ಲಾಕ್‌ಡೌನ್‌ ಮಧ್ಯೆಯೂ ಕೊಟ್ಟೂರೇಶ್ವರನಿಗೆ ಪೂಜೆ ಸಲ್ಲಿಸಿದ ಶಾಸಕ ಪೂಜಾ​ರ್‌..!

Kannadaprabha News   | Asianet News
Published : Apr 25, 2020, 08:35 AM IST
ಲಾಕ್‌ಡೌನ್‌ ಮಧ್ಯೆಯೂ ಕೊಟ್ಟೂರೇಶ್ವರನಿಗೆ ಪೂಜೆ ಸಲ್ಲಿಸಿದ ಶಾಸಕ ಪೂಜಾ​ರ್‌..!

ಸಾರಾಂಶ

ಕೊರೋನಾ ರೋಗ ರಾಣಿಬೆನ್ನೂರು ಕ್ಷೇತ್ರ ವ್ಯಾಪ್ತಿಯ ಯಾರೊಬ್ಬರಿಗೂ ತಗುಲದಂತೆ ಪ್ರಾರ್ಥಿಸಿ ಕೊಟ್ಟೂರೇಶ್ವರ ಸ್ವಾಮಿಗೆ ಈ ಹಿಂದೆ ಹರಕೆ ಹೊತ್ತಿದ್ದ ಅರುಣಕುಮಾರ ಪೂಜಾರ| ಈ ಕಾರಣಕ್ಕಾಗಿ ಕೊಟ್ಟೂರಿಗೆ ಆಗಮಿಸಿ ಪೂಜೆ ಸಲ್ಲಿಸಿದ ಅರುಣಕುಮಾರ|  ಈ ಕುರಿತು ಅವರೇ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಪೋಟೋ ಸಮೇತ ಪ್ರಕಟಿಸಿದ್ದಾರೆ|

ಕೊಟ್ಟೂರು(ಏ.25): ಮಾರಕ ಕೊರೋನಾ ರೋಗ ಹರಡದೆ ಕೂಡಲೇ ನಿಯಂತ್ರಣಕ್ಕೆ ಬರಲೆಂದು ಪ್ರಾರ್ಥಿಸಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಅರುಣಕುಮಾರ ಪೂಜಾರ್‌ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಪ್ರಸಿದ್ಧ ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.

ಕೊರೋನಾ ರೋಗ ರಾಣಿಬೆನ್ನೂರು ಕ್ಷೇತ್ರ ವ್ಯಾಪ್ತಿಯ ಯಾರೊಬ್ಬರಿಗೂ ತಗುಲದಂತೆ ಪ್ರಾರ್ಥಿಸಿ ಕೊಟ್ಟೂರೇಶ್ವರ ಸ್ವಾಮಿಗೆ ಈ ಹಿಂದೆ ಹರಕೆ ಹೊತ್ತಿದ್ದಾಗಿ ಹೇಳಿಕೊಂಡಿರುವ ಅರುಣಕುಮಾರ ಪೂಜಾರ ಈ ಕಾರಣಕ್ಕಾಗಿ ಇದೀಗ ಅಮಾವಾಸ್ಯೆಯ ದಿನವಾದ ಗುರುವಾರ ಕೊಟ್ಟೂರಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಈ ಕುರಿತು ಅವರೇ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಪೋಟೋ ಸಮೇತ ಪ್ರಕಟಿಸಿದ್ದಾರೆ.

ರಂಜಾನ್‌ ಹಬ್ಬ: 'ದರ್ಗಾ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ'

ಲಾಕ್‌ಡೌನ್‌ ಘೋಷಣೆಯ ಈ ದಿನದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠ ದೇವಸ್ಥಾನ ಕಳೆದ 2 ತಿಂಗಳಿಂದ ಭಕ್ತರ ಒಳ ಪ್ರವೇಶಕ್ಕೆ ನಿಷೇಧವಿದೆ. ಹೀಗಿದ್ದರೂ ಶಾಸಕ ಅರುಣಕುಮಾರ ಪೂಜಾರ್‌ ಲಾಕ್‌ಡೌನ್‌ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹಿರೇಮಠದೊಳಗೆ ಪ್ರವೇಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಇಲ್ಲಿನ ಭಕ್ತರು ಪ್ರಶ್ನಿಸಿದ್ದಾರೆ.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!