ಸಿಡಿ ಕೇಸ್‌: 'ಕಾಂಗ್ರೆಸ್‌ ಜಾರಕಿಹೊಳಿ ಮೇಲೆ ದ್ವೇಷ ಸಾಧಿಸುತ್ತಿರೋದು ತಪ್ಪು'

By Kannadaprabha News  |  First Published Mar 29, 2021, 12:35 PM IST

ರಮೇಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ ಅಥವಾ ಇನ್ನೊಬ್ಬರು ಯಾರೇ ಆಗಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುವುದು ಖಚಿತ| ಸಚಿವ ಸುಧಾಕರ ಹೇಳಿಕೆಗೆ ಶಾಸಕ ದಢೇಸ್ಗೂರು ಸಮರ್ಥನೆ| ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು| 


ಕನಕಗಿರಿ(ಮಾ.29): ಈಗಾಗಲೇ ಸಿಡಿ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದು ಶಾಸಕ ಬಸವರಾಜ ದಢೇಸ್ಗೂರು ಹೇಳಿದ್ದಾರೆ.

ಭಾನುವಾರ ಪಟ್ಟಣಕ್ಕೆ ಭೇಟಿ ನೀಡಿ 16ನೇ ವಾರ್ಡ್‌ನ ಸಂಗೊಳ್ಳಿ ರಾಯಣ್ಣ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿ, ರಮೇಶ ಜಾರಕಿಹೊಳಿ, ಡಿ.ಕೆ. ಶಿವಕುಮಾರ ಅಥವಾ ಇನ್ನೊಬ್ಬರು ಯಾರೇ ಆಗಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುವುದು ಖಚಿತ. ಸಿಡಿಯನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್‌ ಜಾರಕಿಹೊಳಿ ಮೇಲೆ ದ್ವೇಷ ಸಾಧಿಸುತ್ತಿರುವುದು ತಪ್ಪು ಎಂದರು.

Tap to resize

Latest Videos

ಕೊಪ್ಪಳ: ಮಿರ್ಚಿ ಭಜಿ ಸ್ವತಃ ಹಾಕಿ ತಿಂದ ಬಿ.ವೈ.ವಿಜಯೇಂದ್ರ

ಸಚಿವರ ಹೇಳಿಕೆಗೆ ಸಮರ್ಥನೆ:

225 ಶಾಸಕರು ಶ್ರೀರಾಮಚಂದ್ರರಾ? ಎಂಬ ಸಚಿವ ಸುಧಾಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ದಢೇಸ್ಗೂರು, ಒಬ್ಬ ವೈದ್ಯನಾಗಿ ಹೇಳಬೇಕಾಗಿದ್ದನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಇದನ್ನು ಕೆಲವರು ಆಳವಾಗಿ ತೆಗೆದುಕೊಂಡು ವಿಧಾನಸೌಧದಲ್ಲಿ ಚರ್ಚಿಸಿದ್ದಾರೆ. ಸಚಿವ ಸುಧಾಕರ ಹೇಳಿಕೆ ಸರಿಯಿದೆ ಎನ್ನುವ ಮೂಲಕ ಸಮರ್ಥಿಸಿಕೊಂಡರು.

ಇನ್ನೂ ಇದಕ್ಕೂ ಮೊದಲು ಪಟ್ಟಣದ 16ನೇ ವಾರ್ಡ್‌ನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಿರ್ಮಾಣವಾದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಹಾಗೂ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ, ಕಟ್ಟಡದ ಗುಣಮಟ್ಟವನ್ನು ಪರಿಶೀಲಿಸಿದರು.
 

click me!