
ಸಿದ್ದಾಪುರ (ಉತ್ತರ ಕನ್ನಡ): ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ತಟ್ಟಿವೀರಭದ್ರರಾಗಿ ರಂಗದಲ್ಲಿ ಕಾಣಿಕೊಂಡು ಯಕ್ಷ ರಸಿಕರ ಗಮನ ಸೆಳೆದರು.ತಾಲೂಕಿನ ಕಲಗದ್ದೆಯಲ್ಲಿ ಆರಂಭಗೊಂಡ ವಿನಾಯಕ ಕಲ್ಯಾಣ ಲೀಲೋತ್ಸವದ ಪ್ರಥಮ ದಿನ ದಕ್ಷಯಜ್ಞ ಆಖ್ಯಾನದಲ್ಲಿ ತಟ್ಟಿಸಹಿತ ವೀರಭದ್ರನಾಗಿ ರಂಗಸ್ಥಳದ ಬಿಸಿ ಏರಿಸಿದರು.ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಪ್ರದರ್ಶನ ಕಂಡ ದಕ್ಷಯಜ್ಞ ಆಖ್ಯಾನ ಮೆಚ್ಚುಗೆಗೆ ಪಾತ್ರವಾಯಿತು.
ನಿರೀಶ್ವರ ಯಾಗವನ್ನು ನಡೆಸುವ ದಕ್ಷನ ಸಂಹಾರಕ್ಕೆ ಪರಂಪರಾಗತ ತಟ್ಟಿವೀರಭದ್ರನಾಗಿ ಉತ್ತರ ಕನ್ನಡದ ಪರಂಪರೆ ಹಳೆ ನೆನಪುಗಳನ್ನು ಡಾ. ಜಿ.ಎಲ್. ಹೆಗಡೆ ಮೂಡಿಸಿದರು.
ದಾಕ್ಷಾಯಿಣಿಯಾಗಿ ಇದೇ ಪ್ರಥಮ ಬಾರಿಗೆ ರಂಗಭೂಮಿ ಕಲಾವಿದೆ (Theatre Artiste) ಶ್ವೇತಾ ಅರೆಹೊಳೆ ಪಾತ್ರದ ಅರ್ಥಪೂರ್ಣತೆ ಹೆಚ್ಚಿಸಿದರು. ಈಶ್ವರನಾಗಿ ವಿನಾಯಕ ಹೆಗಡೆ ಕಲಗದ್ದೆ, ದೇವೇಂದ್ರನಾಗಿ ವಿನಯ ಹೊಸ್ತೋಟ, ದಕ್ಷನಾಗಿ ವೆಂಕಟೇಶ ಬೊಗ್ರಿಮಕ್ಕಿ, ಬ್ರಾಹ್ಮಣನಾಗಿ ನಾಗೇಂದ್ರ ಮುರೂರು, ಶಂಕರ ದಾನಮಾವ ಇತರರು ಪಾಲ್ಗೊಳ್ಳುವರು. ಹಿಮ್ಮೇಳದಲ್ಲಿ ಭಾರ್ಗವ ಹೆಗಡೆ, ಶ್ರೀಪಾದ ಮೂಡಗಾರ, ಆದಿತ್ಯ ಕೇಶೈನ ಕಾಣಿಸಿಕೊಂಡರು.
ಉತ್ತರದಲ್ಲಿ ಅನುರಣಿಸಲು ಹೊರಟಿದೆ ಕರ್ನಾಟಕದ ಯಕ್ಷಗಾನ ಕಲೆ
ಸುರತ್ಕಲ್‌ನಲ್ಲಿ ‘ಯಕ್ಷಸಿರಿ’ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಚಾಲನೆ
ಮೂಲ್ಕಿ: ಯಕ್ಷಗಾನ ಸೇವೆ ದೇವರ ಸೇವೆಯಿದ್ದಂತೆ. ಹಿಂದೆ ಯಕ್ಷಗಾನ ಕಲಾವಿದರ ಬಗ್ಗೆ ತಾತ್ಸಾರವಿತ್ತು. ಈಗ ವಿದ್ಯಾವಂತ ಯುವಜನತೆ ಯಕ್ಷಗಾನ ಕಲೆಯತ್ತ ಆಸಕ್ತಿ ವಹಿಸುತ್ತಿದ್ದು ಯಕ್ಷ ಕಲೆಯನ್ನು ಕ್ಷಯವಾಗಿಸುವ ಬದಲಿಗೆ ಅಕ್ಷಯವಾಗಿಸುವ ಕಾರ್ಯವಾಗಬೇಕು ಎಂದು ಪಂಚ ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಹೇಳಿದರು.
ಸುರತ್ಕಲ್ ಬಂಟರ ಸಂಘದ ಸಹಯೋಗದಲ್ಲಿ ಸುರತ್ಕಲ್‌ನ ಬಂಟರ ಭವನದಲ್ಲಿ ಆರಂಭಗೊಂಡ ಯಕ್ಷಸಿರಿ ಯಕ್ಷಗಾನ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ (Bunts Sangha) ಅಧ್ಯಕ್ಷ ಸುಧಾಕರ ಎಸ್. ಪೂಂಜ ವಹಿಸಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ (Karnataka Yakshagana Academ) ಸದಸ್ಯ ನವನೀತ್ ಶೆಟ್ಟಿಕದ್ರಿ ಮಾತನಾಡಿ, ಸುರತ್ಕಲ್‌ಗೂ ಯಕ್ಷಗಾನಕ್ಕೂ ತಲೆತಲಾಂತರಗಳ ಇತಿಹಾಸವಿದ್ದು ಕುಂಬ್ಳೆ ಸುಂದರ ರಾವ್ ಅವರಂತಹ ಯಕ್ಷಗಾನ ಕಲಾವಿದರು ಚುನಾವಣೆಗೆ ನಿಂತು ಗೆದ್ದಿದ್ದರು. ಅವರ ಗೆಲುವಿಗೆ ಪಕ್ಷಕ್ಕಿಂತ ಜಾಸ್ತಿಯಾಗಿ ಅವರೊಬ್ಬ ಯಕ್ಷಗಾನ ಕಲಾವಿದರು ಅನ್ನುವುದೇ ಕಾರಣವಾಗಿತ್ತು ಎಂದರು.
ಇತ್ತೀಚಿಗೆ ನಿಧನರಾದ ಕಟೀಲು ಮೇಳದ ಪ್ರಧಾನ ಭಾಗವತರಾದ ಪ್ರಸಾದ ಬಲಿಪ ಅವರಿಗೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು. ಕಟ್ಲ ಲೀಲಾಧರ ಶೆಟ್ಟಿ, ಅಗರಿ ಸಂಸ್ಮರಣಾ ವೇದಿಕೆಯ ಅಧ್ಯಕ್ಷ ಅಗರಿ ರಾಘವೇಂದ್ರ ರಾವ್ ಸುರತ್ಕಲ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಮಾಧವ ಭಂಡಾರಿ ಕುಳಾಯಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಬಿ.ಇ., ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕೇಂದ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಯಕ್ಷಗುರು ರಾಕೇಶ್ ರೈ ಅಡ್ಕ ಮತ್ತಿತರರಿದ್ದರು.
ಯಕ್ಷಗಾನದಲ್ಲಿ ಮೂಡಿ ಬಂದ ಶ್ರೀವಲ್ಲಿ
ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿಮುಂಚೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿಕುಡುಂಬೂರು, ಸಂಘಟನಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಶೆಟ್ಟಿಕಾಟಿಪಳ್ಳ, ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ಯಕ್ಷ ಸಿರಿ ಸಹಸಂಚಾಲಕಿ ಕೇಸರಿ ಎಸ್. ಪೂಂಜಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರನ್ನು ಗೌರವಿಸಲಾಯಿತು. ಯಕ್ಷಸಿರಿ ಸುರತ್ಕಲ್ ಬಂಟರ ಸಂಘದ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿಸ್ವಾಗತಿಸಿದರು. ಬಂಟರ ಸಂಘ ಸುರತ್ಕಲ್ ನಿಕಟಪೂರ್ವಾಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕಯ್ಯ ಶೆಟ್ಟಿಮುಂಚೂರು ವಂದಿಸಿದರು. ರಾಜೇಶ್ವರಿ ಡಿ. ಶೆಟ್ಟಿನಿರೂಪಿಸಿದರು.