ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ

Kannadaprabha News   | Asianet News
Published : Aug 14, 2021, 11:17 AM IST
ಸೆಕ್ಸ್ ವಿಡಿಯೋ ತೋರಿಸಿ  ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ

ಸಾರಾಂಶ

ಯುವತಿ ಜೊತೆಗೆ ಇದ್ದ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದರಿಂದ ನೊಂದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಬೆಂಗಳೂರು (ಆ.14): ಯುವತಿ ಜೊತೆಗೆ ಇದ್ದ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದರಿಂದ ನೊಂದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಉಪ್ಪಾರಪೇಟೆ  ಲಾಡ್ಜ್‌ನಲ್ಲಿ ಶುಕ್ರವಾರ ದುರ್ಘಟನೆ ನಡೆದಿದ್ದು ಯುವಕನನ್ನು ಹಾಸನ ಜಿಲ್ಲೆಯ  ಅರಸೀಕೆರೆ ನಿವಾಸಿ ಸುಪ್ರಿತ್ (32) ಎನ್ನಲಾಗಿದೆ. 

ಈ ಸಂಬಂಧ ಮೃತನಿಗೆ  ಬ್ಲಾಕ್‌ಮೇಲ್ ಮಾಡುತ್ತಿದ್ದ  ನಾಲ್ವರು  ಬಾಲಕರನ್ನು ಉಪ್ಪಾರಪೇಟೆ   ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆಸ್ಕಾಂನಲ್ಲಿ ಸುಪ್ರಿತ್ ಸಹಾಯಕನಾಗಿ  ಕೆಲಸ ಮಾಡುತ್ತಿದ್ದ.  ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. 

11 ನಿಮಿಷ ಮಾತ್ರ ರೇಪ್‌ ಆಗಿದೆ ಎಂದು ಶಿಕ್ಷೆ ಕಮ್ಮಿ!

ಕೆಲ ತಿಂಗಳ ಹಿಂದೆ ಅರಸಿಕೆರೆಯ ಬೆಟ್ಟವೊಂದಕ್ಕೆ ಯುವತಿ ಜೊತೆ ಹೋಗಿದ್ದ ಸುಪ್ರಿತ್ ಯುವತಿ ಜೊತೆ ಇದ್ದ ಖಾಸಗಿ ಕ್ಷಣದ ವಿಡಿಯೋವನ್ನು ಅಲ್ಲಿಯೇ ಇದ್ದ ನಾಲ್ವರು ಬಾಲಕರು  ಸೆರೆ ಹಿಡಿದ್ದು ಈ ವಿಡಿಯೋ  ತೋರಿಸಿ ಬ್ಲಾಕ್‌ ಮೇಲ್ ಮಾಡಲಾಗುತಿತ್ತು. 

ಹಣ ಕೊಡಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದರು.  ಹೀಗೆ ಬಾಲಕರು ಕೇಳಿದಾಗಲೆಲ್ಲಾ  ಸುಪ್ರಿತ್ ಹಣ ಕೊಡುತ್ತಿದ್ದ.  ಇತ್ತೀಚೆಗೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು  ಯುವತಿಯ ನಂಬರ್ ಕೊಡುವಂತೆಯೂ ಪೀಡಿಸುತ್ತಿದ್ದರು. ಇದರಿಂದ ಆತಂಕಗೊಂಡ ಸುಪ್ರಿತ್ ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.  

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ