* ಯೋಗ ದಿನಾಚರಣೆ ಕುರಿತು ಹಳ್ಳಿ ಹಳ್ಳಿಯಲ್ಲೂ ಪ್ರಚಾರ
* ಜೂ. 21 ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ವಿಶಿಷ್ಟ ಕಾರ್ಯಕ್ರಮ
* ರಾಜ್ಯದ 31 ಜಿಲ್ಲೆಗಳಲ್ಲೂ ಯೋಗ ಅಭಿಯಾನ ಕಾರ್ಯಕ್ರಮ ನಡೆಸಲು ಉದ್ದೇಶ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ
ವಿಜಯನಗರ(ಮೇ.10): ವಿಶ್ವ ಯೋಗ ದಿನಾಚರಣೆ(World Yoga Day) ಹಿನ್ನೆಲೆಯಲ್ಲಿ ಮೇ.15 ರಿಂದ ಹಂಪಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಶ್ವಾಸಕೇಂದ್ರದ ಸಂಸ್ಥಾಪಕ ಶ್ರೀ ವಚನಾನಂದ ಸ್ವಾಮೀಜಿ(Vachanand Swamiji) ನೇತೃತ್ವದಲ್ಲಿ ರಾಜ್ಯದ ಮತ್ತು ಹಂಪಿಯ(Hampi) ವಿವಿಧ ಸ್ಮಾರಕಗಳ ಮುಂದೆ ಯೋಗ ಮಾಡುವ ಮೂಲಕ ದಾಖಲೆ ಬರೆಯಲು ಮುಂದಾಗ್ತಿದ್ದಾರೆ.
undefined
ಕೋವಿಡ್ ಹಿನ್ನಲೆ ಯೋಗ ಕಡೆ ಮುಖ ಮಾಡಿದ ಜನರು
ಕೋವಿಡ್(Covid-19) ಹಿನ್ನೆಲೆ ಬಹುತೇಕ ಎಲ್ಲರೂ ಯೋಗದ ಕಡೆಗೆ ಮುಖಮಾಡಿದ್ದಾರೆ. ರಾಜ್ಯದಲ್ಲಿ ರೋಗ ಮುಕ್ತ ಗ್ರಾಮ, ತಾಲೂಕು ಜಿಲ್ಲೆ ಮಾಡುವ ಸಂಕಲ್ಪದೊಂದಿಗೆ ಈ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಇಡೀ ಕರ್ನಾಟಕವನ್ನು (Karnataka) ರೋಗ ಮುಕ್ತ ರಾಜ್ಯ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಜಾತಿ, ಮತ,ಪಂಥ, ಧರ್ಮವನ್ನು ಮೀರಿ ಎಲ್ಲರೂ ಯೋಗ ಕಲಿಯಲು ಆಸಕ್ತಿ ಹೊಂದಿದ್ದಾರೆ. ಯೋಗದ ಜತೆಗೆ ಹಂಪಿಯ ಸ್ಮಾರಕಗಳನ್ನು ಇಡೀ ವಿಶ್ವಕ್ಕೆ ಮತ್ತೊಮ್ಮೆ ಪರಿಚಯಿಸೋ ಮೂಲಕ ಹಂಪಿಯಲ್ಲಿ ಪ್ರತಿ ಸ್ಮಾರಕಗಳ ಎದುರು ಯೋಗ ಮಾಡಲು ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ.
ಉಜ್ಜೈನಿ ಪೀಠದಲ್ಲೊಂದು ವಿಶಿಷ್ಟ ಆಚರಣೆ, ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ ಎಣ್ಣೆ!
ಸ್ಮಾರಕದ ಮುಂದೆ ನಿತ್ಯ ಯೋಗ ಮಾಡೋ ಪ್ಲಾನ್
ಹಂಪಿಯ ವಿಜಯ ವಿಠಲ ದೇಗುಲ ಹಾಗೂ ಕಲ್ಲಿನ ತೇರಿನ ಬಳಿ ಮೇ. 15 (ಬೆಳಗ್ಗೆ 6 ಗಂಟೆಯಿಂದ 1 ಗಂಟೆವರೆಗೆ) ರಂದು ಯೋಗ ದಿನಾಚರಣೆಗೆ ಚಾಲನೆ ನೀಡಲಿದ್ದಾರೆ. ನಂತರ ವಿಶ್ವ ಯೋಗ ದಿನಾಚರಣೆ ದಿನದವರೆಗೂ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪ್ರತಿ ಹಳ್ಳಿಗಳಿಗೆ ತೆರಳಿ ಯೋಗದ ಕುರಿತು ಜಾಗೃತಿ(Awareness) ಮೂಡಿಸೋ ಕೆಲಸ ಮಾಡಲಾಗ್ತಿದೆ. ಈ ಮೂಲಕ ಭಾಗದಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸಲಾಗುವುದು ಯೋಜನೆ ರೂಪಿಸಲಾಗಿದೆ. ಇನ್ನೂ ಸ್ಮಾರಕಗಕ ಮುಂದೆ ನಿರಂತರವಾಗಿ ಯೋಗಾ ಮೋಡ ಬಗ್ಗೆಯೂ ಯೋಜನೆ ರೂಪಿಸಲಾಗ್ತಿದೆ.
ಅಭಿಯಾನದಲ್ಲಿ ನಿತ್ಯ ಒಂದೊಂದು ಸ್ಮಾರಗಳ ಮುಂದೆ ಯೋಗ
ಇನ್ನೂ ಮೇ. 15 ಚಾಲನೆ ನೀಡಿದ ಬಳಿಕ, ಮೇ 22 ರಂದು ಬಡವಿ ಲಿಂಗ, ಉಗ್ರ ನರಸಿಂಹ ಸ್ವಾರಕಗಳ ಬಳಿ, ಮೇ 29 ರಂದು ಮಹಾನವಮಿ ದಿಬ್ಬದ ಬಳಿ, ಜೂ. 5 ರಂದು ಆನೆಸಾಲು, ಒಂಟಿ ಸಾಲು ಸ್ಮಾರಕಗಳ ಬಳಿ, ಜೂನ್ 12 ರಂದು ಕಮಲ ಮಹಲ್, ಜೂ.19 ರಂದು ಕಡಲೇಕಾಳು ಗಣಪತಿ ಎದರು ಮತ್ತು ವಿಶ್ವ ಅಂತಾರಾಷ್ಟ್ರೀಯ ಕಾರ್ಯಕ್ರಮ ಜೂ. 21 ರಂದು ಎದುರು ಬಸವಣ್ಣ ಮಂಟಪದ ಮುಂದೆ ಸಾವಿರಾರು ಜನರನ್ನು ಸೇರಿಸಿ ಬೃಹತ್ ಯೋಗ ಶಿಬಿರ ಮಾಡಲಾಗುತ್ತದೆ.
ಸಚಿವ ಆನಂದ ಸಿಂಗ್ ಉಪಸ್ಥಿತಿ ಸಿಎಂ ಬೊಮ್ಮಯಿ ಬರೋ ಸಾಧ್ಯತೆ
ಹಂಪಿಯಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್(Anand Singh), ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ(Shashikala Jolle) ಭಾಗವಹಿಸಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಬಳಿಯೂ ಚರ್ಚಿಸಲಾಗಿದ್ದು ಅವರು ಕೂಡ ಒಂದು ದಿನ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದರ ಜತೆಗೆ ಕೇಂದ್ರ ಸಚಿವರು ಸೇರಿದಂತೆ ವಿವಿಧ ಸಮಾಜದ ಮುಖಂಡರು, ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ. ಹಂಪಿಯಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಯೋಗ ಸಾಧಕರು ಹಂಪಿ ಸ್ಮಾರಕಗಳ ಎದುರು ಯೋಗ ಮಾಡಲಿದ್ದಾರೆ.
Vijayanagara ಅಧಿಕಾರ ಚುಕ್ಕಾಣಿ ಹಿಡಿದ್ರು ಕಾಂಗ್ರೆಸ್ ಸದಸ್ಯರನ್ನು ಬಿಡದ ಬಿಜೆಪಿ
ಇನ್ನೂ ಭಾರತ ಸರ್ಕಾರದ ಆಯುಷ್ ಇಲಾಖೆ, ಮೊರಾರ್ಜಿ ದೇಸಾಯಿ ಯೋಗ ಕೇಂದ್ರ , ಶ್ವಾಸಕೇಂದ್ರ , ಪತಂಜಲಿ ಸಮಿತಿಗಳ ಸಹ ಯೋಗದಲ್ಲಿ ಹಂಪಿಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಲಿದೆ. ವಿಜಯನಗರದ ರೂವಾರಿ ಆನಂದ್ ಸಿಂಗ್ ಅವರು ಯೋಗ ದಿನಾಚರಣೆ ನಡೆಸಲು ಸಹಕಾರ ನೀಡಿದ್ದು, ಪ್ರತಿ ಸ್ಮಾರಕಗಳ ಎದುರು ಕಾರ್ಯಕ್ರಮ ನಡೆಯುವಾಗ ಉಪಸ್ಥಿತಿ ಇರಲಿದ್ದಾರಂತೆ.
ಇದೇ ಮೊದಲ ಬಾರಿ ಸ್ಮಾರಕಗಳ ಎದುರು ವಿಶ್ವ ಯೋಗ ದಿನಾಚರಣೆ
ಈ ಯೋಗ ಕಾರ್ಯಕ್ರಮ ಇಡೀ ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ರೂಪಿಸಲಾಗಿದೆ. ಯಾಕಂದ್ರೇ ಇದೇ ಮೊದಲ ಬಾರಿ ಐತಿಹಾಸಿಕ ಸ್ಮಾರಕದ ಮುಂದೆ ಯೋಗ ದಿನಾಚರಣೆ ನಡೆಯಲಿದೆ ಹಾಗಾಗಿ ಯೋಗ ಸಾಧಕರು ಆಸಕ್ತಿಯಿಂದ ಯೋಗ ಮಾಡಲು ತರಬೇತಿ ಕೂಡ ಪಡೆಯುತ್ತಿದ್ದಾರೆ. ಹಂಪಿಯ ಸ್ಥಳೀಯರು ಕೂಡ ಸಹಕಾರ ನೀಡಿದ್ದಾರೆ. ಇನ್ನೂ ರಾಜ್ಯದ 31 ಜಿಲ್ಲೆಗಳಲ್ಲೂ ಯೋಗ ಅಭಿಯಾನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಆಸಕ್ತಿ ತೋರಿದ್ದಾರೆ ಎಂದು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.