Bangalore Traffic: ಕಿರಿಕಿರಿ ತರುವ ಟ್ರಾಫಿಕ್​ ಸಮಸ್ಯೆಗೆ ಶೀಘ್ರ ಮುಕ್ತಿ? ಶುರುವಾಗಿದೆ ಹೊಸ ಪ್ಲ್ಯಾನ್:​ ಏನಿದು?

Published : Jul 24, 2025, 02:16 PM ISTUpdated : Jul 24, 2025, 03:03 PM IST
Bangalore Traffic

ಸಾರಾಂಶ

ಬೆಂಗಳೂರು ಎಂದರೆ ಟ್ರಾಫಿಕ್​ ಕಿರಿಕಿರಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದರಿಂದ ಮುಕ್ತಿ ಪಡೆಯುವುದಕ್ಕಾಗಿ ಹೊಸ ಯೋಜನೆ ಶೀಘ್ರದಲ್ಲಿ ಶುರುವಾಗಲಿದೆ. ಏನದು? ಫುಲ್​ ಡಿಟೇಲ್ಸ್​ ಇಲ್ಲಿದೆ... 

ಬೆಂಗಳೂರು ಎಂದರೆ ಟ್ರಾಫಿಕ್​ ಕಿರಿಕಿರಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಮೆಟ್ರೊ, ಬಸ್ಸು, ಎಷ್ಟೇ ಹೆಚ್ಚಿಸಿದ್ರೂ, ರಸ್ತೆಗಳ ವಿಸ್ತರಣೆ ಎಷ್ಟೇ ಮಾಡಿದರೂ ಜನರಿಂದ ತುಂಬಿ ಹೋಗ್ತಿರೋ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪರಿಹಾರವೇ ಇಲ್ಲವೇ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ತಲುಪಿದೆ. ಇಂಥ ಸನ್ನಿವೇಶದಲ್ಲಿ ಬೆಂಗಳೂರಿಗರಿಗೆ ಹಾಗೂ ಬೆಂಗಳೂರಿಗೆ ಬರುವವರಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ ಈಸ್ ಮೈ ಟ್ರಿಪ್​ ಕೋ-ಫೌಂಡರ್​ ಆಗಿರುವ ಪ್ರಶಾಂತ್ ಪಿಟ್ಟಿ ಅವರು. ಈ ಬಗ್ಗೆ ಅವರು ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಒಂದು ವರ್ಷದೊಳಗೆ ಬೆಂಗಳೂರಿನ ಸಂಚಾರವನ್ನು ಶೇ. 25-30 ರಷ್ಟು ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ 10 ದಿನಗಳಲ್ಲಿ, ಬಿಟಿಪಿ, ಬಿಬಿಎಂಪಿ, ಸಿಪಿ, ಗೂಗಲ್ ತಂಡ, ಐಐಎಸ್‌ಸಿ ಪ್ರಾಧ್ಯಾಪಕರು, ವಿಜ್ಞಾನಿಗಳು, ರಸ್ತೆ ಎಂಜಿನಿಯರ್‌ಗಳು, ಸಂಚಾರ ಸಂಬಂಧಿತ ಉದ್ಯಮಿಗಳ ಆಯುಕ್ತರನ್ನು ಭೇಟಿಯಾಗಿರುವುದಾಗಿ ಹೇಳಿರುವ ಅವರು, ಹೊಸದಾಗಿ ನೇಮಕಗೊಂಡ ಮೂವರು ಆಯುಕ್ತರು ಸದ್ಯ ಹಾಲಿ ಪರಿಸ್ಥಿತಿಯನ್ನು ಹಾಗೂ ಸ್ಥಿತಿಗತಿಗಳನ್ನು ಪರಿಶೀಲಿಸಲು ತಮ್ಮನ್ನು ಆಹ್ವಾನಿಸಿರುವುದಾಗಿ ಹೇಳಿದ್ದಾರೆ. ಅಸ್ತಿತ್ವದಲ್ಲಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು ಒಟ್ಟಿಗೆ ಕೆಲಸ ಮಾಡಲು ಸಹಕರಿಸಲು ತಮ್ಮನ್ನು ಆಹ್ವಾನಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದಾಗಲೇ ಕಾರ್ಯಪ್ರವೃತ್ತರಾಗಿದ್ದು, ಕೆಲವು ಸಂಸ್ಥೆಗಳು ಮತ್ತು ಕಂಪೆನಿಗಳನ್ನು ಕೋರಿಕೊಳ್ಳಲಾಗಿದೆ. ಹಲವರು ಇದಕ್ಕಾಗಿ ಸಹಾಯ ಮಾಡಲು ಒಪ್ಪಿದ್ದಾರೆ. ಗೂಗಲ್, ಉಬರ್, ಓಲಾ, ರಾಪಿಡೊಗಳಿಗೆ ಡೇಟಾ ನೀಡಲು ವಿನಂತಿಸಿದ್ದೇವೆ, ಇದರಿಂದ ದಿನಕ್ಕೆ ಎಷ್ಟು ಮಂದಿ ಇದರ ಮೂಲಕ ಪ್ರಯಾಣಿಸುತ್ತಾರೆ ಎನ್ನುವ ಅಂದಾಜು ಸಿಗುತ್ತದೆ. ಇದರಿಂದ ಉತ್ತಮ ಮಾರ್ಗ ರೂಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲೆಲ್ಲಿ ಗುಂಡಿಗಳು ಇವೆ ಎಂಬುದನ್ನು ಜನರು ಗುರುತಿಸಿ ಅದನ್ನು ವರದಿ ಮಾಡಬಹುದಾದ ಅಪ್ಲಿಕೇಶನ್‌ಗಳನ್ನು ಸರ್ಕಾರ ಈಗಾಗಲೇ ಹೊಂದಿದೆ. ಅದರ ವ್ಯಾಪ್ತಿಯನ್ನು ಹೆಚ್ಚಿಸಲು ನಾವು ಆ ಅಪ್ಲಿಕೇಶನ್‌ನ ಮಾಲೀಕತ್ವವನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ಅಕ್ರಮ ಪಾರ್ಕಿಂಗ್, ಸಿಗ್ನಲ್ ಸಮಸ್ಯೆ, ಒನ್​ ವೇ ರೈಡಿಂಗ್​ ಮುಂತಾದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇದರಲ್ಲಿ ಸಲ್ಲಿಸಿರುವ ದೂರುಗಳನ್ನು ಪರಿಶೀಲಿಸಿ, ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಎಂದು ಪ್ರಶಾಂತ್ ಪಿಟ್ಟಿ ತಿಳಿಸಿದ್ದಾರೆ.

ಸರ್ಕಾರವು ಕೆಲವೊಂದು ಕಾಮಗಾರಿಗಾಗಿ ರಸ್ತೆಗಳನ್ನು ಮುಚ್ಚುತ್ತದೆ, ಆದರೆ ನಂತರ ಆ ರಸ್ತೆಯ ಪ್ಯಾಚ್‌ನಲ್ಲಿ ಮಳೆ ಬೀಳಲು ಪ್ರಾರಂಭಿಸುತ್ತದೆ ಮತ್ತು ಕೆಲಸ ಸ್ಥಗಿತಗೊಳ್ಳುತ್ತದೆ. ಇದು ಬಹುದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೂ ಮುಕ್ತಿನೀಡಲಾಗುವುದು. ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದಿರುವ ಅವರು, ಇದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುವಂತೆ ಜನರಿಗೆ ಆಹ್ವಾನಿಸಿದ್ದಾರೆ.

 

PREV
Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು