ಚಿಕ್ಕತಿರುಪತಿ ತಿಮ್ಮಪ್ಪನ ಹುಂಡಿ ಹಣಕ್ಕೆ ಅಧಿಕಾರಿಯಿಂದ ಕನ್ನ?

Kannadaprabha News   | Asianet News
Published : Jan 31, 2020, 09:47 AM IST
ಚಿಕ್ಕತಿರುಪತಿ ತಿಮ್ಮಪ್ಪನ ಹುಂಡಿ ಹಣಕ್ಕೆ ಅಧಿಕಾರಿಯಿಂದ ಕನ್ನ?

ಸಾರಾಂಶ

ಚಿಕ್ಕತಿರುಪತಿ ತಿಮ್ಮಪ್ಪನ ಹುಂಡಿ ಹಣಕ್ಕೆ ಕನ್ನ ಹಾಕಿರುವ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ದೇವಾಲಯದ ಉಸ್ತುವಾರಿ ವಹಿಸಿದ್ದ ಅಧಿಕಾರಿಯೇ ತನ್ನ ಸಿಬ್ಬಂದಿ ಮೂಲಕ ಹುಂಡಿ ಹಣ ಎಣಿಕೆ ವೇಳೆ ಹುಂಡಿ ಹಣವನ್ನು ವಂಚಿಸಿ ತೆಗೆದುಕೊಂಡಿರುವ ಆರೋಪ ಕೇಳಿದೆ.  

ಕೋಲಾರ(ಜ.31): ಚಿಕ್ಕತಿರುಪತಿ ತಿಮ್ಮಪ್ಪನ ಹುಂಡಿ ಹಣಕ್ಕೆ ಕನ್ನ ಹಾಕಿರುವ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ದೇವಾಲಯದ ಉಸ್ತುವಾರಿ ವಹಿಸಿದ್ದ ಅಧಿಕಾರಿಯೇ ತನ್ನ ಸಿಬ್ಬಂದಿ ಮೂಲಕ ಹುಂಡಿ ಹಣ ಎಣಿಕೆ ವೇಳೆ ಹುಂಡಿ ಹಣವನ್ನು ವಂಚಿಸಿ ತೆಗೆದುಕೊಂಡಿರುವ ಆರೋಪ ಕೇಳಿದೆ.

ರಾಶಿ ರಾಶಿ ಚಿಲ್ಲರೆ ಹಣ ಹಾಕಿಕೊಂಡು ಎಣಿಕೆ ಮಾಡಿ ಅಧಿಕಾರಿಗಳ ಉಸ್ತುವಾರಿಯಲ್ಲಿ ಹಣ ಬಂಡಲ್‌ ಮಾಡಿ ಜೋಡಿಸಿರುವ ದೃಶ್ಯ. ಈ ಮಧ್ಯೆ ಇಷ್ಟೆಲ್ಲ ಜನರಿದ್ದರು. ಅಧಿಕಾರಿಯೊಬ್ಬ ತನ್ನ ಸಿಬ್ಬಂದಿ ಸಹಾಯದಿಂದ ಅಲ್ಲಿದ್ದ ಕ್ಯಾಮೆರಾವನ್ನು ಪಕ್ಕಕ್ಕೆ ಸರಿಸಿ ಎರಡು ಬಂಡಲ್‌ ಹಣ ಎಗರಿಸುತ್ತಿರುವ ದೃಶ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆರಳ ತುದಿಯಲ್ಲೇ ಇದೆ ಭಾರೀ ಸಮಸ್ಯೆ!

ಕೋಲಾರ ಜಿಲ್ಲೆ ಮಾಲೂರು ತಾಲೂಕು ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಜುಲೈ 2019ರಲ್ಲಿ ಚಿಕ್ಕತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ ವೇಳೆ ಇಲ್ಲಿನ ಕಾರ್ಯನಿರ್ವಹಣಾಧಿಕಾರಿ ನರಸಿಂಹಯ್ಯ ತನ್ನ ಸಿಬ್ಬಂದಿ ಸಹಾಯದಿಂದ ಎರಡು ಬಂಡಲ್‌ ಹಣವನ್ನು ಎಗರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜಿಲ್ಲೆಯ ಅರ್ಚಕರ ಸಂಘ ಕೂಡ ಈ ಬಗ್ಗೆ ಮುಜರಾಯಿ ಇಲಾಖೆಗೆ ದೂರು ನೀಡಿದೆ.

ದೇವಾಲಯದ ಇಒ ನರಸಿಂಹಯ್ಯ ಅಲ್ಲಿದ್ದ ಒಬ್ಬ ಸಿಬ್ಬಂದಿಗೆ ಅಲ್ಲಿಟ್ಟಿದ್ದ ಕ್ಯಾಮೆರಾದ ದಿಕ್ಕು ಬದಲಾಯಿಸುವಂತೆ ಕಳಿಸುತ್ತಾರೆ. ನಂತರ ಅಲ್ಲಿ ಎಣಿಸಿ ಇಡಲಾಗಿದ್ದ ಹಣದಲ್ಲಿ ಎರಡು ಬಂಡಲ್‌ ಹಣವನ್ನು ತನ್ನ ಸಹಾಯಕನ ಕೈಗೆ ಕೊಟ್ಟು ಏನೋ ಹೇಳಿ ಕಳಿಸುತ್ತಾರೆ. ಈ ದೃಶ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಂಡ್ಯ: 20 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ.

ಆ ಹಣವನ್ನು ಅಲ್ಲಿಂದ ತೆಗೆದುಕೊಂಡಿದ್ದೇಕೆ. ಇನ್ನು ಹಣ ತೆಗೆದುಕೊಳ್ಳುವ ಮುನ್ನ ಕ್ಯಾಮೆರಾದ ದಿಕ್ಕು ಬದಲಿಸಿದ್ದೇಕೆ ಅನ್ನೋ ಹಲವು ಪ್ರಶ್ನೆಗಳು ಉದ್ಭವವಾಗಿವೆ. ಸದ್ಯ ಈ ವಿಡಿಯೋ ಸಮೇತ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೆಲ ಸಾರ್ವಜನಿಕರು ದೂರು ನೀಡಿದ್ದಾರೆ.

ಎಣಿಕೆ ಕಾರ್ಯಕ್ಕೆಂದು ಬಂದಿದ್ದ ಸಿಬ್ಬಂದಿ ಮಧ್ಯಾಹ್ನ ಊಟಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿ ಕೇವಲ ದೇವಾಲಯದ ಕೆಲವೇ ಕೆಲವು ಸಿಬ್ಬಂದಿ ಹಾಗೂ ಬ್ಯಾಂಕ್‌ ಸಿಬ್ಬಂದಿ ಮಾತ್ರ ಇದ್ದರು. ಹುಂಡಿ ಎಣಿಕೆ ಕಾರ್ಯದ ವೇಳೆ ಹಣದ ಬಂಡಲ್‌ ತೆಗೆದುಕೊಂಡು ಹೋಗಿರುವ ದೃಶ್ಯಗಳು ಮಾತ್ರ ಸಿಕ್ಕಿವೆ. ಈ ಬಗ್ಗೆ ದೂರು ಪಡೆದಿರುವ ಕೋಲಾರ ಎಸಿ ಸೋಮಶೇಖರ್‌, ತನಿಖೆಗೆ ಮುಜರಾಯಿ ತಹಸೀಲ್ದಾರ್‌ ನಾಗವೇಣಿ ಅವರಿಗೆ ಆದೇಶ ನೀಡಿದ್ದಾರೆ.

'ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೆ ಕಾದಿದ್ಯಾ ಗಂಡಾಂತರ'..?

ತನಿಖೆ ನಂತರ ಸತ್ಯಾಸತ್ಯತೆ ಹೊರಬರಬೇಕಿದೆ. ತನಿಖೆ ನಡೆದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಿಜಕ್ಕೂ ಅಲ್ಲಿ ಹಣ ದುರುಪಯೋಗ ಆಗಿದ್ದರೆ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಸೋಮಶೇಖರ್‌ ಹೇಳಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು