ನದಿ ನೋಡಲು ಹೋಗಿ ಕಾಲುಜಾರಿ ಬಿದ್ದು ಯುವಕನ ದುರ್ಮರಣ| ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದ ಘಟನೆ| ಅ.13ರಂದೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಯುವಕ|
ನರಿಬೋಳ/ಜೇವರ್ಗಿ(ಅ.19): ಭೀಕರ ಭೀಮಾ ಪ್ರವಾಹ ಜಿಲ್ಲೆಯಲ್ಲಿ ಸಾವು- ನೋವಿನ ಸರಣಿಯನ್ನೇ ಹೊತ್ತು ತಂದಿದ್ದು, ನರಿಬೋಳ ಗ್ರಾಮದ ಭಗವಾನ ಹಡಪದ (22) ಎಂಬ ಯುವಕ ನದಿ ನೋಡಲು ಹೋಗಿ ಕಾಲುಜಾರಿ ಅ.13ರಂದೇ ಕೊಚ್ಚಿಕೊಂಡು ಹೋಗಿದ್ದಾನೆ.
ಈತನ ಪೋಷಕರಿಗೆ ಈ ಘಟನೆ ಮರ್ಮಾಘಾತ ಉಂಟು ಮಾಡಿದೆ. ಹೃದಯವಿದ್ರಾವಕ ಘಟನೆಗೆ ಹಡಪದ ಕುಟುಂಬ ಕಣ್ಣೀರಲ್ಲೇ ಕೈ ತೊಳೆಯುತ್ತಿದೆ. ಘಟನೆ ಸಂಭವಿಸಿ 6 ದಿನವಾದರೂ ಯುವಕನ ಶವ ಸಿಕ್ಕಿಲ್ಲ, ಹೀಗಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎನ್‌ಡಿಆರ್‌ಎಫ್‌ಸ ಎಸ್‌ಡಿಆರ್‌ಎಫ್‌ಸ ಅಗ್ನಿ ಶಾಮಕ ದಳ, ಪೊಲೀಸ್ ಸಿಬ್ಬಂದಿ, ಈಜುಗಾರರು ಎಲ್ಲರೂ ನರಿಬೋಳ ಹತ್ತಿರದ ಹನುಮಂತ ಮಂದಿರದ ಭೀಮಾ ಆಳದಲ್ಲಿ ತಡಕಾಡಿದರೂ ಶವದ ಪತ್ತೆ ಇಲ್ಲ. ನದಿ ರಭಸದಲ್ಲಿರೋದರಿಂದ ಶವ ಅದೆಲ್ಲಿ ಕೊಚ್ಚಿ ಹೋಗಿದೆಯೋ ಗೊತ್ತಾಗುತ್ತಿಲ್ಲ. ಬಿಎಸ್‌ಸಿ ಓದುತ್ತಿದ್ದ ಭಗವಾನ್ ಮನಿ ಮುಂದೆ ನದಿ ಬಂತಲ್ಲ ಎಂದು ಕುತೂಹಲದಿಂದ ಅ.13ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನೋಡಲು ಹೋಗಿದ್ದಾನೆ. ಬಹು ಹೊತ್ತಾದರೂ ಬಾರದ ಭಗವಾನ್‌ಗಾಗಿ ಮನೆಮಂದಿ ಹುಡಕಾಟಕ್ಕೆ ಮುಂದಾದಾಗÜ ಹನುಮಂತ ದೇವರ ಕಟ್ಟಿಪಕ್ಕದಲ್ಲೇ ಆತನ ಕಾಲಿನ ಸ್ಲೀಪರ್ ಚಪ್ಪಲ್ ಸಿಕ್ಕಿದೆ. ಹುಡುಗ ನಾಪತ್ತೆ. ಹೀಗಾಗಿ ನದಿ ನೀರಲ್ಲೇ ಆತ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಹೊಲಾ ಇಲ್ಲ, ಇದ್ದ ಒಂದ ಮನಿನೂ ಹೋತು...!
ಪರಿಹಾರ ಕೇಂದ್ರಕ್ಕೂ ನುಗ್ಗಿದ ಭೀಮೆ ನೀರು: ಭಾರೀ ಅನಾಹುತದಿಂದ ಪಾರಾದ ಜನ..!
ವಿಜಯಪುರ: ‘ಮೊದ್ಲೇ ನನ್ಗೆ ಹೊಲಾ ಇಲ್ಲ.., ಇದ್ದೊಂದು ಮನಿನೂ ಮುಳಗೋಯ್ತು... ನನ್ನ ಬದುಕು ಬಟಾಬಯಲಾಗ ಬಿತ್ತು... ನಾ ಇನ್ ಹ್ಯಾಂಗ್ ಮಾಡ್ಲಿ... ನನಗ ಈಗ ಗುಡಿ ಗುಂಡಾರನ ಗತಿಯಾತೋ..!’
ಇದು ಭೀಮಾ ಪ್ರವಾಹಕ್ಕೆ ತುತ್ತಾದ ಜಿಲ್ಲೆಯ ಚಡಚಣ ತಾಲೂಕಿನ ಹಳೆ ಉಮರಾಣಿ ಗ್ರಾಮದ ಬೌರಮ್ಮ ಕಾಂತಪ್ಪ ಕಟ್ಟಿಮನಿ(40) ಕಣ್ಣೀರಿಟ್ಟವ್ಯಥೆ. ಬೌರಮ್ಮಗೆ ಮೊದಲೇ ಹೊಲ ಇರಲಿಲ್ಲ. ಬೇರೆಯವರ ಹೊಲದ ಕೆಲಸಕ್ಕೆ ಹೋಗಿ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದಳು. ಆದರೆ ಏಕಾಏಕಿ ಭೀಮಾ ಪ್ರವಾಹದಲ್ಲಿ ಪೂರ್ತಿ ಮನೆ ಮುಳುಗಿ ಹೋಗಿದ್ದು, ದುರಸ್ತಿ ಮಾಡಲು ಹಣವು ಇಲ್ಲ. ‘ಕೂಲಿ ನಾಲಿ ಮಾಡ್ಕೊಂಡು ಜೀವ್ನ ಮಾಡ್ತಿದ್ದಾಯ. ಅದ್ರಾಗ ಬಂದಿದ್ದ ಹಣದಾಗ ಜೀವನ ನಡಿತಿತ್ತು. ಈಗ ಭೀಮಾ ನದಿಯಿಂದ ಇದ್ದ ಒಂದ್ ಮನಿನೂ ಕಳ್ಕೊಂಡು ಬೀದಿ ಪಾಲಾಗೇನ್ರಿ. ಮುಂದ ನಾ ಏನ್ ಮಾಡ್ಕೇಕು ಅಂತಾ ತಿಳಿವಲ್ದು’ ಎಂದು ಬೌರಮ್ಮ ಈಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.