ಚಿಕ್ಕಬಳ್ಳಾಪುರ ಉತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಲಿ: ಸಚಿವ ಆರ್‌.ಅಶೋಕ್‌

By Govindaraj S  |  First Published Jan 13, 2023, 1:00 AM IST

ಪ್ರತಿ ವರ್ಷ ಸಚಿವ ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಉತ್ಸವವನ್ನು ಇದೇ ರೀತಿ ಅದ್ದೂರಿಯಾಗಿ ಆಚರಿಸಲು ಕ್ಷೇತ್ರದ ಜನರ ಅರ್ಶೀವಾದ ಸದಾ ಅವರ ಮೇಲೆ ಇರಲಿಯೆಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.


ಚಿಕ್ಕಬಳ್ಳಾಪುರ (ಜ.13): ಪ್ರತಿ ವರ್ಷ ಸಚಿವ ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಉತ್ಸವವನ್ನು ಇದೇ ರೀತಿ ಅದ್ದೂರಿಯಾಗಿ ಆಚರಿಸಲು ಕ್ಷೇತ್ರದ ಜನರ ಅರ್ಶೀವಾದ ಸದಾ ಅವರ ಮೇಲೆ ಇರಲಿಯೆಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು. ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಚಿಕ್ಕಬಳ್ಳಾಪುರ ಉತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸುಧಾಕರ್‌, ಶಾಸಕರಾಗಿ, ಸಚಿವರಾಗಿ ಚಿಕ್ಕಬಳ್ಳಾಪುರ ಸಾಕಷ್ಟುಅಭಿವೃದ್ದಿ ಕಂಡಿದೆಂದರು.

ಜಿಲ್ಲೆಗೆ ಬಹುದಿನಗಳ ಕನಸಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜ್‌ ತರುವ ಮೂಲಕ ಈ ಭಾಗದ ಬಡವರ ರೋಗಿಗಳಿಗೆ ಉಚಿತ ಚಿಕಿತ್ಸೆ, ಔಷದಿ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಸಾಕಷ್ಟುಸರ್ಕಾರಿ ಕಚೇರಿಗಳು ತಲೆ ಎತ್ತಿವೆಂದರು. ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಕ್ರೀಡೋತ್ಸವ, ಯುವತೋತ್ಸವ, ಆಹಾರ ಮೇಳೆ, ಫಲಪುಷ್ಪ ಪ್ರದರ್ಶನ ಮಾಡಿದ್ದಾರೆ. ನಮ್ಮ ಚಿಕ್ಕಬಳ್ಳಾಪುರ ಜನತೆಯ ಅರ್ಶೀವಾದ ಅವರ ಮೇಲೆ ಇರಲಿ. ಈ ಭಾಗದಲ್ಲಿ ಮತ್ತೊಮ್ಮೆ ಸುಧಾಕರ್‌ ಆಯ್ಕೆಗೊಂಡು ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಜಿಲ್ಲೆಗೆ ನಾಯಕತ್ವ ಕೊಡಲಿ. ಉತ್ಸವದ ಮೂಲಕ ಪ್ರತಿ ದಿನ ಸಿನಿಮಾ ನಟ, ನಟಿಯನ್ನು ನೋಡುವ ಅವಕಾಶವನ್ನು ಸುಧಾಕರ್‌ ಕಲ್ಪಿಸಿದ್ದಾರೆಂದರು.

Tap to resize

Latest Videos

Chikkaballapur Utsav: ಸುಧಾಕರ್‌ ದೇಶದ ಆಸ್ತಿ ಆಗಬೇಕು: ಸಚಿವ ಶಿವರಾಮ್‌ ಹೆಬ್ಬಾರ್‌

ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ, ಸರ್ಕಾರದ ಮುಖ್ಯ ಸಚೇತಕ ಸತೀಶ್‌ ರೆಡ್ಡಿ, ರಾಜ್ಯ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌, ಜಿಪಂ ಸಿಇಒ ಪಿ.ಶಿವಶಂಕರ್‌, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಇದ್ದರು. ಇದೇ ವೇಳೆ ಉತ್ಸವಕ್ಕೆ ಆಗಮಿಸಿದ್ದ ಸಚಿವರಾದ ಆರ್‌.ಅಶೋಕ್‌, ಶಾಸಕರಾದ ಸತೀಶ್‌ ರೆಡ್ಡಿ ಮತ್ತು ಎಂ.ಕೃಷ್ಣಪ್ಪ ರನ್ನು ಉತ್ಸವದ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸನ್ಮಾನಿಸಿದರು.

ಸುಧಾಕರ್‌ಗೆ ಜೈಕಾರ ಹೇಳಿದ ಸಚಿವ ಆರ್‌.ಅಶೋಕ್‌: ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವ ಆಚರಿಸುತ್ತಿರುವುದಕ್ಕೆ ಸ್ವತಃ ಡಾ.ಕೆ.ಸುಧಾಕರ್‌ಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನರೆದಿದ್ದ ಅಪಾರ ಜನಸ್ತೋಮದ ಕಡೆಯಿಂದ ಸಚಿವ ಆರ್‌.ಅಶೋಕ್‌ ಜೈಕಾರ ಕೂಗಿ ತಾವು ಕೂಡ ಸುಧಾಕರ್‌ಗೆ ಜೈಕಾರ ಹೇಳಿ ಗಮನ ಸೆಳೆದರು.

ಅನನ್ಯ ಭಟ್‌, ವಾಸುಕಿ ವೈಭವ ಗಾನ: ಜಿಲ್ಲಾ ಕೇಂದ್ರದಲ್ಲಿ ಸತತ 8 ದಿನಗಳ ಕಾಲ ಆಯೋಜನೆಗೊಂಡಿರುವ ಅದ್ದೂರಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ 6ನೇ ದಿನವಾದ ಗುರುವಾರ ಸಂಜೆ ನಗರದ ಸರ್‌ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನ ಎಂದಿನಂತೆ ಕಿಕ್ಕಿರಿದು ತುಂಬಿದ್ದರು. ಸಂಜೆ ಸೂರ್ಯಾಸ್ತ ಆಗುತ್ತಿದ್ದಂತೆ ಜನ ಜನ ಗುಂಪು ಗುಂಪುಗಳಾಗಿ ಕಾರ್ಯಕ್ರಮದ ವೇದಿಕೆ ಮುಂಭಾಗ ಭರ್ತಿಯಾದರು. ಖ್ಯಾತ ಗಾಯಕರಾದ ಅನನ್ಯಭಟ್‌ ಹಾಗೂ ವಾಸುಕಿ ವೈಭವ್‌ ಸೂಪರ್‌ ಹಿಟ್‌ ಹಾಡುಗಳ ಗಾನಕ್ಕೆ ಕ್ರೀಡಾಂಗಣದಲ್ಲಿ ಕುರ್ಚಿಗಗಳಲ್ಲಿ ಭರ್ತಿಯಾಗಿದ್ದ ಅಭಿಮಾನಿಗಳು, ಗಾನ ಪ್ರೀಯರು ತಲೆದೂಗಿದರು.

Chikkaballapur Utsav: ಬರದ ನಾಡನ್ನು ಮಲೆನಾಡು ಮಾಡಿದ ಸುಧಾಕರ್‌: ಸಚಿವ ಸೋಮಣ್ಣ

ಯುವ ಗಾಯಕರಾದ ಚಂದನ್‌ಶೆಟ್ಟಿರವರ ಪಾರ್ಟಿ ಹಾಡುಗಳ ಮಸ್‌್ತ ಮಜಾ, ಜೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ರಾಘವೇಂದ್ರರವರಿಂದ ನಡೆದ ಹಾಸ್ಯ ಕಾರ್ಯಕ್ರಮ ಚಿಕ್ಕಬಳ್ಳಾಪುರ ಉತ್ಸವ ಕಳೆಗಟ್ಟುವಂತೆ ಮಾಡಿತು. ಎಂದಿನಂತೆ ಪ್ರೇಕ್ಷಕರು, ಸಂಗೀತ ಅಭಿಮಾನಿಗಳು ಕ್ರೀಡಾಂಗಣದ ತುಂಬ ಭರ್ತಿಯಾಗಿದ್ದರು.

click me!