಸಿ ಬೈಕ್‌ನಲ್ಲಿ ಕೋಸಳ್ಳಿ ಫಾಲ್ಸ್(Kusalli falls) ವೀಕ್ಷಣೆಗೆ ತೆರಳಿದ್ದರು.
undefined
ಡ್ಯಾಂನಲ್ಲಿ ಈಜಲು ಹೋಗಿ ಕಾಲೇಜು ವಿದ್ಯಾರ್ಥಿನಿಯರು ಸಾವು: ಟ್ರಿಪ್‌ಗೆ ಹೋದವರು ಮಸಣ ಸೇರಿದರು
ಚಿರಂತ್ ಶೆಟ್ಟಿಹೊರತುಪಡಿಸಿ ಉಳಿದವರಾರಯರಿಗೂ ಈಜು ಬಾರದ ಕಾರಣ ನೀರಿಗೆ ಇಳಿಯದೆ ಸ್ನೇ ಹಿತರೆಲ್ಲ ದಡದಲ್ಲಿ ಕುಳಿತಿದ್ದರು. ನೀರಿಗಿಳಿದ ಚಿರಂತ್ ಶೆಟ್ಟಿಶುಕ್ರವಾರ ನಾಪತ್ತೆಯಾದ ಬಗ್ಗೆ ಬೈಂದೂರು ಠಾಣೆ(Byndur police Station)ಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಶನಿವಾರ ಶವ ಪತ್ತೆಯಾಗಿತ್ತು. ನಂತರ ಶವವನ್ನು ವಶಕ್ಕೆ ಪಡೆದ ಕುಟುಂಬಸ್ಥರು ಮೃತನ ಅಜ್ಜಿಯ ಮನೆಯಾದ ಬಿದರಗೋಡು ಸಮೀಪದ ದೇವಾಲೆಕೊಪ್ಪದಲ್ಲಿ ಶವಸಂಸ್ಕಾರ ನಡೆಯಿತು. ಮೃತ ಚಿರಂತ್, ತಂದೆ, ತಾಯಿ, ಓರ್ವ ಸಹೋದರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾನೆ.