ಶಿವಮೊಗ್ಗ: ತುಂಬಿ ಹರಿಯುವ ತುಂಗಾ ನದಿಗೆ ಹಾರಿ ಯುವಕನ ಹುಚ್ಚಾಟ

By Kannadaprabha News  |  First Published Jul 26, 2023, 12:33 PM IST

ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿ ಬಳಿಕ ದಡಕ್ಕೆ ತಲುಪಿದ್ದಾನೆ. ರಭಸವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಈಜುವ ದೃಶ್ಯ ದೃಶ್ಯದಲ್ಲಿ ಸೆರೆಯಾಗಿದೆ. 

ಶಿವಮೊಗ್ಗ(ಜು.26):  ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಯುವಕ ಹಾರಿರುವ ವಿಡಿಯೋ ಸಾಮಾಜಿಕ ಚಾಲತಾಣದಲ್ಲಿ ವೈರಲ್‌ ಆಗಿದೆ. ನಗರದ ಹೊಳೆ ಬಸ್‌ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ತಡಗೋಡೆ ಮೇಲೆ ನಿಂತು ಯುವಕನೊಬ್ಬ ನದಿಗೆ ಹಾರಿದ್ದಾನೆ. 

ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿ ಬಳಿಕ ದಡಕ್ಕೆ ತಲುಪಿದ್ದಾನೆ. ರಭಸವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಈಜುವ ದೃಶ್ಯ ದೃಶ್ಯದಲ್ಲಿ ಸೆರೆಯಾಗಿದೆ. 

Tap to resize

Latest Videos

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಬಂಡೆಯ ಮೇಲೆ ಪ್ರವಾಸಿಗರ ಹುಚ್ಚಾಟ..!

ಯುವಕ ನದಿಗೆ ಹಾರಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ನದಿಗೆ ಹಾರಿದ ಯುವಕನನ್ನು ಗಂಗಪ್ಪ ಎಂದು ಗುರುತಿಸಲಾಗಿದೆ. ಯುವಕನ ಹುಚ್ಚಾಟ ಕೆಲ ಕಾಲ ಆತಂಕ ಮೂಡಿಸಿತ್ತು.

click me!