ಶೌಚಾಲಯದ ಮೂಲಕ ಮನುಷ್ಯನ ದೇಹಕ್ಕೆ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ‘ಸುಡೊಮೊನಾಸ್’ ಎಂಬ ಅಪರೂಪದ ಕಾಯಿಲೆಗೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಅವಿವಾಹಿತ ಯುವಕನೊಬ್ಬರು ಬಲಿಯಾಗಿದ್ದಾರೆ.
ಮಂಗಳೂರು(ಫೆ.08): ಶೌಚಾಲಯದ ಮೂಲಕ ಮನುಷ್ಯನ ದೇಹಕ್ಕೆ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ‘ಸುಡೊಮೊನಾಸ್’ ಎಂಬ ಅಪರೂಪದ ಕಾಯಿಲೆಗೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಅವಿವಾಹಿತ ಯುವಕನೊಬ್ಬರು ಬಲಿಯಾಗಿದ್ದಾರೆ.
ಬಜತ್ತೂರು ಗ್ರಾಮದ ಮಣಿಕ್ಕಳಬೈಲು ಬರೆಮೇಲು ನಿವಾಸಿ ಚೆನ್ನಪ್ಪ ಗೌಡ ಅವರ ಪುತ್ರ ಶ್ರೀಧರ ಗೌಡ (29) ಮೃತಪಟ್ಟಯುವಕ. ವರ್ಷದ ಹಿಂದೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದರು.
ಕರಾವಳಿಗೆ ಕೊರೋನಾ ಭೀತಿ, ಉಡುಪಿಯಲ್ಲಿ ಶಂಕಿತ ಪ್ರಕರಣಗಳು ಪತ್ತೆ
ಕೆಲ ದಿನಗಳ ಹಿಂದೆ ಹೊಟ್ಟೆನೋವು ಪ್ರಾರಂಭಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆನೋವು ಕಡಿಮೆಯಾದರೂ ಚೇತರಿಸಿಕೊಳ್ಳದ ಶ್ರೀಧರ್ ಗೌಡ ಅವರು ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರು ತಂದೆ, ತಾಯಿ, ಮೂರು ಮಂದಿ ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.