ಕ್ರಿಕೆಟ್ ಕಮೆಂಟ್ರಿ ನೀಡುವಾಗ ಮೈಕ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಸಾವು

Published : Jul 01, 2019, 08:36 AM IST
ಕ್ರಿಕೆಟ್ ಕಮೆಂಟ್ರಿ ನೀಡುವಾಗ ಮೈಕ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಸಾವು

ಸಾರಾಂಶ

ಕ್ರಿಕೆಟ್ ಕಮೆಂಟ್ರಿ ನೀಡುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವಿಗೀಡಾಗಿದ್ದಾನೆ. ಮೈಕ್ ನಲ್ಲಿ ವಿದ್ಯುತ್ ಪ್ರವಹಿಸಿ ಈ ದುರಂತವಾಗಿದೆ. 

ನೆಲಮಂಗಲ [ಜು.1]: ಕ್ರಿಕೆಟ್‌ ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಮೈಕ್‌ನಲ್ಲಿ ನೀಡುತ್ತಿದ್ದ ಯುವಕನೊಬ್ಬ, ಮೈಕ್‌ ಮೂಲಕ ವಿದ್ಯುತ್‌ ಪ್ರವಹಿಸಿದ ಹಿನ್ನೆಲೆ ಮೃತಪಟ್ಟಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಚೇನಹಳ್ಳಿಯಲ್ಲಿ ನಡೆದಿದೆ.

ಕೊಟ್ಟನಹಳ್ಳಿ ಗ್ರಾಮದ ನಿವಾಸಿ ಕಿರಣ್‌(22) ಮೃತಪಟ್ಟವರು. ಭಾನುವಾರ ರಜೆ ಇದ್ದ ಕಾರಣ ಯುವಕರೆಲ್ಲ ಸೇರಿ ಕ್ರಿಕೆಟ್‌ ಆಡುತ್ತಿದ್ದರು. ಈ ಸಂದರ್ಭದಲ್ಲಿ ಆಟಗಾರರನ್ನು ಹುರಿದುಂಬಿಸುತ್ತಾ ಹೊಡೆದ ಬಾಲು ಹಾಗೂ ರನ್‌ ಮತ್ತು ಆಟಗಾರರ ಆಟದ ವೈಖರಿಯನ್ನು ಕಿರಣ್‌ ಮೈಕ್‌ ಮೂಲಕ ವಿವರಿಸುತ್ತಿದ್ದರು. 

ಈ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಮೈಕ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡ ಸಂಭವಿಸಿದೆ. ಅಲ್ಲಿದ್ದವರು ಘಟನೆ ಕಂಡು ವಿಚಲಿತರಾದರು. ತಕ್ಷಣ ನೆಲಮಂಗಲದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನದಲ್ಲಿರುವಾಗಲೇ ಮಾರ್ಗ ಮಧ್ಯದಲ್ಲಿಯೇ ಕಿರಣ್‌ ಕೊನೆಯುಸಿರೆಳೆದರು ಎನ್ನಲಾಗಿದೆ.

ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC