Kanakapura: ಉತ್ತಮ ಆರೋ​ಗ್ಯಕ್ಕೆ ಯೋಗಾ​ಸ​ನ ಮದ್ದು: ಡಿ.ಕೆ.ಶಿವಕುಮಾರ್‌

By Govindaraj S  |  First Published Jan 13, 2023, 2:00 AM IST

ಮನೆ ಮದ್ದಾಗಿರುವ ಯೋಗಾಸನವನ್ನು ದಿನ ನಿತ್ಯದಲ್ಲಿ ಕೆಲ ತಾಸು ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಸಣ್ಣ-ಪುಟ್ಟಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿ​ದರು. 


ಕನಕಪುರ (ಜ.13): ಮನೆ ಮದ್ದಾಗಿರುವ ಯೋಗಾಸನವನ್ನು ದಿನ ನಿತ್ಯದಲ್ಲಿ ಕೆಲ ತಾಸು ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಸಣ್ಣ-ಪುಟ್ಟಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿ​ದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಕನಕೋತ್ಸವದ ಎರಡನೇ ದಿನದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಗುರು ಚನ್ನಬಸವಣ್ಣನವರ ಆಶೀರ್ವಾದ ಪಡೆದು ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಒಬ್ಬ ಆರೋಗ್ಯವಂತ ಮನುಷ್ಯ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. 

ಐದು ದಿನಗಳ ಕಾಲ ನಡೆಯುವ ಈ ಅದ್ಧೂರಿ ಸಾಂಸ್ಕೃತಿಕ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳ ಸಂಭ್ರಮದಲ್ಲಿ ಜಿಲ್ಲೆಯ ಎಲ್ಲಾ ನಾಗರಿಕ ಬಂಧುಗಳು ಹಾಗೂ ಮಕ್ಕಳು ಭಾಗಿಯಾಗುವಂತೆ ಮನವಿ ಮಾಡಿದರು. ಯೋಗ ಕಾರ್ಯಕ್ರಮದ ನಂತರ 12 ವರ್ಷ ಮೇಲ್ಪಟ್ಟಮಕ್ಕಳ ಬೃಹತ್‌ ಮ್ಯಾರಾಥಾನ್‌ ಓಟಕ್ಕೆ ಚಾಲನೆ ನೀಡಿದ ಅವರು, ಓಟದಲ್ಲಿ ಭಾಗಿಯಾಗಿದ್ದ ನೂರಾರು ಮಕ್ಕಳನ್ನು ನೋಡಿ ಸಂತಸಪಟ್ಟರು. ನಂತರ ಮಕ್ಕಳ ಜೊತೆ ಮಗುವಾಗಿ ಸ್ವತಃ ಚಿತ್ರ ಬಿಡಿಸುವ ಮೂಲಕ ಶಾಲಾ ಮಕ್ಕಳ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಹುರುಪು ತುಂಬಿದರು. ಆನಂತರ ನಡೆದ ಪುರುಷ ಮತ್ತು ಮಹಿ​ಳೆಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಶಿ​ವ​ಕು​ಮಾರ್‌, ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಸಂದ​ರ್ಭ​ದಲ್ಲಿ ಸಂಸದ ಡಿ.ಕೆ.​ಸು​ರೇಶ್‌ ಸೇರಿ​ದಂತೆ ಅನೇ​ಕರು ಹಾಜ​ರಿ​ದ್ದ​ರು.

Tap to resize

Latest Videos

ಗೃಹ ಸಚಿ​ವರು ರಾಜೀನಾಮೆ ನೀಡ​ದಿ​ದ್ದರೆ ಹಗ​ರಣ ಬಯ​ಲಿ​ಗೆ: ಕಿಮ್ಮನೆ ರತ್ನಾ​ಕರ್‌

ಪರಿ​ಸರ ಮತ್ತು ನೀರಿನ ರಕ್ಷ​ಣೆ​ಗಾಗಿ ಮ್ಯಾರಾ​ಥಾನ್‌: ಕನಕಪುರದ ಹಬ್ಬ ಕನಕೋತ್ಸವದ ಎರಡನೇ ದಿನವಾದ ಗುರು​ವಾರ ಬೆಳಗ್ಗೆ ಯೋಗಗುರು ಚನ್ನಬಸವಣ್ಣ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಹಾ​ಗೂ ಪರಿಸರ ಮತ್ತುನೀರಿನ ರಕ್ಷಣೆಗಾಗಿ ಮ್ಯಾರಥಾನ್‌ ನಡೆ​ಯಿ​ತು. 12 ವರ್ಷ ಮೇಲ್ಪಟ್ಟಹೆಣ್ಣು ಹಾಗೂ ಗಂಡು ಮಕ್ಕಳ ವಿಭಾಗದ ಮ್ಯಾರಥಾನ್‌ ಓಟಕ್ಕೆ ಚಾಲನೆ ನೀಡಿದ ಸಂಸದ ಡಿ.ಕೆ.ಸುರೇಶ್‌, ಮುಂದಿನ ಪೀಳಿಗೆಗೆ ಉತ್ತಮವಾದ ಆಹಾರ, ಶುದ್ಧ ಗಾಳಿ, ನೀರನ್ನು ನೀಡಬೇಕಾಗಿರುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ಮಣ್ಣು, ಪರಿಸರ ಹಾಗೂ ನೀರಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಮ್ಯಾರಾಥಾನ್‌ ಆಯೋಜಿಸಿರುವುದಾಗಿ ತಿಳಿಸಿದರು.

ತಾಲೂಕು ಕ್ರೀಡಾಂಗಣದ ಬಳಿಯಿಂದ ಆರಂಭವಾದ ಹೆಣ್ಣು ಮಕ್ಕಳ ಆರು ಕೀ.ಮೀ. ಹಾಗೂ ಗಂಡು ಮಕ್ಕಳ ಹನ್ನೆರಡು ಕಿ.ಮೀ. ಮ್ಯಾರಥಾನ್‌ ಓಟ ಸಂಗಮ ರಸ್ತೆ ಮೂಲಕ ಟಿ.ಬೇಕುಪ್ಪೆ ವೃತ್ತ ಬಳಸಿ ಶಿವನಹಳ್ಳಿ ಮಾರ್ಗ ವಾಗಿ ತಾಲೂಕು ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಸಾವಿರಾರು ಮಕ್ಕಳು ಮ್ಯಾ​ರಥಾನ್‌ ಓಟದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳುವ ಮೂಲಕ ಕನಕೋತ್ಸವಕ್ಕೆ ಮೆರಗು ತಂದರು. ಆಯೋಜಕರ ಕಡೆಯಿಂದ ಓಟದಲ್ಲಿ ಭಾಗಿಯಾಗಿದ್ದ ಮಕ್ಕಳಿಗೆ ಆಕರ್ಷಕ ಊಡುಗರೆ ಗಳನ್ನು ನೀಡಲಾ​ಯಿತು. ನಗರದ ಸೆಂಟ್‌ ಥಾಮಸ್‌ ಶಾಲಾ ಆವರಣದಲ್ಲಿ ಶಾಲಾ ಮಕ್ಕಳ ವಿಜ್ಞಾನ ಮೇಳದಲ್ಲಿ ರಾಮನಗರ ಜಿಲ್ಲೆಯ ಮಕ್ಕಳು ಭಾಗಿಯಾಗಿ ತಮ್ಮ ಹೊಸ ಹೊಸ ಅವಿಷ್ಕಾರಗಳನ್ನು ಪ್ರದರ್ಶಿಸಿದರು.

ಬಿಬಿಎಂಪಿಯ ಕನ್ನಡತಿ ವೈದ್ಯೆಯ ಮೇಲೆ ಮಲೆಯಾಳಿ ಯುವತಿಯ ಹಲ್ಲೆ: ಕನ್ನಡಕ್ಕೆ ಅಪಮಾನ

ಮಕ್ಕಳೊಂದಿಗೆ ಕುಣಿದ ಸುರೇಶ್‌: ಕನ​ಕೋ​ತ್ಸ​ವದ ಎರ​ಡನೇ ದಿನ​ವಾದ ಗುರು​ವಾರ ವಿದ್ಯಾ​ರ್ಥಿ​ಗ​ಳೊಂದಿಗೆ ಸಂಸದ ಡಿ.ಕೆ.​ಸು​ರೇಶ್‌ ಭರ್ಜರಿ ಡ್ಯಾನ್ಸ್‌ ಮಾಡಿ​ದರು. ಪರಿ​ಸರ ಮತ್ತು ನೀರಿನ ರಕ್ಷ​ಣೆ​ಗಾಗಿ ಓಟ ಹೆಸ​ರಿ​ನಲ್ಲಿ ನಡೆದ ಮ್ಯಾರ​ಥಾನ್‌ನಲ್ಲಿ ಸಾವಿ​ರಾರು ವಿದ್ಯಾ​ರ್ಥಿ​ಗಳು ಪಾಲ್ಗೊಂಡಿ​ದ್ದರು. ಮ್ಯಾರಾ​ಥಾನ್‌ ​ಓ​ಟದ ನಂತರ ವೇದಿ​ಕೆ​ಯತ್ತ ಆಗ​ಮಿ​ಸಿದರು. ಈ ವೇಳೆ ಅಲ್ಲಿಗೆ ಆಗ​ಮಿ​ಸಿದ ಸಂಸದ ಡಿ.ಕೆ.ಸುರೇಶ್‌ ಮಕ್ಕಳ ಒತ್ತಾಯಕ್ಕೆ ಮಣಿದು ಕನ್ನಡ ಹಾಡಿಗೆ ಹೆಜ್ಜೆ ಹಾಕಿ, ಮಕ್ಕಳನ್ನು ರಂಜಿಸಿದ್ದು ವಿಶೇಷವಾಗಿತ್ತು. ಸುರೇಶ್‌ ಅವ​ರೊಂದಿಗೆ ಮಕ್ಕಳು ಹೆಜ್ಜೆ ಹಾಕಿ​ದ​ರು.

click me!