ಯಶವಂತಪುರ ಎಪಿಎಂಸಿ ಗೇಟ್ ಪಾಸ್‌ಗಳಿಗೆ ಅಧಿಕಾರಿಗಳಿಂದಲೇ ಹಣ ವಸೂಲಿ, ಅಕ್ರಮ ಬೆಳಕಿಗೆ

Published : Jul 24, 2025, 03:14 PM IST
APMC

ಸಾರಾಂಶ

ಯಶವಂತಪುರ ಎಪಿಎಂಸಿಯಲ್ಲಿ ಗೇಟ್ ಪಾಸ್‌ಗಳಿಗೆ ಹಣ ವಸೂಲಿ ಮಾಡುತ್ತಿದ್ದ ಅಕ್ರಮ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದರು ಎಂದು ವರದಿಯಾಗಿದೆ. ವರದಿ ಬಳಿಕ ಎಪಿಎಂಸಿ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು : ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಗೇಟ್ ಪಾಸ್‌ಗಳಿಗಾಗಿ ಹಣ ವಸೂಲಾತಿ ನಡೆಯುತ್ತಿದ್ದ ಅಕ್ರಮ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಸಿಬ್ಬಂದಿಯಿಂದ ಅನುಮತಿ ಪಾಸ್ ನೀಡುವ ಹೆಸರಿನಲ್ಲಿ ಹಣ ವಸೂಲಿಸಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸುತ್ತಿರಲಿಲ್ಲ. ಎಪಿಎಂಸಿ ಯಶವಂತಪುರ ಮಾರ್ಕೆಟ್ ನಲ್ಲಿ ಗೇಟ್ ಪಾಸ್ ಪರಿಶೀಲನೆ ನಡೆಸದೇ ಸೆಕ್ಯುರಿಟಿ ಕಡೆಯಿಂದ ಹಣ ವಸೂಲಿ ಮಾಡುತ್ತಿದ್ದ ಅಧಿಕಾರಿಗಳು, ಅಕ್ರಮದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಮುಖ ವರದಿ ಪ್ರಸಾರ ಮಾಡಿದ್ದು, ವರದಿ ಪ್ರಸಾರವಾದ ತಕ್ಷಣ ಎಪಿಎಂಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕ ಶಿವಾನಂದ ಕಾಪಸಿ ಹಾಗೂ ಸುಮಾರು 15ಕ್ಕೂ ಹೆಚ್ಚು ಅಧಿಕಾರಿಗಳು ದಿಢೀರ್ ಪರಿಶೀಲನೆಗೆ ಯಶವಂತಪುರ ಎಪಿಎಂಸಿ‌ಗೆ ಭೇಟಿ ನೀಡಿದರು.

ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ ಸ್ಪಷ್ಟನೆ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಪಿಎಂಸಿ ನಿರ್ದೇಶಕ ದೊರೆಸ್ವಾಮಿ ಅವರು, ಕ್ಯುರಿಟಿ ಸಿಬ್ಬಂದಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ವಿಷಯ ನಮಗೆ ಈವರೆಗೆ ಮಾಹಿತಿ ಇರಲಿಲ್ಲ. ಸುವರ್ಣ ನ್ಯೂಸ್‌ ನಲ್ಲಿ ಸುದ್ದಿ ಪ್ರಸಾರವಾದ ಬಳಿಕ ತಕ್ಷಣವೇ ಎಲ್ಲಾ ಗೇಟ್‌ಗಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಣ ಸಂಗ್ರಹಿಸಿದ ಸೆಕ್ಯುರಿಟಿ ಸಿಬ್ಬಂದಿಯನ್ನು ವಜಾ ಮಾಡುವಂತೆ ಸೂಚನೆ ನೀಡಿದ್ದೇನೆ. ಗೇಟ್ ಪಾಸ್ ಕೌಂಟರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸೆಕ್ಯುರಿಟಿ ಏಜೆನ್ಸಿ ಬದಲಾವಣೆ ಸಂಬಂಧವೂ ಮೇಲಾಧಿಕಾರಿಗಳಿಂದ ಆದೇಶ ಬಂದಿದೆ," ಎಂದು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ