ರೋಗ ಮುಕ್ತ, ಚಿಂತೆ ಮುಕ್ತ ಜೀವನಕ್ಕೆ ಯೋಗ ಸಹಕಾರಿ, ಪ್ರತಿಯೊಬ್ಬರು ಯೋಗದ ತತ್ವ ಅಳವಡಿಸಿಕೊಂಡರೆ ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳಬಹುದೆಂದು ಶ್ರೀ ನೇತಾಜಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ. ರಾಜಣ್ಣ ತಿಳಿಸಿದರು.
ತಿಪಟೂರು: ರೋಗ ಮುಕ್ತ, ಚಿಂತೆ ಮುಕ್ತ ಜೀವನಕ್ಕೆ ಯೋಗ ಸಹಕಾರಿ, ಪ್ರತಿಯೊಬ್ಬರು ಯೋಗದ ತತ್ವ ಅಳವಡಿಸಿಕೊಂಡರೆ ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳಬಹುದೆಂದು ಶ್ರೀ ನೇತಾಜಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ. ರಾಜಣ್ಣ ತಿಳಿಸಿದರು.
ನಗರದ ನೇತಾಜಿ ಭವನದಲ್ಲಿ ಶ್ರೀ ನೇತಾಜಿ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ದೃಷ್ಟಿಯಿಂದ ಈ ಟ್ರಸ್ಟ್‌ನ್ನು ಸ್ಥಾಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕು. ವೈದ್ಯರ ಬಳಿ ಹೋಗಿ ಸಾವಿರಾರು ರು. ಹಣ ಖರ್ಚು ಮಾಡುವ ಬದಲು ಯೋಗಾಭ್ಯಾಸಗಳಲ್ಲಿ ತೊಡಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಆಧುನಿಕ ಜೀವನ ಶೈಲಿಯ ಆಹಾರ ಪದ್ಧತಿ ಬಿಟ್ಟು ಸಹಜ ಬದುಕಿನ ನೀತಿಗಳಲ್ಲಿ ಬಾಳುವುದನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಟ್ರಸ್ಟ್‌ನ ಸದುಪಯೋಗಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಪತಂಜಲಿ ಯೋಗ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆಯೆ ಋಷಿಮುನಿಗಳು ಯೋಗ ಮಾಡುತ್ತಾ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ನೂರಾರು ವರ್ಷ ಬದುಕುತ್ತಿದ್ದರು. ಅವರೆಲ್ಲರ ಆಯುಷ್ಯದ ಗುಟ್ಟು ಯೋಗವೇ ಆಗಿತ್ತು. ಯೋಗ ಮಾಡಿದರೆ ಯಾವುದೆ ರೀತಿ ವೈದ್ಯಕೀಯ ಚಿಕಿತ್ಸೆಗಳ ಅವಶ್ಯಕತೆ ಇರುವುದಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದು ಯೋಗದ ಉಗಮ, ಬೆಳೆದು ಬಂದ ದಾರಿಯ ಬಗ್ಗೆ ತಿಳಿಸಿಕೊಟ್ಟರು.
ನೇತಾಜಿ ಯೋಗ ಕೇಂದ್ರದ ವಿಜಯಕುಮಾರ್, ಭುವನ, ಸುಂದರ್ ಹಾಗೂ ಶಂಕರಲಿಂಗಪ್ಪನವರು ನೇತಾಜಿ ಯೋಗಭ್ಯಾಸ ಕೇಂದ್ರ ಪ್ರಾರಂಬಿಸಿ ಅದರ ಬೆಳವಣಿಗೆಯ ಬಗ್ಗೆ ತಿಳಿಸಿ, ಟ್ರಸ್ಟ್ ಸ್ಥಾಪಿಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನೇತಾಜಿ ಸಹಕಾರ ಸಂಘದ ಅಧ್ಯಕ್ಷ ಶಶಿಶೇಖರ್ ಮಾತನಾಡಿ, ಸಂಘದಿಂದ ಸುಸಜ್ಜಿತವಾದ ಯೋಗ ಭವನ ನಿರ್ಮಿಸಿಕೊಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಜಿ.ಬಿ. ಶಶಿಶೇಖರ್, ಉಪಾಧ್ಯಕ್ಷ ಎಸ್. ಜಗದೀಶ್, ಪ್ರಧಾನ ಕಾರ್ಯದರ್ಶಿ ಡಾ.ಎಂ.ಆರ್. ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ಬಿ.ಡಿ. ನಟರಾಜು, ಹೆಚ್.ಎಸ್. ಶಿವಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಜೆ.ಎಂ. ಶಿವಶಂಕರ, ಎಂ.ಜ್ಯೋತಿ, ಖಜಾಂಚಿ ನೇತ್ರಾವತಿ, ನಿರ್ದೇಶಕರಾದ ಕೆ.ಸಿ. ಪಂಚಾಕ್ಷರಿ, ಬಿ.ಕೆ. ಶಿಲ್ಪ, ಎ.ಎಸ್. ಮಮತಾ, ಹಿರಿಯ ಸಲಹೆಗಾರರಾದ ಸುಜಾತ, ಟಿ.ಸಿ. ರವಿ, ಸತ್ಯನಾರಾಯಣ್ ಝಾ ಮತ್ತಿತರರಿದ್ದರು. ಶಿವಮೂರ್ತಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.