"ಯೋಗಸಂಧ್ಯಾ" ಎಂದೇ ಪ್ರಖ್ಯಾತವಾದ ಇವರು ಅತ್ಯಂತ ಕ್ಲಿಷ್ಟಕರವಾದ ಆಸನಗಳನ್ನು ಮಾಡುವ ದೇಶದ ಕೆಲವೇ ಕೆಲವು ಯೋಗಪಟುಗಳೊಂದಿಗೆ ಗುರುತಿಸಿಕೊಂಡಿದ್ದಲ್ಲದೇ 100 ಕ್ಕೂ ಹೆಚ್ಚು ಆಸನಗಳನ್ನು ಕರಗತ ಮಾಡಿಕೊಂಡಿದ್ದಾರೆ.
ಶಿವಮೊಗ್ಗ (ಜೂ.22): ಆರನೇ ತರಗತಿಯಲ್ಲಿ ಯೋಗ ಅಭ್ಯಾಸ ಪ್ರಾರಂಭಿಸಿದ ಈ ಬಾಲಕಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನಗೋಡು ಗ್ರಾಮದ ಕೃಷಿ ಕುಟುಂಬದ ಅಪ್ಪಟ ಗ್ರಾಮೀಣ ಪ್ರತಿಭೆ, ಈಕೆಗೆ ತಂದೆಯೇ ಯೋಗ ಗುರು. ಪ್ರಸ್ತುತ ದ್ವಿತೀಯ ವರ್ಷ ಬಿ.ಸಿ.ಎ ಡಿಗ್ರಿ ಓದುತ್ತಿರುವ ಈಕೆ ಸಾಗರದಲ್ಲಿ 7 ವರ್ಷದ ಹಿಂದೇಯೇ 'ಶ್ರೀ ಗುರುಕುಲ ಯೋಗಕೇಂದ್ರ' ಆರಂಭಿಸಿ ಯೋಗ ಶಿಕ್ಷಕಿ ಆಗಿ ನಗರದ ಆಸಕ್ತ ಮಕ್ಕಳಿಗೆ ಉಚಿತ ಯೋಗಾಸನ ಕಲಿಸುತ್ತಿರುವುದಲ್ಲದೇ ಅವರನ್ನೂ ಸಹ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವುದು ಈ ಯೋಗ ಕೇಂದ್ರದ ಹಿರಿಮೆ.
"ಯೋಗಸಂಧ್ಯಾ" ಎಂದೇ ಪ್ರಖ್ಯಾತವಾದ ಇವರು ಅತ್ಯಂತ ಕ್ಲಿಷ್ಟಕರವಾದ ಆಸನಗಳನ್ನು ಮಾಡುವ ದೇಶದ ಕೆಲವೇ ಕೆಲವು ಯೋಗಪಟುಗಳೊಂದಿಗೆ ಗುರುತಿಸಿಕೊಂಡಿದ್ದಲ್ಲದೇ 100 ಕ್ಕೂ ಹೆಚ್ಚು ಆಸನಗಳನ್ನು ಕರಗತ ಮಾಡಿಕೊಂಡಿದ್ದಾರೆ. ದೇಶಾದ್ಯಂತ 150 ಕ್ಕೂ ಹೆಚ್ಚು ಯೋಗ ಪ್ರದರ್ಶನ ನೀಡಿ ದೇಶದ ಅತ್ಯುನ್ನತ 10 ಯೋಗ ಪಟುಗಳ ಪೈಕಿ ಇವರೂ ಒಬ್ಬರಾಗಿದ್ದಾರೆ.
undefined
ಯೋಗ ಅರಂಭಿಸಿದ ಕೆಲವೇ ವರ್ಷಗಳಲ್ಲಿ ರಾಜ್ಯ, ರಾಷ್ಟ್ರ (ದೆಹಲಿ, ಮಹಾರಾಷ್ಟ್ರ, ಛತ್ತೀಸ್ ಘಡ್, ಪಂಜಾಬ್, ಹರಿಯಾಣ, ಗೋವ, ತಮಿಳುನಾಡು) ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ 70 ಕ್ಕೂ ಹೆಚ್ಚು ಬಂಗಾರದ ಪದಕ ಬಾಚಿಕೊಳ್ಳುವ ಮೂಲಕ ಉತ್ತಮ ಪ್ರಶಸ್ತಿ ಪಡೆದುಕೊಂಡು ಕನ್ನಡ ನಾಡಿಗೆ ಹೆಮ್ಮೆ ತಂದಿರುತ್ತಾರೆ.
ಯೋಗಸಂಧ್ಯಾಳಿಗೆ ಒಲಿದ ಬಿರುದುಗಳು
- ಯೋಗ ಧ್ರುವತಾರೆ
- ಯೋಗ ಸಿಂಧೂರಿ
- ಮಂಡ್ಯ ಯೋಗ ಕುಮಾರಿ
- ಹರಿಹರ ಯೋಗರತ್ನ
- ಯೋಗ ಮಯೂರಿ
- ಯೋಗರತ್ನ
- ಹವ್ಯಕ ಪಲ್ಲವ
NYSF ( ನ್ಯಾಶನಲ್ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್) ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಕಳೆದ ವರ್ಷ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ 36 ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಮೊಟ್ಟ ಮೊದಲ ಬಾರಿಗೆ ಯೋಗವನ್ನು ಕೂಟದ ಭಾಗವಾಗಿ ನಡೆಸಿದ್ದು ಇದರಲ್ಲಿ 3 ವಿಭಾಗದಲ್ಲಿ ಭಾಗವಹಿಸಿ ದೇಶದ ಅತ್ಯನ್ನತ 10 ಯೋಗಪಟುಗಳ ಪೈಕಿ ಇವರೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ 9ನೇ ವರ್ಷದ ಯೋಗದಿನಾಚರಣೆ, 180 ರಾಷ್ಟ್ರದ ಗಣ್ಯರು ಭಾಗಿ!
ಎಸ್ ಜಿ ಎಫ್ ಐ ಸಂಸ್ಥೆ ನಡೆಸುವ ಯೋಗ ಸ್ಪರ್ಧೆಯಲ್ಲಿ ಸಂಧ್ಯಾ ಈವರೆಗೆ 17 ಬಾರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಅಗಿದ್ದಾರೆ.
2018 ರಲ್ಲಿ ಛತ್ತೀಸ್ಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ಏಕೈಕ ಬಂಗಾರದ ಪದಕ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಮೈಸೂರಿನ ಯೋಗ ವೈದ್ಯಕೀಯ ಮಹಾ ವಿದ್ಯಾಲಯ ದ ಅಂತರಾಷ್ಟ್ರೀಯ ಯೋಗದಿನಗ ಸ್ಪರ್ಧೆಯಲ್ಲಿ ಪ್ರಥಮ, ನೆಲಮಂಗಲದಲ್ಲಿ ಜ್ಞಾನ ಗಂಗಾ, ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್, ಮಲ್ಲೇಶ್ವರಂನಲ್ಲಿ ಇಂಟರ್ನ್ಯಾಷನಲ್ ಕೃಷಿ ಯೋಗ ಸಂಸ್ಥೆ ಏರ್ಪಡಿಸಿದ್ದ ಆಲ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ಫ್ರಥಮ, 4 ಚಿನ್ನ, 1 ಬೆಳ್ಳಿ ಪದಕ. ಆಲ್ ಇಂಡಿಯಾ ಮುಕ್ತ ಯೋಗ ಚಾಂಪಿಯನ್ ಸ್ಪರ್ಧೆಯಲ್ಲಿ 5 ಚಿನ್ನದ ಪದಕ, ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ಟ ಮಟ್ಟದಲ್ಲಿ ಕೂಡ ಪದಕ ಗೆದ್ದು ಇದುವರೆಗೂ ಸಾಧನೆಯ ಹಾದಿಯಲ್ಲಿ ಹಿಂತಿರುಗಿ ನೋಡಲೇ ಇಲ್ಲ.
ಯೋಗ ಜನಪ್ರಿಯಗೊಳಿಸಿದ್ದು ನೆಹರು ಎಂದ ಕಾಂಗ್ರೆಸ್, ಅಲ್ಲ ಭಾರತದ ಪ್ರಧಾನಿ ಎಂದ ತರೂರ್
ಈಕೆ ಕೇವಲ ತನ್ನ ವಯಸ್ಸಿನ ಯೋಗಪಟುಗಳೊಂದಿಗಲ್ಲದೇ ತನಗಿಂತ ಹಿರಿಯ ಪಟುಗಳೊಂದಿಗೂ ಸಹ ಪ್ರದರ್ಶನದಲ್ಲಿ ಗೆಲುವು ಸಾಧಸಿ ಎಲ್ಲರನ್ನೂ ಬೆರಗುಗೊಳಿಸಿದ್ದಲ್ಲದೇ ತನ್ನ ಮೈಯಲ್ಲಿ ಎಲುಬುಗಳು ಇಲ್ಲವೇನೋ ಎಂಬಂತೆ ಯೋಗ ಮಾಡುತ್ತಾರೆ.
ಮಗಳ ಸಾಧನೆಗಾಗಿ ಪಣತೊಟ್ಟಿರುವ ಪೋಷಕರು : ಮಗಳ ಆಸಕ್ತಿಯನ್ನು ಗುರುತಿಸಿದ ಇವರ ತಂದೆ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ಕಡೆ ಭಾಗವಹಿಸುವ ಮೂಲಕ ಮಗಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬರುವ ಯೋಗಾಸಕ್ತರು ಇವರ ಮನೆಯಲ್ಲೇ ಉಳಿದು ಈಕೆಯ ಬಳಿ ಯೋಗ ಕಲಿಯುತ್ತಾರೆ. ಈಕೆಯ ಬಳಿ ಕಲಿತ ಬೆಳಗಾವಿಯ 3 ವಿಧ್ಯಾರ್ಥಿಗಳು ಇಂದು ರಾಷ್ಟ್ರ ಮಟ್ಟದ ಯೋಗಪಟುಗಳಾಗಿ ಗುರುತಿಸಿಕೊಂಡಿದ್ದಾರೆ.