ಬಡಗು ತಿಟ್ಟಿನ ಚಂಡೆ ಮಾಂತ್ರಿಕ ಕೃಷ್ಣಯಾಜಿ ಇಡಗುಂಜಿ ನಿಧನ

By Kannadaprabha News  |  First Published Apr 25, 2020, 8:55 AM IST

ಬಡಗು ತಿಟ್ಟು ಯಕ್ಷಗಾನದ ಪ್ರಸಿದ್ಧ ಚಂಡೆ ವಾದಕ ಕೃಷ್ಣ ಯಾಜಿ ಇಡಗುಂಜಿ (73) ಶುಕ್ರವಾರ ಸಂಜೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಜೆ ಮನೆಯ ಸಮೀಪ ಕುಸಿದು ಬಿದ್ದ ಅವರನ್ನು ಹೊನ್ನಾವರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು.


ಕಾರವಾರ(ಏ.25): ಬಡಗು ತಿಟ್ಟು ಯಕ್ಷಗಾನದ ಪ್ರಸಿದ್ಧ ಚಂಡೆ ವಾದಕ ಕೃಷ್ಣ ಯಾಜಿ ಇಡಗುಂಜಿ (73) ಶುಕ್ರವಾರ ಸಂಜೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಜೆ ಮನೆಯ ಸಮೀಪ ಕುಸಿದು ಬಿದ್ದ ಅವರನ್ನು ಹೊನ್ನಾವರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು.

ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಚಂಡೆ, ಮದ್ದಳೆ ವಾದಕರಾಗಿ ಪ್ರಸಿದ್ಧರಾಗಿದ್ದ ಕೃಷ್ಣ ಯಾಜಿ ಇಡಗುಂಜಿ ಎಪ್ಪತ್ತರ ಹರೆಯದಲ್ಲೂ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದರು.

Tap to resize

Latest Videos

undefined

ಜಾತ್ರೆ, ಹಬ್ಬ, ಯಕ್ಷಗಾನಗಳಲ್ಲ ಸದ್ದಿಲ್ಲ... ಆನ್ ಲೈನ್ ಜಾತ್ರೆ ಇದೆಯಲ್ಲ

ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ ಕೆರಮನೆ, ಮಹಾಬಲ ಹೆಗಡೆ ಕೆರೆಮನೆ, ಬಳ್ಕೂರ ಕೃಷ್ಣ ಯಾಜಿ ಸೇರಿದಂತೆ ಹೆಸರಾಂತ ಕಲಾವಿದರಿಗೆ ಸಮರ್ಥವಾಗಿ ಚಂಡೆ ನುಡಿಸಿದ ಖ್ಯಾತಿ ಅವರದ್ದಾಗಿದೆ. ಅವರ ನಿಧನದಿಂದ ಬಡಗು ತಿಟ್ಟಿನ ಹಿಮ್ಮೇಳದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.

click me!