ಅಕ್ಕ ಶಾಹೀದಾಬೇಗಂ ವಯೋಸಹಜ ಕಾಯಿಲೆಗಳಿಂದ ನಿಧನರಾದರು. ಅಕ್ಕ ನಿಧನರಾದ ಬಳಿಕ ಮಧ್ಯರಾತ್ರಿ ಸುಮಾರಿಗೆ ಸಹೋದರ ಸೈಯದ್ ಸಪ್ದರ್ ಅಲಿ ನಗರದ ದಿವಟರ್ ಸರ್ಕಲ್ ಬಳಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಕೊಪ್ಪಳ(ಆ.13): ನಗರದಲ್ಲಿ ಒಂದೇ ದಿನ ಅಕ್ಕ-ತಮ್ಮ ಮೃತಪಟ್ಟು, ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ನಗರದ ಮೆಹಬೂಬ್ ನಗರದಲ್ಲಿ ಅಕ್ಕ ಶಾಹೀದಾಬೇಗಂ (70) ವಯೋಸಹಜ ಕಾಯಿಲೆಗಳಿಂದ ನಿಧನರಾದರು. ಅಕ್ಕ ನಿಧನರಾದ ಬಳಿಕ ಮಧ್ಯರಾತ್ರಿ ಸುಮಾರಿಗೆ ಸಹೋದರ ಸೈಯದ್ ಸಪ್ದರ್ ಅಲಿ (60) ನಗರದ ದಿವಟರ್ ಸರ್ಕಲ್ ಬಳಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕೊಪ್ಪಳದಲ್ಲಿಯೇ ಶನಿವಾರ ಬೆಳಗ್ಗೆ ಇಬ್ಬರ ಅಂತ್ಯಕ್ರಿಯೆ ನೆರವೇರಿಸಲಾಯಿತು.
undefined
ಹುಲಿಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಬಿಡಿಗಾಸು ನೀಡದ ರಾಜ್ಯ ಸರ್ಕಾರ: ಆರೋಪ
ಒಂದೇ ದಿನದಲ್ಲಿ ಅಕ್ಕ-ತಮ್ಮ ಮೃತಪಟ್ಟ ವಿಷಯ ಕೇಳಿ ಕುಟುಂಬದವರು, ಬಂಧು-ಬಳಗದವರು ಕಂಬನಿ ಮಿಡಿದಿದ್ದಾರೆ.