ಬೆಂಗಳೂರು: ಭದ್ರತೆಯ ಹೆಸರಲ್ಲಿ ಯುವತಿಯ ಶರ್ಟ್‌ ತೆಗೆಸಿದ ಏರ್‌ಪೋರ್ಟ್‌ ಸಿಬ್ಬಂದಿ ವಿರುದ್ಧ ಯುವತಿ ಗರಂ..!

By Girish GoudarFirst Published Jan 5, 2023, 3:20 AM IST
Highlights

ಭದ್ರತೆಯ ಹೆಸರಲ್ಲಿ ತಾನು ಧರಿಸಿದ್ದ ಶರ್ಟ್ ತೆಗೆಸಿದ್ದಾರೆ, ಇದ್ರಿಂದ ನನಗೆ ಅವಮಾನ ಆಗಿದೆ ಅಂತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಿಡಿ ಕಾರಿದ ಯುವತಿ.  

ಬೆಂಗಳೂರು(ಜ.05): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಶರ್ಟ್ ತೆಗೆದು camisole ಅಲ್ಲಿ ನಿಲ್ಲಿಸಿದ್ದಾರೆ ಅಂತ ಟ್ವೀಟ್ ಮಾಡಿ ಕ್ರಿಶಾನಿ ಗಡವಿ ಎಂಬ ಯುವತಿಯೊಬ್ಬಳು ಕಿಡಿ ಕಾರಿದ್ದಾಳೆ. ಇದೀಗ ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. 

ಭದ್ರತೆಯ ಹೆಸರಲ್ಲಿ ತಾನು ಧರಿಸಿದ್ದ ಶರ್ಟ್ ತೆಗೆಸಿದ್ದಾರೆ, ಇದ್ರಿಂದ ನನಗೆ ಅವಮಾನ ಆಗಿದೆ ಅಂತ ಕ್ರಿಶಾನಿ ಗಡವಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಿಡಿ ಕಾರಿದ್ದಾರೆ. 

Covid 4th Wave: ಕೋವಿಡ್‌ ಹೈರಿಸ್ಕ್ ದೇಶಗಳಿಂದ 2,867 ಪ್ರಯಾಣಿಕರ ಆಗಮನ: 12 ಮಂದಿಗೆ ಸೋಂಕು

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆಗಿದ್ದೇನು?

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಯುವತಿ ಟ್ರಾವೆಲ್ ಮಾಡ್ತಿರ್ತಾಳೆ. ಆಗ ಭದ್ರತೆಯ ದೃಷ್ಟಿಯಿಂದ ಸೆಕ್ಯುರಿಟಿ ಚೆಕ್ ಮಾಡಲಾಗುತ್ತೆ. ಆ ಸಮಯದಲ್ಲಿ ಆಕೆ ಹಾಕಿರುವ ಶರ್ಟ್ ತೆಗೆಸಿ ಆಕೆಯನ್ನ ಸ್ಪೆಗಿಟಿ ಅಲ್ಲಿ ನಿಲ್ಲಿಸಿದ್ದಾರೆ ಅಂತ ಯುವತಿ ಆರೋಪಿಸಿದ್ದಾರೆ. 

ಆಗ ಉಳಿದ ಟ್ರಾವೆಲರ್ಸ್ ಆಕೆಯನ್ನು ದಿಟ್ಟಿಸಿ ನೋಡಿರುತ್ತಾರೆ. ಇದ್ರಿಂದ ನನಗೆ ಅವಮಾನ ಆಗಿದೆ ಅಂತ ಕ್ರಿಶಾನಿ ಗಡವಿ ಟ್ವೀಟ್ ಮಾಡಿದ್ದಾರೆ. ಯುವತಿ ಟ್ವೀಟ್‌ಗೆ ವಿಮಾನ ನಿಲ್ದಾಣದ ಟೀಂ ಸ್ಪಂದಿಸಿದೆ.  ಈ ಘಟನೆ ಬಗ್ಗೆ ನಮಗೆ ಕೂಡ ಬೇಸರ ತಂದಿದೆ. ಈ ವಿಚಾರದ ಬಗ್ಗೆ ತನಿಖೆಯನ್ನ ಮಾಡ್ತೀವಿ ಅಂತಾ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಿದೆ. 

click me!