ಬೆಂಗಳೂರು-ಮೈಸೂರು ಹೈವೇಗೆ ನಾಲ್ವಡಿ, ಕಾವೇರಿ ಹೆಸರಿಗೆ ಪೈಪೋಟಿ

By Kannadaprabha News  |  First Published Jan 5, 2023, 12:30 AM IST

ಬೆಂಗಳೂರು-ಮೈಸೂರು ‘ದಶಪಥ’ ಹೆದ್ದಾರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’ ಹೆಸರಿಡುವಂತೆ ಒಂದೆಡೆ ಕೂಗೆದ್ದಿದ್ದರೆ, ಮತ್ತೊಂದೆಡೆ ‘ಕಾವೇರಿ’ ಹೆಸರಿಡಬೇಕೆಂದು ಪೈಪೋಟಿಗೆ ಬಿದ್ದ ಜನಪ್ರತಿನಿಧಿಗಳು


ಮಂಡ್ಯ(ಜ.05): ಬೆಂಗಳೂರು-ಮೈಸೂರು ‘ದಶಪಥ’ ಹೆದ್ದಾರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’ ಹೆಸರಿಡುವಂತೆ ಒಂದೆಡೆ ಕೂಗೆದ್ದಿದ್ದರೆ, ಮತ್ತೊಂದೆಡೆ ‘ಕಾವೇರಿ’ ಹೆಸರಿಡಬೇಕೆಂದು ಜನಪ್ರತಿನಿಧಿಗಳು ಪೈಪೋಟಿಗೆ ಬಿದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ವಿಧಾನ ಪರಿಷತ್‌ ಸದಸ್ಯರಾದ ದಿನೇಶ್‌ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ ಅವರು ಹೆದ್ದಾರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’ ಹೆಸರಿಡುವುದೇ ಸೂಕ್ತ ಎಂಬ ಕೋರಿಕೆ ಇಟ್ಟಿದ್ದರೆ, ಪವಿತ್ರ ನದಿಗಳಲ್ಲಿ ಒಂದಾಗಿರುವ ‘ಕಾವೇರಿ’ ನದಿಯ ಹೆಸರನ್ನು ‘ದಶಪಥ’ ಹೆದ್ದಾರಿಗೆ ನಾಮಕರಣ ಮಾಡುವಂತೆ ಸಂಸದ ಪ್ರತಾಪ್‌ ಸಿಂಹ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ.

ಎಸ್‌.ಎಂ.ಕೃಷ್ಣರ ಪತ್ರದಲ್ಲಿ 1902 ರಿಂದ 1940ರವರೆಗೆ ಮೈಸೂರು ಒಡೆಯರಾಗಿದ್ದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’ ತಮ್ಮ ಆದರ್ಶ ಆಡಳಿತದ ಮೂಲಕ ಮೈಸೂರು ಸಂಸ್ಥಾನಕ್ಕೆ ಶ್ರೀಮಂತಿಕೆ ತಂದುಕೊಟ್ಟರು. ನಾಡಿಗೆ ಅವಿಸ್ಮರಣೀಯ ಕೊಡುಗೆ ನೀಡಿರುವ ಅವರನ್ನು ‘ರಾಜರ್ಷಿ’ಎಂದು ಕರೆಯಲಾಗಿದೆ. ಅಂಥವರ ಹೆಸರನ್ನು ಹೆದ್ದಾರಿಗೆ ಇಡುವಂತೆ ಕೋರಿದ್ದಾರೆ.

Tap to resize

Latest Videos

ಸದ್ಯಕ್ಕೆ ರಾಜಕೀಯ ನಿವೃತ್ತಿ ಪಡೆಯಲ್ಲ : ಕೈ ನಾಯಕ

ಇನ್ನು ಮೈಸೂರು ಸಂಸದ ಪ್ರತಾಪ್‌ ಸಿಂಹ, ಭಾರತದ ಪರಂಪರೆಯಲ್ಲಿ ಗಂಗಾ, ಯಮುನೆ, ಸರಸ್ವತಿ, ಗೋದಾವರಿ, ನರ್ಮದಾ, ಸಿಂಧು, ಕಾವೇರಿ ಪವಿತ್ರ ನದಿಗಳಾಗಿವೆ. ಈ ಭಾಗದ ಜೀವ ನದಿಯಾಗಿ ಕಾವೇರಿ ಹರಿಯುತ್ತಿದೆ. ಹಾಗಾಗಿ ದಶಪಥಕ್ಕೆ ‘ಕಾವೇರಿ ಎಕ್ಸ್‌ಪ್ರೆಸ್‌’ ವೇ ಎಂದು ಹೆಸರಿಡುವಂತೆ ಮನವಿ ಮಾಡಿದ್ದಾರೆ.
 

click me!