Hanagal: ನನ್ನ ಸ್ಪೀಡ್‌ಗೆ ನೀವೆಲ್ಲ ಅಡ್ಜೆಸ್ಟ್‌ ಆಗಬೇಕು: ಶಾಸಕ ಮಾನೆ

By Kannadaprabha News  |  First Published Dec 19, 2021, 9:31 AM IST

*  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟನೆ
*  ಸಾರ್ವಜನಿಕರನ್ನು ಅಲೆದಾಡಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ 
*  ಹಾನಗಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಐದಾರು ಜನ ಸಿಬ್ಬಂದಿ ನಿಯೋಜನೆ 
 


ಹಾನಗಲ್ಲ(ಡಿ.19):  ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಾಡಳಿತಕ್ಕೆ ಚುರುಕು ಮುಟ್ಟಿಸುವುದಾಗಿ ಕಳೆದ ಉಪ ಚುನಾವಣೆ(Byelection) ಸಂದರ್ಭದಲ್ಲಿ ಜನತೆಗೆ ಭರವಸೆ ನೀಡಿದ್ದೇನೆ. ನನ್ನ ಸ್ಪೀಡ್‌ಗೆ ನೀವೆಲ್ಲ ಅಡ್ಜೆಸ್ಟ್‌ ಆಗಬೇಕು. ಸಕಾಲಕ್ಕೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಶ್ರೀನಿವಾಸ್‌ ಮಾನೆ(Srinivas Mane) ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶನಿವಾರ ಹಾನಗಲ್‌(Hanagal) ತಾಲೂಕಿನ ಹೊಂಕಣ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ, ಆರೋಗ್ಯ, ಕೃಷಿ ಸೇರಿದಂತೆ ಪ್ರಮುಖ ನಾಲ್ಕೈದು ಇಲಾಖೆಗಳಲ್ಲಿ ಸಾರ್ವಜನಿಕರಿಗೆ(Public) ಮಾಹಿತಿ ನೀಡಲು ತರಬೇತಿ ಪಡೆದ ಸಮನ್ವಯಾಧಿಕಾರಿ ನೇಮಿಸಬೇಕು. ಅವರಿಗೆ ವೇತನ(Salary) ನೀಡಲು ಇಲಾಖೆಗಳಲ್ಲಿ ಹಣಕಾಸಿನ ಮುಗ್ಗಟ್ಟು ಇದ್ದರೆ ನನಗೆ ಬರುವ ಶಾಸಕರ ವೇತನದಲ್ಲಿ ತಾವೇ ಅವರ ವೇತನ ಭರಿಸುವುದಾಗಿ ಹೇಳಿದ ಶಾಸಕ ಶ್ರೀನಿವಾಸ್‌ ಮಾನೆ, ಸರಕಾರದ ಯೋಜನೆ, ಕಾರ್ಯಕ್ರಮಗಳ ಬಗೆಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಸಿಗದೇ ಪರಿತಪಿಸುವಂತಾಗಿದೆ. ಸಾರ್ವಜನಿಕರು ಬಳಿಗೆ ಬಂದಾಗ ಅವರನ್ನು ಪ್ರೀತಿ, ವಿಶ್ವಾಸದಿಂದ ಮಾತನಾಡಿಸುವ ಸೌಜನ್ಯ ಪ್ರದರ್ಶಿಸಬೇಕಿದೆ. ಅದು ನಮ್ಮ ಭಾರತೀಯ ಸಂಸ್ಕೃತಿ(Indian Culture). ಸಬೂಬು ಹೇಳಿ ಸಾರ್ವಜನಿಕರನ್ನು ಅಲೆದಾಡಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

Latest Videos

undefined

MLC Election: ಡೋಂಗಿ ದೇಶ​ಭ​ಕ್ತ​ರಿಗೆ ಮತ ಹಾಕ​ದಿ​ರಿ: ಶ್ರೀನಿವಾಸ ಮಾನೆ

ಹಾನಗಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಐದಾರು ಜನ ಸಿಬ್ಬಂದಿ ನಿಯೋಜಿಸಲಾಗಿದೆ. ರಜಾದಿನ ಹೊರತುಪಡಿಸಿ ಸಿಬ್ಬಂದಿ ನಿತ್ಯ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಜನಸೇವೆಗೆ ಲಭ್ಯ ಇರಲಿದ್ದಾರೆ. ಸಮಸ್ಯೆ ಹೇಳಿ ಅರ್ಜಿ ಸಲ್ಲಿಸಿದರೆ ಸಂಬಂಧಿಸಿದ ಸರಕಾರಿ ಕಚೇರಿಗಳಿಗೆ(Government Offices) ಸ್ವತಃ ನಮ್ಮ ಸಿಬ್ಬಂದಿ ತೆರಳಿ ಕೆಲಸ ಮಾಡಿಕೊಡಲಿದ್ದಾರೆ ಎಂದು ಶ್ರೀನಿವಾಸ್‌ ಮಾನೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್‌. ಮಾತನಾಡಿ, ಜನರ ಮಧ್ಯೆ ಆಡಳಿತ ಒಯ್ಯುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳೂ ಉಪಸ್ಥಿತರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಲಾಗುವುದು ಎಂದು ಹೇಳಿದ ಅವರು ಈ ಕಾರ್ಯಕ್ರಮದಿಂದ ನಾನಾ ಕೆಲಸ ಕಾರ್ಯಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ನಯನಾ ಹರಿಜನ, ಉಪಾಧ್ಯಕ್ಷೆ ಗೌರಮ್ಮ ಜಾಲಗಾರ, ತಾಪಂ ಇಒ ಸುನೀಲ್‌ಕುಮಾರ್‌, ಪ್ರಮುಖರಾದ ರಾಮಣ್ಣ ಶೇಷಗಿರಿ, ಯಲ್ಲಪ್ಪ ಕಲ್ಲೇರ, ನಿರಂಜನ ಪಾಟೀಲ, ಜಯಣ್ಣ ಹೊನಗೊಂಡ್ರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

BJP Politics: 'ರಮೇಶ ಜಾರಕಿಹೊಳಿಗೆ ಇಲ್ಲದ ಶಿಕ್ಷೆ ನನಗೇಕೆ?'

ಎಲ್ಲ ರೈತರಿಂದ ಭತ್ತ ಖರೀದಿಗೆ ಕ್ರಮ ಕೈಗೊಳ್ಳಿ

ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಸಣ್ಣ ಮತ್ತು ಅತಿ ಸಣ್ಣ ರೈತರು(Farmers) ಹೆಸರು ಮಾತ್ರ ನೋಂದಾಯಿಸಲು ಸೂಚಿಸಿ ಸರ್ಕಾರ ಹೊರಡಿಸಿರುವ ಆದೇಶ ತಕ್ಷಣವೇ ಹಿಂಪಡೆದು, ಎಲ್ಲ ರೈತರಿಂದ ಭತ್ತ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಸಕ ಶ್ರೀನಿವಾಸ್‌ ಮಾನೆ ಸರ್ಕಾರಕ್ಕೆ(Government of Karnataka) ಪತ್ರ ಬರೆದಿದ್ದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕೃಷಿ ಸಚಿವ ಬಿ.ಸಿ. ಪಾಟೀಲ(BC Patil) ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಶಾಸಕ ಶ್ರೀನಿವಾಸ್‌ ಮಾನೆ, ಕಳೆದ ಡಿ. 1ರಿಂದ ಭತ್ತ ಖರೀದಿಗೆ ರೈತರ ಹೆಸರು ನೋಂದಣಿ ಆರಂಭಿಸಲಾಗಿದೆ. ಈ ನಡುವೆ ಸರಕಾರ ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರ ಭತ್ತವನ್ನು ಮಾತ್ರ ಖರೀದಿಸಲು ಹೊಸ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ರೈತರು ಭತ್ತವನ್ನು ಬೆಂಬಲ ಬೆಲೆಯಡಿ ಮಾರಾಟ ಮಾಡಲು ಸಾಧ್ಯವಾಗದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
 

click me!