Udupi: ಭರತನಾಟ್ಯದ 108ಕರಣಗಳನ್ನು 4 ನಿಮಿಷದಲ್ಲಿ ಮಾಡಿ ಮತ್ತೊಂದು ದಾಖಲೆ ಸೃಷ್ಟಿಸಿದ ಯೋಗ ಬಾಲೆ ತನುಶ್ರೀ!

By Govindaraj S  |  First Published Apr 5, 2023, 9:01 AM IST

ಈಗಾಗಲೇ ಏಳು ವಿಶ್ವ ದಾಖಲೆಗಳನ್ನು ಮಾಡಿರುವ ಉಡುಪಿಯ ಯೋಗಬಾಲೆ ಎಂಟನೇ ವಿಶ್ವದಾಖಲೆ ಪೂರೈಸಿದ್ದಾಳೆ. ಆದರೆ ಈ ಬಾರಿ ಆಕೆ ಯೋಗಕ್ಕೆ ಬದಲಾಗಿ , ಭರತನಾಟ್ಯದ 108ಕರಣಗಳನ್ನು ಕೇವಲ 4 ನಿಮಿಷದಲ್ಲಿ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ.


ಉಡುಪಿ (ಏ.05): ಈಗಾಗಲೇ ಏಳು ವಿಶ್ವ ದಾಖಲೆಗಳನ್ನು ಮಾಡಿರುವ ಉಡುಪಿಯ ಯೋಗಬಾಲೆ ಎಂಟನೇ ವಿಶ್ವದಾಖಲೆ ಪೂರೈಸಿದ್ದಾಳೆ. ಆದರೆ ಈ ಬಾರಿ ಆಕೆ ಯೋಗಕ್ಕೆ ಬದಲಾಗಿ , ಭರತನಾಟ್ಯದ 108ಕರಣಗಳನ್ನು ಕೇವಲ 4 ನಿಮಿಷದಲ್ಲಿ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ವಿದ್ಯಾರ್ಥಿನಿ ತನುಶ್ರೀ ಈಗಾಗಲೇ ಯೋಗದಲ್ಲಿ ಏಳು ವಿಶ್ವದಾಖಲೆಗಳನ್ನು ಮಾಡಿದ್ದಾಳೆ. ಅದರಲ್ಲಿ ಆರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಇನ್ನೊಂದು ಗಿನ್ನೆಸ್...

ಯೋಗ ಮಾತ್ರವಲ್ಲದೆ ಭರತನಾಟ್ಯವನ್ನು ಕಳೆದ ಒಂಭತ್ತು ವರ್ಷದಿಂದ ರಾಮಕೃಷ್ಣ ಕೊಡಂಚ ಅವರ ಬಳಿ ಕಲಿಯುತ್ತಿದ್ದಾಳೆ . ಗುರುಗಳ ಆಸಕ್ತಿಯಿಂದ ಭರತನಾಟ್ಯ ಶಾಸ್ತ್ರದ ಒಂದು ವಿಭಾಗವಾದ 108ಕರಣಗಳನ್ನು  ಏಕ ಕಾಲದಲ್ಲಿ ಮಾಡಲು ನಿರ್ಧರಿಸಿದ್ದು , ಯಶಸ್ವಿಯೂ ಆಗಿದ್ದಾಳೆ ಕರಣ ಎಂದರೆ ಪಾದ ಮತ್ತು ಹಸ್ತದ ಏಕಕಾಲದ ಯುಗಳ ಚಲನೆ ಇದಕ್ಕೆ ಪೂರಕವಾಗಿ ದೇಹದ ಬಾಗುವಿಕೆ. ಇಂತಹ ಭಂಗಿಗಳನ್ನು ಸಾಮಾನ್ಯವಾಗಿ ಬೇಲೂರು ಹಳೇಬೀಡು ಶಿಲಾಬಾಲಿಕೆಯಲ್ಲಿ ಕಾಣಬಹುದಾಗಿದೆ. 

Latest Videos

undefined

Bengaluru: ಪೀಣ್ಯ ಮೇಲ್ಸೇತುವೆ: 4 ತಿಂಗಳು ಭಾರೀ ವಾಹನಕ್ಕೆ ತಡೆ

ಕಾಲು ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವನು ಕರಣಗಳ ಮೂಲ ಎನ್ನಲಾಗುತ್ತದೆ. ಸದ್ಯ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತನುಶ್ರೀ ಭರತನಾಟ್ಯದ 108ಕರಣಗಳನ್ನು ಅತೀ ಚಿಕ್ಕ ವಯಸ್ಸಿನಲ್ಲಿ ಪ್ರಸ್ತುತ ಪಡಿಸಿದ್ದಾಳೆ. ಉಡುಪಿಯ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಈ ದಾಖಲೆಯ ಕಾರ್ಯಕ್ರಮ‌ . ನಡೆಯಿತು. ಈ ಸಂದರ್ಭದಲ್ಲಿ ಎಂಟು ಮಂದಿ ಭರತನಾಟ್ಯ ಮತ್ತು ಸಂಗೀತ ವಿದ್ವಾಂಸರನ್ನು ಗೌರವಿಸಲಾಯ್ತು. 

ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌ ವಿರುದ್ಧ 1,300 ಕೋಟಿ ಅಕ್ರಮ ಆರೋಪ

ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆ ದಾರರ ಸಂಘದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆದುದ್ದು ಎಂಟನೇ ವಿಶ್ವದಾಖಲೆಗೆ ತನುಶ್ರೀ ಗಮನ ಸೆಳೆದಿದ್ದಾಳೆ. ಗೋಲ್ಡನ್ ಬುಕ್ ಸಂಸ್ಥೆಯ ಪ್ರತಿನಿಧಿ ಗೌರವ ಮಿತ್ತಲ್ ಅವರು ದಾಖಲೆಯ ಪ್ರಮಾಣ ಪತ್ರವನ್ನು ತನುಶ್ರೀಗೆ ಹಸ್ತಾಂತರಿಸಿದರು .ಹಲವು ವಿಶ್ವದಾಖಲೆಗಳ‌ ಸರದಾರಿಣಿ ಉಡುಪಿಯ ಹೆಮ್ಮೆಯ ಪ್ರತಿಭೆ ತನುಶ್ರೀ ಈ ಬಾರಿ ಭರತನಾಟ್ಯ ಮೂಲಕ ಹೊಸ ಸಾಧನೆ ಮಾಡಿದ್ದು, ಈ ಸಾಧನೆ ಇನ್ನಷ್ಟು ಮಕ್ಕಳಿಗೆ ಮಾದರಿಯಾಗಲಿ. ತನುಶ್ರೀ ಪೋಷಕರಾದ ಉದಯ್ ಕುಮಾರ್ ಸಂಧ್ಯಾ ದಂಪತಿಗಳು ಈ ವೇಳೆ ಹಾಜರಿದ್ದರು.

click me!