ಯುವತಿ ಬೆಂಬಲಕ್ಕೆ ನಿಂತ ನಲಪಾಡ್ ಟೀಂ : 'ಅತ್ಯಾಚಾರಕ್ಕೆ ನ್ಯಾಯ ಸಿಗ್ಲಿ'

By Kannadaprabha NewsFirst Published Mar 29, 2021, 1:05 PM IST
Highlights

ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಯುವತಿ ಮೇಲೆ ಅತ್ಯಾಚಾರವಾಗಿದೆ. ಆಕೆಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಒದಗಿಸಬೇಕು ಎಂದು ನಲಪಾಡ್ ಹೇಳಿದರು

ಬೆಂಗಳೂರು (ಮಾ.29) : ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದರು. 

ಇಂದು ಬೆಳಗ್ಗೆ ಪೊಲೀಸ್ ಠಾಣೆ ಮುಂದೆ ಸೇರಿದ ಯೂತ್ ಕಾಂಗ್ರೆಸ್ ಮುಕಂಡರು,  ಸಿಡಿ ರಮೇಶ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. 

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ನೇತೃತ್ವದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದು, ರಮೇಶ್ ಜಾರಕಿಹೊಳಿ ಬಂಧಿಸಬೇಕು ಎಂದು ಆಗ್ರಹಿಸಿದರು. 

ನಲಪಾಡ್‌ಗೆ ಬಿಗ್ ಶಾಕ್: ಚುನಾವಣೆಯಲ್ಲಿ ಗೆದ್ದರೂ ಒಲಿಯಲಿಲ್ಲ ಯುವ ಅಧ್ಯಕ್ಷ ಪಟ್ಟ ..

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ ಜಾರಕಿಹೊಳಿಯನ್ನು ಬಂಧನ ಮಾಡುವವರೆಗೆ ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಈಗಾಗಲೇ 27 ದಿನ ಕಳೆದಿದೆ. ಆದರೂ ರಮೇಶ್ ಜಾರಕಿಹೊಳಿಯನ್ನು ಬಂಧಿಸಿಲ್ಲ. ಎಸ್ ಐಟಿ ಜಾರಕಿಹೊಳಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಬಂಧನದವರೆಗೂ ಪ್ರತಿಭಟನೆ ನಿಲ್ಲಲ್ಲ ಎಂದು ಸವಾಲು ಹಾಕಿದ್ದಾರೆ. 

ಈ ವೇಳೆ ಮಾತನಾಡಿದ ನಲಪಾಡ್ ಹ್ಯಾರಿಸ್ ಯುವತಿಗೆ ಆಗಿರೋದು ಅನ್ಯಾಯ. ಮೊದಲು ಜಾರಕಿಹೊಳಿ ಬಂಧನ ಮಾಡಲಿ. ಬಂಧನ ಮಾಡದೇ ಇದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಮಹಿಳೆಯ ಮೇಲೆ ಅತ್ಯಾಚಾರ ಆರೋಪ ರಮೇಶ್ ಮೇಲೆ ಇದೆ.  ಇನ್ನು ಡಿಕೆ ಶಿವಕುಮಾರ್ ಮೇಲೆ ಅಟ್ಯಾಕ್ ಮಾಡೋದಕ್ಕೆ ಬೆಂಬಲಿಗರು ಮುಂದಾಗಿದ್ದಾರೆ‌. ರಮೇಶ್ ಜಾರಕಿಹೊಳಿಯನ್ನು   ಮನೆಯಿಂದ ಹೊರಗೆ ಬರೋಕೆ ಬಿಡಲ್ಲ ಎಂದರು.

ಪ್ರತಿಭಟನೆ ಮಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಬಿಎಂಟಿಸಿ ಬಸ್ಸಿನಲ್ಲೇ ಕರೆದೊಯ್ದರು.

click me!