
ಚಾಮರಾಜನಗರ(ಅ.18): ಚಾಮರಾಜನಗರ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ದಸರಾ ಯುವ ಕವಿಗೋಷ್ಠಿಗೆ ಯುವಜನರು ಬಾರದೇ ಮುಕ್ತಾಯವಾಗಿದೆ. ನಗರದ ಡಾ. ರಾಜ್ ಕುಮಾರ್ ಕಲಾ ಮಂದಿರದಲ್ಲಿ ದಸರಾ ಯುವ ಕವಿಗೋಷ್ಠಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೆ 12 ಗಂಟೆಯಾದರೂ ಆರಂಭವಾಗಿರಲಿಲ್ಲ. ಬೆಳಿಗ್ಗೆ 11ಕ್ಕೆ ಕವಿಗೋಷ್ಠಿ ಉದ್ಘಾಟನೆಗೆ ಸಚಿವರು ಆಗಮಿಸಬೇಕಿತ್ತು. ಸಚಿವರು ಇತರೆ ಕಾರ್‍ಯಕ್ರಮಗಳು ಹಾಗೂ ರೈತರ ಸಭೆಗೆ ಹೋಗಿದ್ದರಿಂದ ಕವಿಗೋಷ್ಠಿಗೆ ಬಂದಿರಲಿಲ್ಲ.
ಕವಿಗೋಷ್ಠಿಗೆ ಸಚಿವರು ಆಗಮಿಸುತ್ತಾರೆ ಎಂದು ಕವಿಗೋಷ್ಠಿ ಉದ್ಘಾಟನೆಗೆ ಕಾಯುತ್ತಿದ್ದರಿಂದ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗದೇ 12.30 ಗಂಟೆವರಗೂ ಕಾಯುವಂತಾಗಿತ್ತು. ಮಧ್ಯಾಹ್ನ 12.30 ಗಂಟೆ ಆದರೂ ಸಚಿವರು ಆಗಮಿಸಿ ಉದ್ಘಾಟನೆ ಮಾಡದಿದ್ದರಿಂದ ಕವಿಗೋಷ್ಠಿಯನ್ನು ಪ್ರಾರಂಭಿಸಲಾಯಿತು.
ರಾಜಧನ ಸೋರಿಕೆ ತಡೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸುತ್ತೋಲೆ!
ಮಧ್ಯಾಹ್ನ 12.30 ಗಂಟೆಗೆ ಕವಿಗೋಷ್ಠಿ ಪ್ರಾರಂಭವಾಗಿದ್ದರಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಕಾಲೇಜಿನ ಯುವತಿಯರು ಕವಿಗೋಷ್ಠಿಯಲ್ಲಿ ಕುಳಿತಿದ್ದರು. ಯುವ ಕವಿಗೋಷ್ಠಿ ಪ್ರಾರಂಭವಾದಾಗ ಊಟದ ಸಮಯವಾಗಿದ್ದರಿಂದ ಯುವತಿಯರು ಕವಿಗೋಷ್ಠಿ ಕಾರ್‍ಯಕ್ರಮದಿಂದ ಹೊರಗೆ ಹೋಗಿದ್ದರಿಂದ ಯುವ ಕವಿಗೋಷ್ಠಿಯಲ್ಲಿ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಮಧ್ಯಾಹ್ನ 2.30ರ ವರೆಗೂ ಯುವಗೋಷ್ಠಿಯ ಉದ್ಘಾಟನೆ ನಡೆಯದೇ ಯುವ ಜನರಿಲ್ಲದೇ ಮುಕ್ತಾಯವಾಯಿತು.
ಕವಿಗೋಷ್ಠಿಯಲ್ಲಿ ಕವಿ ನಾಗೇಂದ್ರ ಕುಮಾರ್ ಮಾತನಾಡಿ, ಸಹ ಯುವ ಕವಿಗೋಷ್ಠಿ ಯುವಜನರಿಗೆ ತಲುಪಬೇಕಿತ್ತು. ತಡವಾಗಿದ್ದರಿಂದ ಯುವಜನರು ತೆರಳಿದ್ದಾರೆ ಎಂದು ಕಾರ್‍ಯಕ್ರಮ ತಡವಾಗಿದ್ದಕ್ಕೆ ವೇದಿಕೆಯಲ್ಲೇ ಬೇಸರ ವ್ಯಕ್ತಪಡಿಸಿದರು.