ಮೈಷುಗರ್ ಖಾಸಗೀಕರಣಕ್ಕೆ ಯದುವೀರ್ ಬೆಂಬಲ..!

Suvarna News   | Asianet News
Published : Jun 16, 2020, 01:17 PM IST
ಮೈಷುಗರ್ ಖಾಸಗೀಕರಣಕ್ಕೆ ಯದುವೀರ್ ಬೆಂಬಲ..!

ಸಾರಾಂಶ

ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ಸೂಚಿಸಿದ್ದಾರೆ. ಖಾಸಗೀಕರಣಕ್ಕೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭ ಮೈಸೂರು ರಾಜವಂಶಸ್ಥ ಯದುವೀರ್ ಅಭಿಪ್ರಾಯ ಮಹತ್ವ ಪಡೆದಿದೆ.

ಮೈಸೂರು(ಜೂ.16): ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ಸೂಚಿಸಿದ್ದಾರೆ. ಖಾಸಗೀಕರಣಕ್ಕೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭ ಮೈಸೂರು ರಾಜವಂಶಸ್ಥ ಯದುವೀರ್ ಅಭಿಪ್ರಾಯ ಮಹತ್ವ ಪಡೆದಿದೆ.

ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ವ್ಯಕ್ತಪಡಿಸಿದ್ದು, ಫೇಸ್‌ಬುಕ್ ನಲ್ಲಿ ಕಾರ್ಖಾನೆ ಖಾಸಗೀಕರಣಕ್ಕೆ ಬೆಂಬಲ ನೀಡಿ ಪೋಸ್ಟ್ ಮಾಡಿದ್ದಾರೆ.

ಯದುವೀರ್‌ ಇನ್ನೂ ಬಾಲಕ, ತಾಯಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸ್ತಾನೆ: ಮಾಜಿ ಮೇಯರ್

ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಕಾರ್ಖಾನೆಯ ಖಾಸಗೀಕರಣಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೆ ಈ ಪ್ರತಿರೋಧ ಕಳವಳಕ್ಕೆ ಕಾರಣವಾಗಿದೆ. ರೈತರು ಬೆಳೆದ ಕಬ್ಬನ್ನು ಮಾರಾಟ ಮಾಡಲು ಕಾರ್ಖಾನೆಯ ಅಗತ್ಯವಿದೆ. ಕಾರ್ಖಾನೆ ನಡೆಸಲು ಸರ್ಕಾರದ ವೈಫಲ್ಯ ಹಾಗೂ ಸಂಪೂರ್ಣ ಖಾಸಗೀಕರಣ ವಿರುದ್ಧ ಸಾರ್ವಜನಿಕರ ಭಾವನೆ ಒಂದು ಆಯ್ಕೆ ಎಂದಿದ್ದಾರೆ.

ಮೈಷುಗರ್‌ ಕಾರ್ಖಾನೆ ಪರಿಶೀಲಿಸಿದ ಸಚಿವರು, ಸಂಸದೆ: ಇಲ್ಲಿವೆ ಫೋಟೋಸ್

ಆದರೆ ಕಾರ್ಯಾಚರಣೆ ಹಾಗೂ ನಿರ್ವಹಣೆ ಅಡಿಯಲ್ಲಿ ಕಾರ್ಖಾನೆ ನಡೆಸಬೇಕಿದೆ. ಖಾಸಗೀಕರಣದ ವಿರುದ್ಧ ಸಾರ್ವಜನಿಕರ ಭಾವನೆಯನ್ನು ತೃಪ್ತಿಪಡಿಸಬೇಕಿದೆ. ಆ ಮೂಲಕ ಕಾರ್ಖಾನೆ ಸಮೃದ್ದಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಖಾಸಗೀಕರಣವಾದರೆ ಮಂಡ್ಯ ಜಿಲ್ಲೆ ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸಬೇಕಾಗಿಲ್ಲ ಎಂದು ಖಾಸಗೀಕರಣಕ್ಕೆ ಫೇಸ್‌ಬುಕ್‌ ಮೂಲಕ ತಮ್ಮ ಬೆಂಬಲ ನೀಡಿ ಯದುವೀರ್ ಪೋಸ್ಟ್‌ ಹಾಕಿದ್ದಾರೆ. ಮೈಶುಗರ್ ಕಾರ್ಖಾನೆ ಮೈಸೂರಿನ ಮಹಾರಾಜರು ಸ್ಥಾಪಿಸಿದ ಸಕ್ಕರೆ ಕಾರ್ಖಾನೆಯಾಗಿದೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!