ಕುದ್ರೋಳಿ ತಂಡದ ಜಾದೂಗಾರ| ಯತೀಶ್ ಕೊರೋನಾಗೆ ಬಲಿ| ಜಾದೂಗಾರ ಕುದ್ರೋಳಿ ಗಣೇಶ್ ತಂಡದ ಸದಸ್ಯ
ಮೂಲ್ಕಿ(ಜು.11): ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ತಂಡದಲ್ಲಿದ್ದ ಯುವ ಜಾದೂಗಾರ ಯತೀಶ್ ಸಾಲ್ಯಾನ್ (35) ಮಹಾಮಾರಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಹೊಸಬೆಟ್ಟು ನಿವಾಸಿಯಾಗಿದ್ದ ಅವರು ನಾಲ್ಕು ದಿನಗಳ ಹಿಂದೆ ಶ್ವಾಸಕೋಶದ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಬಳಿಕ ಯತೀಶ್ ಕುಟುಂಬದವರು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಅವರು ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
undefined
ಕೊರೋನಾ ಓಡ್ಸೋಕೆ ಮ್ಯಾಜಿಕ್ ಮಾಡಿದ್ರು ಕುದ್ರೋಳಿ ಗಣೇಶ್, ಜನರಲ್ಲಿ ಜಾಗೃತಿ
ಮಾರ್ಗಸೂಚಿಯ ಅನುಸಾರ ಮರಣದ ಬಳಿಕ ಸ್ವಾಬ್ ಟೆಸ್ಟ್ ನಡೆಸಲಾಗಿತ್ತು. ಅದರ ವರದಿ ಬಂದಿದ್ದು ಕೊರೋನಾ ಸೋಂಕು ತಗಲಿರುವುದು ಸಾಬೀತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಕುದ್ರೋಳಿ ಗಣೇಶ್ ಅವರ ತಂಡದಲ್ಲಿ ಪಳಗಿದ್ದ ಯತೀಶ್ ಅನಂತರ ವಿದೇಶಕ್ಕೆ ತೆರಳಿ ಉದ್ಯೋಗದ ಜತೆ ಕ್ಲೋಸ್ ಅಪ್ ಜಾದೂ ಕಾರ್ಯಕ್ರಮ ನಡೆಸುತ್ತಿದ್ದರು. ಈ ಕಲೆಯಲ್ಲಿ ಅವರು ದೊಡ್ಡ ಮಟ್ಟದ ಪ್ರಖ್ಯಾತಿಯನ್ನೂ ಪಡೆದಿದ್ದರು ಎಂದು ಅವರ ತಂಡದ ಇತರ ಸದಸ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಸ್ವದೇಶಕ್ಕೆ ಮರಳಿದ ಇವರು ಇಲ್ಲಿ ಉದ್ಯೋಗ ಮಾಡುತ್ತಿದ್ದು ಅದರ ಜತೆಗೆ ಜಾದೂವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಮೃತರು ಪತ್ನಿ, ಮಗುವನ್ನು ಅಗಲಿದ್ದಾರೆ. ಯತೀಶ್ ಸಾವಿಗೆ ಹವ್ಯಾಸಿ ಜಾದೂಗಾರರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.